ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ 16.22 ಲಕ್ಷ ದಂಡ ವಸೂಲಿ

|
Google Oneindia Kannada News

ಬೆಂಗಳೂರು, ಜನವರಿ 15: ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಒಂದೇ ದಿನ 16.22 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ಬೆಂಗಳೂರು ವಿಭಾಗದಲ್ಲಿ ಈ ಹಿಂದೆಯೂ ಇದೇ ತೆರದಲ್ಲಿ ಟಿಕೆಟ್ ತಪಾಸಣೆ ಅಭಿಯಾನ ನಡೆಸಲಾಗಿತ್ತು. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಟಿಕೆಟ್ ರಹಿತ ಪ್ರಯಾಣಿಕರು ಸಿಕ್ಕಿಬಿದ್ದಿರಲಿಲ್ಲ. ಮೊದಲ ಬಾರಿಗೆ 16.22 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಫೇಸ್ ರೆಕಗ್ನಿಷನ್ ಸಿಸ್ಟಂಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಫೇಸ್ ರೆಕಗ್ನಿಷನ್ ಸಿಸ್ಟಂ

2,841 ಮಂದಿ ಟಿಕೆಟ್ ಇಲ್ಲದ ಕಾರಣಕ್ಕೆ ದಂಡ ತೆತ್ತಿದ್ದಾರೆ. 113 ಮಂದಿ ಅಭಿಯಾನದಲ್ಲಿ ಭಾಗವಹಿಸಿದ ರೈಲ್ವೆ ಇಲಾಖೆಯ ವಾಣಿಜ್ಯ ಸಿಬ್ಬಂದಿ, 10- ಭಾಗವಹಿಸಿದ ರೈಲ್ವೆ ಇಲಾಖೆಯ ರಕ್ಷಣಾ ಸಿಬ್ಬಂದಿ, 4 ಮಂದಿ ಅಧಿಕಾರಿಗಳು ಮೇಲ್ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು.

16 Lakhs Fine Collected From Ticketless Passengers In The Train

ಪ್ಲಾಟ್‌ಫಾರಂ ಟಿಕೆಟ್ ಇಲ್ಲದೆ ನಿಲ್ದಾಣ ಪ್ರವೇಶಿಸಿದವರಿಗೆ 250 ರೂ ದಂಡ ಹಾಕಲಾಗುತ್ತದೆ. ಅವರಿಂದ ಪ್ಲಾಟ್‌ಫಾರಂ ಟಿಕೆಟ್ ಮೊತ್ತ(10 ರೂ.) ಸೇರಿಸಿ ದಂಡ ವಸೂಲಿ ಮಾಡಲಾಗುತ್ತದೆ.

ಟಿಕೆಟ್ ಇಲ್ಲದೆಯೇ ರೈಲಿನಲ್ಲಿ ಪ್ರಯಾಣಿಸಿದರೆ , ಕನಿಷ್ಠ 250 ರೂ. ದಂಡ ಹಾಗೂ ಪ್ರಯಾಣದ ದೂರಕ್ಕೆ ಅನುಗುಣವಾಗಿ ಹೆಚ್ಚುವರಿ ದಂಡ ವಸೂಲಿ ಮಾಡಲಾಗುತ್ತದೆ.

English summary
16.22 lakh in a single day from ticketless passengers on the train Fines have been paid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X