ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರಿಶ್ಚಿಯನ್ ರ ಆರಾಧ್ಯ ದೈವ ಏಸುವನ್ನು ಶಿಲುಬೆಗೆ ಏರಿಸಿರಲಿಲ್ಲವಂತೆ!

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 24: ಏಸು ಕ್ರಿಸ್ತನನ್ನು ಶಿಲುಬೆಗೆ ಏರಿಸಲಾಯಿತು ಎಂಬ ನಂಬಿಕೆಯನ್ನೇ ಬುಡಮೇಲು ಮಾಡುವ ಸಂಗತಿಯೊಂದು ಇದೀಗ ಬಹಿರಂಗವಾಗಿದೆ. 1500 ವರ್ಷಗಳ ಹಿಂದಿನ ಬೈಬಲ್ ಬೇರೆಯದೇ ಕತೆಯನ್ನು ಹೇಳುತ್ತಿದೆ. ಏಸುವನ್ನು ಶಿಲುಬೆಗೆ ಏರಿಸಿಲ್ಲ, ಏಸುವನ್ನು ದೇವರೆಂದು ಪರಿಗಣಿಸಲು ಸಾಧ್ಯವಿಲ್ಲ. ಆತ ಕೇವಲ ಧರ್ಮ ಪ್ರಸಾರಕ ಅಷ್ಟೇ ಎಂಬುದು ಬೈಬಲ್ ಬಿಚ್ಚಿಡುವ ವಿಷಯ.

ಯೇಸುವಿನ ಕುರಿತಾಗಿ ಬೇರೊಂದು ಸತ್ಯವನ್ನು ತೆರೆದಿಟ್ಟ 1500 ವರ್ಷಗಳ ಬೈಬಲ್ 'ಗಾಸ್ಪಲ್ ಆಫ್ ಬರ್ನಾಪಸ್' ಎಂಬ ನಾಮಾಂಕಿತ ಹೊಂದಿದ್ದು, ಇದು 28 ಮಿಲಿಯನ್ ಡಾಲರ್ ಬೆಲೆಯುಳ್ಳದ್ದಾಗಿದೆ. ಈ ಬೈಬಲ್ ನ್ನು ಕದ್ದೊಯ್ಯುತ್ತಿದ್ದ ಕಿಡಿಗೇಡಿಗಳಿಂದ ಮೆಡಿಟರೇನಿಯನ್ ಆಪರೇಷನ್ ಮೂಲಕ ವಶಪಡಿಸಿಕೊಳ್ಳಲಾಗಿದ್ದು ಇದೀಗ ತುರ್ಕಿಯ 'ಅಂಕರ'ಎಂಬಲ್ಲಿದೆ.[ಶಾಂತಿ ಪ್ರೀತಿ ಸಹನೆ, ಮಾನವೀಯತೆಯ ಗುಡ್ ಫ್ರೈಡ್ ]

1500 Year Old Bible Claims Jesus Christ Was Not Crucified- Vatican Shocked

ಹೊಸ ಬೈಬಲ್ ನಲ್ಲಿ ಇರುವುದಾದರೂ ಏನು?

'ಗಾಸ್ಪಲ್ ಆಫ್ ಬರ್ನಾಪಸ್' ಬೈಬಲ್ ನ ಪುಟಗಳು ಚರ್ಮದಿಂದ ಮಾಡಿದ್ದಾಗಿದ್ದು, ಇದರಲ್ಲಿನ ಅಕ್ಷರಗಳು ಸಂಪೂರ್ಣ ಬಂಗಾರಮಯವಾಗಿದೆ. ಈ ಬೈಬಲ್ ನ ಪ್ರತಿಯೊಂದು ಕತೆಯೂ ಕ್ರಿಶ್ಚಿಯನ್ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಕ್ರಿಶ್ಚಿಯನ್ ಧರ್ಮಪ್ರಚಾರಕ ಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಏಸುವನ್ನು ಶಿಲುಬೆಗೆ ಏರಿಸಲಿಲ್ಲ. ಅವರು ಜೀವಂತವಾಗಿ ಸ್ವರ್ಗ ಸೇರಿದರು. ಹಾಗಾಗಿ ಆತ ದೇವರ ಮಗ ಆಗಲು ಸಾಧ್ಯವಿಲ್ಲ. ಆತನನ್ನು ಧರ್ಮಪ್ರಚಾರಕನೆಂದು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ.[ದೇವರು ಇನ್ನಿಲ್ಲ.ಅವನಿಗೆ ವಯಸ್ಸಾಗಿತ್ತು,ಮಕ್ಕಳಿರಲಿಲ್ಲ]

ಹಿಂದಿನ ಬೈಬಲ್ ನಲ್ಲಿ ಇರುವುದಾದರೂ ಏನು?

ಕ್ರಿಶ್ಚಿಯನ್ ರ ಪವಿತ್ರ ಗ್ರಂಥ ಬೈಬಲ್. ಆರಾಧ್ಯ ದೈವ ಯೇಸು. ಆತ ಜೀವಂತವಾಗಿಯೇ ಶಿಲುಬೆ ಏರಿದ ಕಾರಣ ಕ್ರಿಶ್ಚಿಯನ್ನರ ಪ್ರಮುಖ ಆರಾಧಕನಾಗಿ ಉಳಿದುಕೊಂಡ ಎಂದು ಕ್ರಿಶ್ಚಿಯನ್ನರ ಮೂಲ ಬೈಬಲ್ ಪ್ರತಿಪಾದನೆ ಮಾಡುತ್ತದೆ.

English summary
This bible, dating as far back as 1,500 years.It give details the Gospel of Barnabas, a disciple of Jesus Chris and shows that 'Jesus wasn’t actually crucified and doesn’t claim him to be the son of God, but instead a prophet'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X