ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಹೊಸ ಯೋಜನೆ ತಯಾರಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 10 : ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಯೋಜನೆಯೊಂದನ್ನು ಸಿದ್ಧಗೊಳಿಸಲಾಗಿದೆ. 2031ಕ್ಕೆ ನಗರದ ಜನಸಂಖ್ಯೆ, ವಾಹನಗಳ ಸಂಖ್ಯೆ ಎಷ್ಟಾಗಬಹುದು ಎಂಬ ಅಂದಾಜಿನ ಮೇಲೆ ಈ ಯೋಜನೆ ತಯಾರಾಗಿದೆ.

ಐಡಿಸಿಎಲ್ (ಕರ್ನಾಟಕ), ಬಿಎಂಆರ್‌ಸಿಎಲ್, ನಗರ ಭೂ ಸಾರಿಗೆ ನಿರ್ದೇಶನಾಲಯ ಜಂಟಿಯಾಗಿ ಈ ಯೋಜನೆ ತಯಾರು ಮಾಡಿವೆ. ನಗರದ ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ 2031ರ ವೇಳೆಗೆ 15 ಸಾವಿರ ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸಬೇಕು ಎಂದು ಯೋಜನೆ ಹೇಳಿದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ

202 ಕಿ. ಮೀ. ಪ್ರತ್ಯೇಕ ಬಸ್ ಪಥ, 40 ಬಸ್ ಡಿಪೋ, ಹೊರವರ್ತುಲ ರಸ್ತೆಗಳಲ್ಲಿ ಟಿಟಿಎಂಸಿಗಳ ನಿರ್ಮಾಣ ಸೇರಿದಂತೆ ನಗರದ ಸಂಚಾರ ಸಮಸ್ಯೆಗೆ 15 ವಿವಿಧ ಅಂಶಗಳನ್ನು ಪಟ್ಟಿ ಮಾಡಲಾಗಿದೆ. ಜನರು ಸಹ ಮೈ ಬಿಎಂಟಿಸಿ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಈ ವರದಿ ಬಗ್ಗೆ ಪ್ರತಿಕ್ರಿಯೆ, ಸಲಹೆ ನೀಡಬಹುದು.

6 ಸಾವಿರ ರಸ್ತೆ ಗುಂಡಿ ಮುಚ್ಚಿದ ಬಿಬಿಎಂಪಿ ಇತ್ತ ನೋಡಲಿ! 6 ಸಾವಿರ ರಸ್ತೆ ಗುಂಡಿ ಮುಚ್ಚಿದ ಬಿಬಿಎಂಪಿ ಇತ್ತ ನೋಡಲಿ!

15 Thousand Strong BMTC Fleet Need To Bengaluru City By 2031

2021ಕ್ಕೆ 8,634 ಬಸ್, 2025ಕ್ಕೆ 12,134 ಬಸ್, 2031ಕ್ಕೆ 15,134 ಬಸ್‌ಗಳು ನಗರದಲ್ಲಿ ಸಂಚಾರ ನಡೆಸಬೇಕು. ಚಿಕ್ಕ ಬಸ್‌ಗಳು, ಎಲೆಕ್ಟ್ರಿಕ್ ಬಸ್, ನಗರದಲ್ಲಿ ಎಲ್ಲಾ ಬಡಾವಣೆ, ಮೆಟ್ರೋ ನಿಲ್ದಾಣ ಸಂಪರ್ಕಿಸುವ ಸಣ್ಣ ಬಸ್‌ ಪರಿಚಯಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರು; ಸುಮನಹಳ್ಳಿ ಫ್ಲೈ ಓವರ್ ಮತ್ತೆ ಬಂದ್ ಬೆಂಗಳೂರು; ಸುಮನಹಳ್ಳಿ ಫ್ಲೈ ಓವರ್ ಮತ್ತೆ ಬಂದ್

ನಗರದ 11 ಪ್ರಮುಖ ಪ್ರದೇಶಗಳಲ್ಲಿ ಕಾರಿಡಾರ್‌ಗಳ ನಿರ್ಮಾಣವಾಬೇಕು. ಹಲವು ರಸ್ತೆಗಳನ್ನು ಅಗಲೀಕರಣ ಮಾಡಬೇಕು. ಹೊರವರ್ತುಲ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲು ಪ್ರಯತ್ನ ನಡೆಸಬೇಕು ಎಂದು ವರದಿಯಲ್ಲ ವಿವರಣೆ ನೀಡಲಾಗಿದೆ.

ಪ್ರಸ್ತುತ ಬಿಎಂಟಿಸಿ 6,634 ಬಸ್‌ಗಳನ್ನು ಹೊಂದಿದೆ. 2,500 ಮಾರ್ಗದಲ್ಲಿ ಬಸ್‌ಗಳು ಸಂಚಾರ ನಡೆಸುತ್ತಿವೆ. ನಗರದಲ್ಲಿ 45 ಬಸ್ ಡಿಪೋ, 10 ಟಿಟಿಎಂಸಿಗಳಿವೆ. ಎರಡು ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ನಡೆಸುತ್ತಿವೆ.

2035ರ ವೇಳೆಗೆ ಬೆಂಗಳೂರು ನಗರದಲ್ಲಿ 803 ಕಿ. ಮೀ. ಸಾರ್ವಜನಿಕ ಸಂಚಾರ ವ್ಯವಸ್ಥೆಯ ಜಾಲ ನಿರ್ಮಾಣವಾಗಬೇಕಿದೆ ಎಂದು ವರದಿ ಹೇಳಿದೆ. ಬೆಂಗಳೂರು ನಗರದ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವ ವಿವಿಧ ಸಂಸ್ಥೆಗಳನ್ನು ಇದನ್ನು ಹೇಗೆ ನಿಭಾಯಿಸಲಿವೆ? ಕಾದು ನೋಡಬೇಕು.

English summary
As per the Draft Comprehensive Mobility Plan Bengaluru city need 15000 string BMTC fleet by 2031 and 202 Km priority bus lane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X