• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕ ಬಂದ್‌: ಭದ್ರತೆ ಹೇಗಿರುತ್ತೆ? ಬಂದ್‌ ಮಾಡಲಿಕ್ಕೆ ಅನುಮತಿ ಪಡೆದಿದ್ದಾರಾ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 04: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಸರ್ಕಾರದ ಆದೇಶದ ವಿರುದ್ಧ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5 ರಂದು ರಾಜ್ಯಾದ್ಯಾಂತ ಬಂದ್ ಗೆ ಕರೆ ನೀಡಿವೆ. ಬೆಂಗಳೂರಿಗೂ ಬಂದ್ ನ ಬಿಸಿ ತಟ್ಟಲಿದ್ದು, ಕಾನೂನು ಸುರಕ್ಷತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ರಾಜಧಾನಿಗೆ ಹದಿನೈದು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಂದ್‌ ಹಾಗೂ ಪೊಲೀಸ್ ಭದ್ರತೆ ಕುರಿತು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಕೆಲವು ಮಹತ್ವದ ವಿಷಯ ಹಂಚಿಕೊಂಡಿದ್ದಾರೆ.

ಕನ್ನಡಪರ ಸಂಘಟನೆಗಳು ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಅವರು ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಗುರುವಾರ ನಡೆದ ಸಭೆಯಲ್ಲಿ ಚರ್ಚಿಸಿದ್ದರು.

ಕರ್ನಾಟಕ ಬಂದ್: ಮನವಿ ರೂಪದ ಎಚ್ಚರಿಕೆ ನೀಡಿದ ಯಡಿಯೂರಪ್ಪ!ಕರ್ನಾಟಕ ಬಂದ್: ಮನವಿ ರೂಪದ ಎಚ್ಚರಿಕೆ ನೀಡಿದ ಯಡಿಯೂರಪ್ಪ!

ಸಭೆಯಲ್ಲಿ ಡಿಸಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಇತರೆ ಐಪಿಎಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಕನ್ನಡ ಭಾಷೆ ವಿಚಾರವಾಗಿ ನಡೆಯುತ್ತಿರುವ ಬಂದ್‌ ಕಾರಣದಿಂದ ಕಲ್ಲು ತೂರಾಟ ಮಾಡಿದರೆ, ಅಥವಾ ಬಲವಂತವಾಗಿ ಅಂಗಡಿ ಮಂಗಟ್ಟು ಮುಚ್ಚಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಿದ್ದಾರೆ ಎಲ್ಲನಾಗಿದೆ.

ನಾಳೆ ನಡೆಯಲಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ನಗರ ಪೊಲೀಸ್ ಕಮಲಪಂತ್ ಅವರು ಸುದ್ದಿಗಾರರ ಜತೆ ಮಾತನಾಡಿದರು. ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು ಹದಿನೈದು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್: ಏನಿರುತ್ತೆ, ಏನಿರಲ್ಲ?ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್: ಏನಿರುತ್ತೆ, ಏನಿರಲ್ಲ?

ಐವರು ಜಂಟಿ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಆಯುಕ್ತರು ಬಂದೋಬಸ್ತ್ ಮೇಲುಸ್ತುವಾರಿ ವಹಿಸಲಿದ್ದಾರೆ. ನಗರದ ಎಲ್ಲಾ ಹನ್ನೆರಡು ಡಿಸಿಪಿಗಳು ಹಾಗೂ ಎಸಿಪಿಗಳು ಆಯಾ ವಿಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಫಾಡಲು ಬಿಗಿ ಬಂದೋಬಸ್ತ್ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದರು.

   ಹೊಸ ವರ್ಷದ ಆಸೆಗೆ ಬ್ರೇಕ್ ಹಾಕಿದ್ದು ಯಾರು ಗೊತ್ತಾ?? | Oneindia Kannada

   ಸಿವಿಲ್ ಪೊಲೀಸ್ ಜತೆಗೆ ನಗರದೆಲ್ಲೆಡೆ 33 ಕೆಎಸ್ಆರ್ಪಿ ಹಾಗೂ 37 ಸಿಎಆರ್ ತುಕಡಿಗಳನ್ನು ಸಹ ಕರೆಸಿಕೊಳ್ಳಲಾಗುತ್ತಿದೆ. ನಗರದೆಲ್ಲಡೆ ಪೊಲೀಸ್ ಅಧಿಕಾರಿಗಳು ಗಸ್ತಿನಲ್ಲಿದ್ದಾರೆ. ಕಾನೂನು ಕೈಗೆ ತೆಗೆದುಕೊಂಡು ಜನ ಸಾಮಾನ್ಯರ ನೆಮ್ಮದಿಗೆ ಭಂಗ ತಂದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ. ಬೆಂಗಳೂರು ಬಂದ್ ಮಾಡುವ ಬಗ್ಗೆ ನಮ್ಮ ಬಳಿ ಯರೂ ಸಹ ಅನುಮತಿ ಪಡೆದಿಲ್ಲ. ನಾವು ನೀಡಿಯೂ ಇಲ್ಲ. ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ತೊಂದರೆ ಕೊಟ್ಟರೆ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಕರೋನಾ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ಹೆಚ್ಚಿನ ಜನ ಒಂದಡೆ ಸೇರಲು ಅವಕಾಶ ನೀಡುವಿದಲ್ಲ ಎಂದು ಕಮಲಪಂತ್ ತಿಳಿಸಿದ್ದಾರೆ.

   English summary
   Formation of Marata Development Authority The pro-Kannada organizations have called for a statewide band on December 5 against the government's order. Fifteen thousand police personnel have been deployed in the capital to maintain the security and peace of the city, Police Commissioner Kamal Pant shares some important points on Band and police security
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X