ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ: ಗುಂಪಾಗಿ ಟಿಕೇಟ್ ಖರೀದಿಸಿದರೆ ಶೇ.15 ರಷ್ಟು ರಿಯಾಯಿತಿ!

|
Google Oneindia Kannada News

ಬೆಂಗಳೂರು, ಜನವರಿ, 27 : ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ನಲ್ಲಿ ಸಂಚಿರಿಸುವ ಮೂರಕ್ಕಿಂತ ಹೆಚ್ಚು ಜನರ ಸಮೂಹಕ್ಕೆ ಶೇ.15 ರಷ್ಟು ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲು ಬಿಎಂಟಿಸಿ ನಿರ್ಧರಿಸಿದೆ.

ಈ ಹೊಸ ಆದೇಶವು ಶನಿವಾರದಿಂದಲೇ ಜಾರಿಗೆ ಬರಲಿದೆ. ಸಮೂಹ ಸಾರಿಗೆಯಾದ ಬಿಎಂಟಿಸಿಗೆ ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈಗಾಗಲೇ ವೋಲ್ವೋ ಬಸ್ ಪ್ರಯಾಣ ದರವನ್ನು ಶೇ.38ರಷ್ಟು ಇಳಿಕೆ ಮಾಡಿರುವ ಬಿಎಂಟಿಸಿ ಅದಕ್ಕೆ ದೊರೆತಿರುವ ಉತ್ತಮ ಪ್ರತಿಕ್ರಿಯೆಯಿಂದ ಸಂತಸಗೊಂಡು ಇನ್ನು ಮುಂದೆ ಮೂರಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಬಸ್ ನಲ್ಲಿ ಟಿಕೇಟ್ ಖರೀದಿಸಿದರೆ ಬಿಎಂಟಿಸಿಯ ಯಾವುದೇ ಸಾರಿಗೆಯಲ್ಲಿ ಶೇ.15ರಷ್ಟು ರಿಯಾಯಿತಿಯನ್ನು ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಂಟಿಸಿಗೆ ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ವೋಲ್ವೋ ಬಸ್ ಈಗಾಗಲೇ ಜನಪ್ರಿಯಗೊಳ್ಳುತ್ತಿದೆ. ಅದೇ ಮಾದರಿಯಲ್ಲಿ ವೋಲ್ವೋ ಸೇರಿದಂತೆ ಉಳಿದ ಎಲ್ಲಾ ಬಗೆಯ ಸಾಮಾನ್ಯ ಪ್ರಯಾಣದ ಬಸ್ ಸೇರಿದಂತೆ ಎಲ್ಲಾ ಬಸ್ ಗಳ ಪ್ರಯಾಣಕ್ಕೆ ಶೇ. 15ರಷ್ಟು ರಿಯಾಯಿತಿ ದರವು ಅನ್ವಯವಾಗಲಿದೆ ಎಂದು ವಿವರಿಸಿದರು.

15 percent discount in BMTC for group Ticket

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಬಜೆಟ್ ಪೂರ್ವ ಸಭೆ ನಡೆಸಲಿದ್ದು, ಮುಂದಿನ ಬಜೆಟ್ ನಲ್ಲಿ ಸಾರಿಗೆ ಇಲಾಖೆಯಲ್ಲಿ 1 ಸಾವಿರ ಕೋಟಿ ರೂ. ಗಳ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗುವುದು. ಈ ಕುರಿತಾಗಿ ಮುಖ್ಯಮಂತ್ರಿಗಳು ಸ್ಪಂದಿಸುವ ನಿರೀಕ್ಷೆ ಇದೆ ಎಂದರು.

ಕೆಎಸ್ ಆರ್ ಟಿಸಿಯ ನಾಲ್ಕು ನಿಗಮಗಳಿಗೆ ಬಸ್ ಖರೀದಿ ಮೇಲಿನ ತೆರಿಗೆ ರವಿಯಾಯಿತಿ ನೀಡುವುದು, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಸ್ ಪಾಸ್, ಎಸ್ ಎಸ್ಟಿ ಅಭ್ಯರ್ಥಿಗಳಿಗೆ ಭಾರಿ ವಾಹನಗಳ ಕಲಿಕೆ ಪರವಾನಗಿ ಯೋಜನೆ, ಹಾಗೂ ಬಸ್ ಪಾಸ್ ಮೇಲೆ ನೀಡುತ್ತಿರುವ ರಿಯಾಯಿತಿಗೆ ರಾಜ್ಯ ಸರ್ಕಾರದಿಂದ ನೀಡುತ್ತಿರುವ 340 ಕೋಟಿ ರೂ.ಗಳನ್ನು ಸಾರಿಗೆ ನಿಗಮಕ್ಕೆ ಪಾವತಿಸಿ ಎಂದು ಮುಖ್ಯಮಂತ್ರಿಗಳನ್ನು ಕೋರಲಾಗವುದು ಎಂದು ತಿಳಿಸಿದರು.

English summary
Transport minister HM Revanna announced that BMTC will introduce 15 percent subsidy on group ticket people who will purchases more than Three tickets at a time. The new Scheme implemented from Saturday only. Under this scheme more than 3 persons will get 15 percent discount on each travelling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X