ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಜರಿ ವಸ್ತು ಬಳಸಿ ಮೋದಿ ಪ್ರತಿಮೆ; ಬೆಂಗಳೂರಲ್ಲಿ ಸ್ಥಾಪನೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15; ಗುಜರಿ ವಸ್ತುಗಳನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. 14 ಅಡಿ ಎತ್ತರದ ಪ್ರತಿಮೆಯನ್ನು ಬೆಂಗಳೂರಿನ ಉದ್ಯಾನದಲ್ಲಿ ಸ್ಥಾಪನೆ ಮಾಡಲಾಗುತ್ತದೆ.

ಆಂಧ್ರ ಪ್ರದೇಶದ ಗುಂಟೂರಿನ ಶಿಲ್ಪಿ ಕೆ. ವೆಂಕಟೇಶ್ವರ ರಾವ್ ಮತ್ತು ಅವರ ಪುತ್ರ ಕೆ. ರವಿ ಸೇರಿಕೊಂಡು ಪ್ರತಿಮೆ ನಿರ್ಮಾಣ ಮಾಡಿದ್ದಾರೆ. "10-15 ಜನರು ಎರಡು ತಿಂಗಳ ಕಾಲ ನಿರಂತರವಾಗಿ ಕೆಲಸ ಮಾಡಿ ಮೂರ್ತಿ ತಯಾರು ಮಾಡಿದ್ದಾರೆ" ಎಂದು ಕೆ. ವೆಂಕಟೇಶ್ವರ ರಾವ್ ಹೇಳಿದ್ದಾರೆ.

ಸಪ್ಟೆಂಬರ್ ಕೊನೆ ವಾರದಲ್ಲಿ ಅಮೆರಿಕಾಗೆ ಪ್ರಧಾನಿ ನರೇಂದ್ರ ಮೋದಿ ಸಪ್ಟೆಂಬರ್ ಕೊನೆ ವಾರದಲ್ಲಿ ಅಮೆರಿಕಾಗೆ ಪ್ರಧಾನಿ ನರೇಂದ್ರ ಮೋದಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್, ಬಿಜೆಪಿ ನಾಯಕ ಮೋಹನ್ ರಾಜು ನಗರದ ಉದ್ಯಾನವೊಂದರಲ್ಲಿ ಈ ಪ್ರತಿಮೆಯನ್ನು ಸೆಪ್ಟೆಂಬರ್ 16ರಂದು ಸ್ಥಾಪನೆ ಮಾಡಲಿದ್ದಾರೆ. ಸೆಪ್ಟೆಂಬರ್ 17ರಂದು ಮೋದ ಹುಟ್ಟುಹಬ್ಬವಿದ್ದು, ಅಂದು ಪ್ರತಿಮೆ ಅನಾವರಣಗೊಳ್ಳಲಿದೆ.

 'ಉಗ್ರರ ಅಸ್ತಿತ್ವ ಎಂದಿಗೂ ಶಾಶ್ವತವಲ್ಲ': ತಾಲಿಬಾನ್‌ ಬಗ್ಗೆ ನರೇಂದ್ರ ಮೋದಿ 'ಉಗ್ರರ ಅಸ್ತಿತ್ವ ಎಂದಿಗೂ ಶಾಶ್ವತವಲ್ಲ': ತಾಲಿಬಾನ್‌ ಬಗ್ಗೆ ನರೇಂದ್ರ ಮೋದಿ

PM Narendra Modi

ಈ ಪ್ರತಿಮೆಯನ್ನು ಸಂಪೂರ್ಣ ಗುಜರಿ ವಸ್ತುಗಳನ್ನೇ ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ. ಗುಂಟೂರಿನ ತೆನಾಲಿ ಪ್ರದೇಶದಲ್ಲಿ ಶಿಲ್ಪಿ ಕೆ. ವೆಂಕಟೇಶ್ವರ ರಾವ್ ಪುತ್ರನ ಸಹಾಯದಿಂದ ಮೂರ್ತಿ ನಿರ್ಮಾಣ ಮಾಡಿದ್ದಾರೆ.

ಸಂಸತ್ ಎದುರು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ತೋರಿದ ಫಲಕದಲ್ಲಿ ಏನಿತ್ತು? ಸಂಸತ್ ಎದುರು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ತೋರಿದ ಫಲಕದಲ್ಲಿ ಏನಿತ್ತು?

ಬೈಕ್ ಚೈನ್, ಗೇರ ವೀಲ್, ಕಬ್ಬಿಣದ ರಾಡು, ಸ್ಕ್ರೂ, ನಟ್, ಬೋಲ್ಟ್‌ಗಳನ್ನು ಬಳಸಿಕೊಂಡು ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಒಂದು ಟನ್‌ಗಿಂತಲೂ ಹೆಚ್ಚಿನ ಆಟೋ ಮೊಬೈಲ್ ತ್ಯಾಜ್ಯಗಳನ್ನು ಪ್ರತಿನೆ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ.

ಹೈದರಾಬಾದ್, ವಿಶಾಖಪಟ್ಟಣಂ, ಗುಂಟೂರಿನ ಗುಜರಿ ಮಾರುಕಟ್ಟೆಗಳಿಂದ ಪ್ರತಿಮೆ ನಿರ್ಮಾಣಕ್ಕೆ ವಸ್ತುಗಳನ್ನು ಸಂಗ್ರಹ ಮಾಡಲಾಗಿದೆ. ಸುಮಾರು ಎರಡು ತಿಂಗಳ ಕಾಲ ನಿರಂತರವಾಗಿ ಕೆಲಸ ಮಾಡಿ ಪ್ರತಿಮೆ ತಯಾರು ಮಾಡಲಾಗಿದೆ.

ಶಿಲ್ಪಿ ಕೆ. ವೆಂಕಟೇಶ್ವರ ರಾವ್ ಈ ಹಿಂದೆ ಬರೀ ನಟ್, ಬೋಲ್ಟ್ ಬಳಕೆ ಮಾಡಿಕೊಂಡು ಮಹಾತ್ಮ ಗಾಂಧಿ ಪ್ರತಿಮೆ ನಿರ್ಮಾಣ ಮಾಡಿದ್ದರು, ಗುಜರಿ ವಸ್ತುಗಳನ್ನು ಬಳಸಿ ಮಾಡಿರುವ ಪ್ರಧಾನಿ ಮೋದಿ ಪ್ರತಿಮೆ ಶಿಲ್ಪಿಯ ಎರಡನೇ ಪ್ರಯತ್ನವಾಗಿದೆ.

"ಗುಂಟೂರಿನಿಂದ ಪ್ರತಿಮೆಯನ್ನು ಬೆಂಗಳೂರಿಗೆ ಕಳಿಸಲಾಗಿದೆ. ಬೊಮ್ಮನಹಳ್ಳಿಯಲ್ಲಿರುವ ಕಾರ್‌ ಪಾರ್ಕ್‌ನಲ್ಲಿ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ" ಎಂದು ಶಿಲ್ಪಿ ಕೆ. ವೆಂಕಟೇಶ್ವರ ರಾವ್ ಹೇಳಿದ್ದಾರೆ.

ಶಿಲ್ಪಿ ಕೆ. ವೆಂಕಟೇಶ್ವರ ರಾವ್ ಪುತ್ರ ಕೆ. ರವಿ ಸಹ ಫೈನ್ ಆರ್ಟ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ. ವೆಂಕಟೇಶ್ವರ್ ರಾವ್ ಕುಟುಂಬದ ಹಿಂದಿನಿಂದಲೂ ಇದೇ ವೃತ್ತಿಯಲ್ಲಿ ತೊಡಗಿದೆ. ದೇವಾಲಯಗಳಿಗೆ ಮೂರ್ತಿಗಳನ್ನು ಮಾಡಿಕೊಡುತ್ತಾರೆ.

"ತಂದೆ ದೇವಾಲಯಗಳಿಗೆ ಕಂಚಿನ ಪ್ರತಿಮೆಯನ್ನು ಮಾಡುತ್ತಿದ್ದರು. ಗುಜರಿ ಬಳಕೆ ಮಾಡಿಕೊಂಡು ಪ್ರತಿಮೆ ನಿರ್ಮಾಣ ಮಾಡುವುದನ್ನು ನಾನೇ ಪರಿಚಯಿಸಿದೆ" ಎಂದು ಕೆ. ರವಿ ಹೇಳಿದ್ದಾರೆ.

ಗುಜರಿ ವಸ್ತುಗಳನ್ನು ಬಳಕೆ ಮಾಡಿಕೊಂಡು ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಮುಖ, ತಲೆಯ ಕೂದಲು, ಗಡ್ಡ, ಕನ್ನಡಕ ಮುಂತಾದವುಗಳಿಗೆ ಜಿಐ ವೈರ್‌ಗಳನ್ನು ಬಳಕೆ ಮಾಡಲಾಗಿದೆ.

ಈ ಹಿಂದೆಯೂ ತಂದೆ ಮತ್ತು ಮಗ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ನಿರ್ಮಾಣ ಮಾಡಿದ್ದರು. ಆದರೆ ಗುಜರಿ ವಸ್ತುಗಳನ್ನು ಬಳಕೆ ಮಾಡಿ ಪ್ರತಿಮೆ ತಯಾರು ಮಾಡಿರುವುದು ಇದೇ ಮೊದಲು. ಗುಜರಿ ವಸ್ತುಗಳನ್ನು ಬಳಕೆ ಮಾಡಿದಾಗ ಮುಖವನ್ನು ನಿರ್ಮಾಣ ಮಾಡುವುದು ಸವಾಲಿನ ಕೆಲಸ ಎಂದು ಅವರು ಹೇಳಿದ್ದಾರೆ.

ನರೇಂದ್ರ ಮೋದಿ ಪ್ರತಿಮೆ ನಿರ್ಮಾಣದ ಮಾಹಿತಿ ಪಡೆದು ಸ್ಥಳೀಯ ಶಾಸಕರು ಶಿಲ್ಪಿ ಕೆ. ವೆಂಕಟೇಶ್ವರ ರಾವ್ ಮತ್ತು ಪುತ್ರ ಕೆ. ರವಿಯನ್ನು ಭೇಟಿ ಮಾಡಿದ್ದರು. ಪ್ರತಿಮೆ ನಿರ್ಮಾಣ ಕಾರ್ಯವನ್ನು ವೀಕ್ಷಿಸಿ ಶಿಲ್ಪಿಗಳನ್ನು ಅಭಿನಂದಿಸಿದ್ದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್, ಬಿಜೆಪಿ ನಾಯಕ ಮೋಹನ್ ರಾಜು ಈ ಪ್ರತಿಮೆ ನಿರ್ಮಾಣಕ್ಕೆ ಆರ್ಡರ್ ನೀಡಿದ್ದರು. ಈಗಾಗಲೇ ಪ್ರತಿಮೆಯನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.

English summary
A 14-feet statue of PM Narendra Modi has been made of scrap material by a man & his son in Guntur. The statue will be installed in Bengaluru, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X