ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಡ್ಡ ಪರಿಣಾಮ ಬೀರದ ಆಯುರ್ವೇದ ಉತ್ಪನ್ನಗಳು

|
Google Oneindia Kannada News

ಬೆಂಗಳೂರು, ಮಾ. 11: ಆಯುರ್ವೇದ ಮಾರುಕಟ್ಟೆಯಲ್ಲಿ ಹೆಸರು ಸಾಧಿಸಿರುವ ಶತಾಯು ಆಯುರ್ವೇದ ಸಂಸ್ಥೆ 14 ಬಗೆಯ ಆಯುರ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸಾವಯವ ಚ್ಯವನಪ್ರಾಶ ಲೇಹ, ಅಶ್ವಗಂಧ ಲೇಹ, ಶತಾವರಿ ಲೇಹ, ತ್ರಿಫಲ ಗುಳಿಗೆ, ಟರ್ಮೆರಿಕ್, ತುಳಸಿ, ಅಮಲಕಿ, ನೀಮ್, ಭೂಮಿಅಮಲಕಿ, ಬ್ರಾಹ್ಮಿ, ಗುಡುಚಿ, ತ್ರಿಕಟು, ಮಧುನಾಶಿನಿ, ಹಿಂಗ್ವಾಸ್ಟಕ ಮಾತ್ರೆಗಳನ್ನು ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.[ಜಯನಗರ ಸೌತ್ ಎಂಡ್ ವೃತ್ತಕ್ಕೀಗ 'ಸಂಜೀವಿನಿ' ಶಕ್ತಿ]

herbel

ಸಿಂಥಟಿಕ್ ಗೊಬ್ಬರ, ತ್ಯಾಜ್ಯ, ನ್ಯಾನೊ ಉತ್ಪನ್ನಗಳಂತಹ ಕೃತಕ ಪೂರಕ ಅಂಶಗಳಿಂದ ಮುಕ್ತವಾದ ಸಂಪೂರ್ಣವಾಗಿ ಶುದ್ಧ ಸಾವಯವ ಪರಿಸರದಲ್ಲಿ ಬೆಳೆದಂತಹ ಗಿಡಮೂಲಿಕೆಗಳಿಂದಲೇ ಈ ಔಷಧಗಳನ್ನು ಸಿದ್ಧಪಡಿಸಲಾಗಿದೆ ಎಂದು ಶತಾಯು ಆಯುರ್ವೇದ ಸಂಸ್ಥೆಯ ನಿರ್ದೇಶಕ ಡಾ. ಮೃತ್ಯುಂಜಯ ಸ್ವಾಮಿ ಹೇಳುತ್ತಾರೆ.

ಸಂಸ್ಥೆಗೆ ಕಂಟ್ರೋಲ್ ಯೂನಿಯನ್ ಮಾನ್ಯತೆಯಿದೆ. ಸ್ಥಳೀಯ ನಿಯಂತ್ರಕ ಸಂಘಟನೆಗಳ ಅನುಮತಿ ಪತ್ರವೂ ಇದೆ. ಗ್ರಾಹಕರಿಗೆ ಗುಣಮಟ್ಟದ ಆಯುರ್ವೇದ ಉತ್ಪನ್ನಗಳನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ಸ್ವಾಮಿ ಹೇಳಿದ್ದಾರೆ.

herbel 1

ಪ್ರಾಚೀನ ಪದ್ಧತಿಯಲ್ಲಿ ಆಯುರ್ವೇದ ಮೂಲಿಕೆಗಳನ್ನು ಬೆಳೆಸಿದರೆ ಮಾತ್ರ ಔಷಧ ಉತ್ಪನ್ನಗಳ ಗುಣಮಟ್ಟ ಚೆನ್ನಾಗಿರುತ್ತದೆ. ಬಳಸುವವರ ಮೇಲೆಯೂ ಇವು ಯಾವುದೇ ಅಡ್ಡ ಪರಿಣಾಮ ಬಿರುವುದಿಲ್ಲ ಎಂದು ತಿಳಿಸಿದ್ದಾರೆ.

ಸಾವಯವ ಮಾರುಕಟ್ಟೆ
2010ರಲ್ಲಿ ಜಾಗತಿಕ ಸಾವಯವ ಉತ್ಪನ್ನಗಳ ಮಾರುಕಟ್ಟೆ ಮೌಲ್ಯ 57.5 ಶತಕೋಟಿ ಡಾಲರ್ ಆಗಿತ್ತು. 2015ರಲ್ಲಿ ಅದರ ಪ್ರಮಾಣ 104.7 ಶತಕೋಟಿ ಡಾಲರ್ ಗೆ ಏರಿದೆ ಎಂದರೆ ಜನರು ಆಯುರ್ವೇದ ಉತ್ಪನ್ನಗಳಿಗೆ ಒತ್ತು ನೀಡಿರುವುದು ಕಂಡುಬರುತ್ತದೆ ಎಂದು ಸ್ವಾಮಿ ತಿಳಿಸಿದ್ದಾರೆ. ಶತಾಯು ಆಯುರ್ವೇದ ಸಂಸ್ಥೆ ಉತ್ಪನ್ನಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ 7829910171 ನ್ನು ಸಂಪರ್ಕಿಸಬಹುದು.

herbel 3
English summary
Bengaluru: Famous ayurveda company shathayu release 14 ayurvedic products. The products which are completely made by organic herbals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X