ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವವಿದ್ಯಾಲಯವಾಗಲಿದೆ 139 ವರ್ಷ ಹಳೆಯ ಸೇಂಟ್ ಜೋಸೆಫ್ ಕಾಲೇಜು

|
Google Oneindia Kannada News

ಬೆಂಗಳೂರು,ಫೆಬ್ರವರಿ 03: ನಗರದ 139 ವರ್ಷ ಹಳೆಯ ಸೇಂಟ್ ಜೋಸೆಫ್ ಕಾಲೇಜು ಶೀಘ್ರ ವಿಶ್ವವಿದ್ಯಾಲಯವಾಗಲಿದೆ.

ಕರ್ನಾಟಕ ವಿಧಾನಸಭೆಯಲ್ಲಿ ಸೇಂಟ್ ಜೋಸೆಫ್ ಯೂನಿವರ್ಸಿಟಿ ಬಿಲ್ ಮಂಡಿಸಲಾಗಿದೆ. ವಿಶ್ವವಿದ್ಯಾಲಯವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಣ ನೀಡಲಿದೆ.

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌ಡಿ ಕಡ್ಡಾಯ: ಸುಪ್ರೀಂಕೋರ್ಟ್ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌ಡಿ ಕಡ್ಡಾಯ: ಸುಪ್ರೀಂಕೋರ್ಟ್

ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ನಿರ್ಮಿಸಲು 55 ಕೋಟಿ ರೂ ಅಂದಾಜು ವೆಚ್ಚ ತಗುಲಲಿದೆ. ಕೇಂದ್ರ ಸರ್ಕಾರವು 33 ಕೋಟಿ ನೀಡಲಿದ್ದು, ರಾಜ್ಯ ಸರ್ಕಾರ 22 ಕೋಟಿ ನೀಡಲಿದೆ.

 139 Year Old St Joseph’s College To Become University

1882ರಲ್ಲಿ ಫಾರಿನ್ ಮಿಷನರಿ ಈ ಕಾಲೇಜನ್ನು ಆರಂಭಿಸಿತ್ತು, 1926ರಲ್ಲಿಅದು ಪ್ರಥಮ ದರ್ಜೆ ಕಾಲೇಜಾಗಿ ಮಾರ್ಪಟ್ಟಿತ್ತು, 1937ರಲ್ಲಿ ಜೆಸ್ಯೂಟ್ ಸೊಸೈಟಿಗೆ ಹಸ್ತಾಂತರವಾಗಿತ್ತು. 2005ರಿಂದ ಕಾಲೇಜು ಆಟೊನೊಮೊಸ್ ಆಗಿ ಬದಲಾಗಿತ್ತು.

Recommended Video

AERO India ಬಗ್ಗೆ ರಕ್ಷಣಾ ಸಚಿವರ ಮಾತು | Oneindia Kannada

ಸೇಂಟ್ ಜೋಸೆಫ್ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಬದಲಾಯಿಸಲು ಬಿಲ್ ಪಾಸ್ ಮಾಡಲಾಗಿದೆ.ಸಾಮಾಜ ವಿಜ್ಞಾನ, ವಿಜ್ಞಾನ, ಎಂಜಿನಿಯರಿಂಗ್, ತಂತ್ರಜ್ಞಾನ, ಮ್ಯಾನೇಜ್‌ಮೆಂಟ್, ಶಿಕ್ಷಣ, ಧಾರ್ಮಿಕ ಶಿಕ್ಷಣ, ಭಾಷೆಗಳು ಎಲ್ಲಕ್ಕೂ ಪ್ರಾತಿನಿಧ್ಯ ನೀಡಲಾಗುತ್ತದೆ.

English summary
The state government on Monday tabled a Bill in the Karnataka Legislative Assembly to upgrade the historic St Joseph’s College, one of Bengaluru’s oldest degree colleges, into a university.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X