ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ದಿನ 13 ರೈತರ ಆತ್ಮಹತ್ಯೆ, ಸಾವಿನಲ್ಲೂ ರಾಜ್ಯ ಹೊಸ ದಾಖಲೆ

By Vanitha
|
Google Oneindia Kannada News

ಬೆಂಗಳೂರು, ಜುಲೈ, 25 : ರಾಜ್ಯದಲ್ಲಿ ಒಂದೇ ದಿನ 13 ಜನ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಸಾವಿನ ಸಂಖ್ಯೆಯಲ್ಲಿಯೂ ರಾಜ್ಯ ದಾಖಲೆ ಮಾಡಲು ಹೊರಟಿದ್ದು, ಒಂದೇ ದಿನ 13 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಇದೇ ಮೊದಲು. ಅಲ್ಲದೇ ಶನಿವಾರವೂ ಕೂಡ ರೈತರ ಸಾವು ಮುಂದುವರೆದಿದೆ.

ಸಾಲಬಾಧೆ, ಬೆಲೆ ಕುಸಿತ, ಕೈಕೊಟ್ಟ ಬೆಳೆ, ಸಾಮಾಜಿಕ ಅವಮಾನ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೆಡೆಯಾದರೆ, ರಾಜಕೀಯ ಪಕ್ಷಗಳು, ಸರ್ಕಾರ, ಭಾಷಣ, ಭೇಟಿಯಲ್ಲಿಯೇ ಮುಳುಗಿ, ಸಾವಿನ ಸಂಖ್ಯೆ ಕಡಿಮೆ ಮಾಡುವಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸರ್ಕಾರ ನಿರ್ಲಕ್ಷ್ಯ ಭಾವ ತಳೆದಿರುವುದಕ್ಕೆ ಸಾಕ್ಷಿಯಾಗಿದೆ.[ಹವ್ಯಾಸಿ ಕೃಷಿಕರಿಗಾಗಿ ಫೇಸ್ ಬುಕ್ ವೇದಿಕೆಯಿಂದ ಕರೆ]

13-formers-suicide-on-friday-karnataka

ರಾಜ್ಯದ 13 ಕೃಷಿಕರ ಸಾವನ್ನಪ್ಪಿದ್ದು, ಶುಭ ಶುಕ್ರವಾರ ಅಶುಭತೆಯನ್ನು ನೀಡಿದ್ದು 13 ಮಂದಿ ರೈತರ ಮನೆಯಲ್ಲಿ ಸೂತಕದ ವಾತಾವರಣ ಸೃಷ್ಟಿಸಿದ್ದು, ಸ್ಮಶಾನ ಮೌನ ಮಡುಗಟ್ಟಿದೆ.

ಎಲ್ಲೆಲ್ಲಿ, ಯಾರು, ಎಷ್ಟು ಮಂದಿ ?

ಕೊಪ್ಪಳದಲ್ಲಿ ಮಲ್ಲಯ್ಯ, ವೆಂಕಟ ನಾರಾಯಣ, ಮೈಸೂರಿನಲ್ಲಿ ಮಂಜುನಾಥ್, ಜಗದೀಶ್, ಶಿವರಾಜೇಗೌಡ, ಬೆಳಗಾವಿಯಲ್ಲಿ ಈರಪ್ಪ ಬಸವಂತಪ್ಪ, ರಾಮನಗರದಲ್ಲಿ ರಮೇಶ್, ಮಂಡ್ಯದಲ್ಲಿ ಪುಟ್ಟಸ್ವಾಮಿ, ವಿಜಯಪುರ(ಬಿಜಾಪುರ)ದಲ್ಲಿ ಶಂಕರಗೌಡ, ಮಹದೇವಪ್ಪ ಗೌಡ, ಬಳ್ಳಾರಿಯಲ್ಲಿ ಎಲ್ ಜೆಮ್ಲಾನಾಯ್ಕ್, ಚಾಮರಾಜನಗರದಲ್ಲಿ ಮರಿಸ್ವಾಮಿ, ಹಾಸನದಲ್ಲಿ ಸಹದೇವ ಎಂಬುವವರು ಶುಕ್ರವಾರ ಸಾವನ್ನಪ್ಪಿದ ರೈತರು.[ರೈತನಿಗೆ ಗುಣಮಟ್ಟದ ಬೀಜ ಒದಗಿಸುವ 'ಬಿಗ್ ಹ್ಯಾಟ್']

2 ತಿಂಗಳಿನಿಂದ (ಜೂನ್ 1ರಿಂದ ಜುಲೈ 25ರವರೆಗೆ) ರೈತರ ಆತ್ಮಹತ್ಯೆ ಸಂಖ್ಯೆ:

ಹಾವೇರಿ- 14, ಗದಗ- 06, ಧಾರವಾಡ- 05, ಬೆಳಗಾವಿ-04, ಉತ್ತರಕನ್ನಡ- 01, ಶಿವಮೊಗ್ಗ- 03, ಚಿಕ್ಕಮಗಳೂರು- 05, ವಿಜಯಪುರ- 05, ಬಾಗಲಕೋಟೆ- 05, ದಾವಣಗೆರೆ- 03, ಚಿತ್ರದುರ್ಗ- 08, ರಾಯಚೂರು- 06, ಬಳ್ಳಾರಿ- 04, ಚಾಮರಾಜನಗರ- 03, ಹಾಸನ- 07, ಮಂಡ್ಯ-29, ಮೈಸೂರು- 13, ಕೊಡಗು- 01, ಬೀದರ್-05, ಕಲಬುರಗಿ- 06, ಯಾದಗಿರಿ- 03, ರಾಮನಗರ- 01. ಒಟ್ಟು 137 ಮಂದಿ ರೈತರು ಇದುವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಾವ ವರ್ಷ ಎಷ್ಟು ಸಾವು?
2010-11 - 243
2011-12 - 187
2013-14 - 130
2014-15 - 61

English summary
July 24, on Friday is not good day. Because that day 13 formers suicide in all over Karnataka.Saturday 2 former passed away
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X