ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಿಂದ ಹಾರಲಿವೆ 14 ಅಂತರಾಷ್ಟ್ರೀಯ ವಿಮಾನಗಳು

|
Google Oneindia Kannada News

ಬೆಂಗಳೂರು, ಆಗಸ್ಟ್ 19 : ಕೋವಿಡ್ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯಕವಾಗಲು ಬೆಂಗಳೂರಿನಿಂದ 14 ವಿವಿಧ ಪ್ರದೇಶಗಳಿಗೆ ವಿಮಾನ ಸಂಚಾರ ನಡೆಸಲಾಗುತ್ತದೆ. ಕೊರೊನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದೇಶಿಯ ವಿಮಾನಗಳು ಮಾತ್ರ ಸಂಚಾರ ನಡೆಸುತ್ತಿವೆ.

Recommended Video

ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಪುಟಿನ್ ಮಗಳು ಸಾವು..!? | Oneindia Kannada

ವಂದೇ ಭಾರತ್ ಮಿಷನ್ ಮತ್ತು ಏರ್ ಬಬಲ್ ಕಾರ್ಯಕ್ರಮದ ಭಾಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 13 ವಿಮಾನಯಾನ ಸಂಸ್ಥೆಗಳು 14 ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿವೆ.

ಇನ್ನಷ್ಟು ವಿಮಾನ ನಿಲ್ದಾಣಗಳ ಖಾಸಗೀಕರಣ: ಹರದೀಪ್ ಸಿಂಗ್ ಪುರಿಇನ್ನಷ್ಟು ವಿಮಾನ ನಿಲ್ದಾಣಗಳ ಖಾಸಗೀಕರಣ: ಹರದೀಪ್ ಸಿಂಗ್ ಪುರಿ

ಕೇಂದ್ರ ಸರ್ಕಾರದ ಈ ಕಾರ್ಯಕ್ರಮಗಳಿಗೆ ಬೆಂಗಳೂರು ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಲಾಗಿದೆ. ವಂದೇ ಭಾರತ್ ಮಿಷನ್ ಅಡಿ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಹಲವಾರು ವಿಮಾನಗಳು ಬೆಂಗಳೂರಿಗೆ ಬಂದಿಳಿದಿವೆ.

ವಿಮಾನ ಹಾರಾಟ ನಿರ್ಬಂಧ ಸಡಿಲಿಕೆ: ಏನಿದು ಏರ್ ಟ್ರಾನ್ಸ್‌ಪೋರ್ಟ್ ಬಬಲ್ಸ್? ಇಲ್ಲಿದೆ ವಿವರವಿಮಾನ ಹಾರಾಟ ನಿರ್ಬಂಧ ಸಡಿಲಿಕೆ: ಏನಿದು ಏರ್ ಟ್ರಾನ್ಸ್‌ಪೋರ್ಟ್ ಬಬಲ್ಸ್? ಇಲ್ಲಿದೆ ವಿವರ

13 Airlines To Fly To 14 International Destinations From Bengaluru Airport

ಅಬುದಾಬಿ, ದುಬೈ, ದೋಹಾ, ಫ್ರಾಂಕ್‌ಫರ್ಟ್, ಕುವೈಟ್, ಲಂಡನ್, ಮಸ್ಕತ್, ಪ್ಯಾರೀಸ್, ರಿಯಾದ್, ಸಿಂಗಾಪುರ ಸೇರಿದಂತೆ 14 ವಿವಿಧ ಪ್ರದೇಶಗಳಿಗೆ ಬೆಂಗಳೂರಿನಿಂದ ವಿಮಾನಗಳು ಸಿಬ್ಬಂದಿಗಳ ಜೊತೆ ಹಾರಾಟ ನಡೆಸಲಿವೆ.

ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗಲು 30 ರೂ. ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗಲು 30 ರೂ.

ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ, ಗೋ ಏರ್, ವಿಸ್ತಾರ ಸೇರಿದಂತೆ 13 ಸಂಸ್ಥೆಗಳು ವಿಮಾನ ಹಾರಾಟವನ್ನು ನಡೆಸಲಿವೆ. ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಈಗಾಗಲೇ ಅನುಮತಿಯನ್ನು ನೀಡಿದೆ.

ಜುಲೈ ತಿಂಗಳಿನಲ್ಲಿ ಭಾರತ ವಿವಿಧ ದೇಶಗಳ ಜೊತೆ ಏರ್ ಬಬಲ್ ಕಾರ್ಯಕ್ರಮದಡಿ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ, ಯುಎಇ, ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳ ಜೊತೆ ವಿಮಾನ ಹಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ.

English summary
Kempegowda International Airport said that 13 international airlines will be operating to 14 overseas destinations from its facility under various initiatives of the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X