ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಗರದಲ್ಲಿ 11,638 ಕಂಟೈನ್ಮೆಂಟ್ ಝೋನ್

|
Google Oneindia Kannada News

ಬೆಂಗಳೂರು, ಜುಲೈ 22 : ಬೆಂಗಳೂರು ನಗರದಲ್ಲಿ ಮಂಗಳವಾರ 1714 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ನಗರದಲ್ಲಿ ಒಟ್ಟು ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 11,638ಕ್ಕೆ ಏರಿಕೆಯಾಗಿದ್ದು, ಬೆಂಗಳೂರು ದಕ್ಷಿಣದಲ್ಲಿ ಹೆಚ್ಚು ಝೋನ್‌ಗಳಿವೆ.

Recommended Video

ಟ್ಯಾಂಕರ್ ನಲ್ಲಿ ಇದ್ದ ಹಾಲನ್ನು ರಸ್ತೆಗೆ ಚೆಲ್ಲಿದ ಪ್ರತಿಭಟನಾಕಾರರು | Oneindia Kannada

ಬೆಂಗಳೂರು ನಗರದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 34,943. ಮಂಗಳವಾರ 1,417 ಕಂಟೈನ್ಮೆಂಟ್ ಝೋನ್‌ಗಳು ನಗರದಲ್ಲಿ ಸೇರ್ಪಡೆಯಾಗಿವೆ. ಒಟ್ಟು 11, 638 ಝೋನ್‌ಗಳಿದ್ದು, ಇವುಗಳಲ್ಲಿ 9,815 ಸಕ್ರಿಯ ಝೋನ್‌ ಆಗಿವೆ.

ಬೆಂಗಳೂರಿನಲ್ಲಿ ದಕ್ಷಿಣ ಹಾಗೂ ಪೂರ್ವ ಡೇಂಜರ್ ವಲಯ! ಬೆಂಗಳೂರಿನಲ್ಲಿ ದಕ್ಷಿಣ ಹಾಗೂ ಪೂರ್ವ ಡೇಂಜರ್ ವಲಯ!

ನಗರದ ದಕ್ಷಿಣದಲ್ಲಿ 3000 ಕಂಟೈನ್ಮೆಂಟ್ ಝೋನ್‌ಗಳಿವೆ. ಉಳಿದಂತೆ ಪೂರ್ವ, ಪಶ್ಚಿಮ ಮತ್ತು ಬೊಮ್ಮನಹಳ್ಳಿ ವಲಯಗಳಿವೆ. ಮಂಗಳವಾರ ಬೆಂಗಳೂರು ದಕ್ಷಿಣದಲ್ಲಿಯೇ ಶೇ 27ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು ದಕ್ಷಿಣದಲ್ಲಿ 2,014 ಸಕ್ರಿಯ ಕಂಟೈನ್ಮೆಂಟ್ ಝೋನ್ ಬೆಂಗಳೂರು ದಕ್ಷಿಣದಲ್ಲಿ 2,014 ಸಕ್ರಿಯ ಕಂಟೈನ್ಮೆಂಟ್ ಝೋನ್

11,638 Containment Zones In Bengaluru

ಬೆಂಗಳೂರು ಪೂರ್ವದಲ್ಲಿ ಶೇ 24, ಪಶ್ಚಿಮದಲ್ಲಿ ಶೇ 19ರಷ್ಟು ಪ್ರಕರಣಗಳು ವರದಿಯಾಗಿವೆ. ಕಳೆದ 10 ದಿನಗಳಲ್ಲಿ ಶೇ 26ರಷ್ಟು ಹೊಸ ಪ್ರಕರಣಗಳು ಬೆಂಗಳೂರು ದಕ್ಷಿಣದಲ್ಲಿಯೇ ದಾಖಲಾಗಿದೆ. ಶಾರದಾ ನಗರ ವಾರ್ಡ್ ಬಿಬಿಎಂಪಿಗೆ ತಲೆನೋವು ತಂದಿದೆ.

ಬೆಂಗಳೂರು ನಗರದಲ್ಲಿ ಭಾನುವಾರದ ಕರ್ಫ್ಯೂ ಮತ್ತೆ ಜಾರಿ ಬೆಂಗಳೂರು ನಗರದಲ್ಲಿ ಭಾನುವಾರದ ಕರ್ಫ್ಯೂ ಮತ್ತೆ ಜಾರಿ

ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳ ಪೈಕಿ 160 ವಾರ್ಡ್‌ಗಳಲ್ಲಿ 50ಕ್ಕೂ ಅಧಿಕ ಸಕ್ರಿಯ ಕೊರೊನಾ ಪ್ರಕರಣಗಳಿವೆ. ಜುಲೈ 14ರಿಂದ ನಗರದಲ್ಲಿ ಜಾರಿಯಲ್ಲಿದ್ದ ಲಾಕ್ ಡೌನ್ ಬುಧವಾರ ಬೆಳಗ್ಗೆ 5ಗಂಟೆಗೆ ಮುಕ್ತಾಯಗೊಂಡಿದೆ.

English summary
In Bengaluru city total active containment zones 9,815 and total 11,638 containment zones. Bengaluru south has more number of containment zones in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X