ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಯಿಂದ ಬೆಂಗಳೂರಿನಲ್ಲಿ 5 ದಿನದಲ್ಲಿ ಸಾವಿರ ಮರಗಳು ನೆಲಸಮ

|
Google Oneindia Kannada News

ಬೆಂಗಳೂರು, ಮೇ 31: ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಬೆಂಗಳೂರಿನಲ್ಲಿ ಮಳೆ ಬಂದಾಗ ಮರಗಳು ಬೀಳುವ ಘಟನೆ ಆಗಾಗ ನಡೆತ್ತಿರುತ್ತದೆ. ಆದರೆ, ಕೆಲವು ದಿನಗಳಿಂದ ಬರುತ್ತಿರುವ ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಮರಗಳು ನೆಲಕ್ಕೆ ಉರುಳಿವೆ.

ನಾಲೈದು ದಿನಗಳಿಂದ ಬೀಳುತ್ತಿರುವ ಭಾರೀ ಪ್ರಮಾಣದ ಮಳೆಗೆ, 1100 ಮರಗಳು ಧರೆಗೆ ಉರುಳಿವೆ. ಮಳೆಯ ಜೊತೆಗೆ ರಭಸವಾಗಿ ಬರುತ್ತಿರುವ ಗಾಳಿಯಿಂದ ಮರಗಳು ಬೀಳುತ್ತಿದೆ. ಮಳೆಯಿಂದ ಸಾವಿರಾರೂ ಮರಗಳು ಹಾಗೂ ವಿದ್ಯುತ್ ಕಂಬಗಳು ಹಾನಿಯಾದ ಬಗ್ಗೆ ಬೆಸ್ಕಾ ಮಾಹಿತಿ ನೀಡಿದೆ.

ಗುಡುಗು ಸಹಿತ ಮಳೆ; ರಾಜ್ಯದ 8 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ಗುಡುಗು ಸಹಿತ ಮಳೆ; ರಾಜ್ಯದ 8 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್

ಮಳೆಯಿಂದ ಬೆಂಗಳೂರಿನ 600 ವಿದ್ಯುತ್ ಕಂಬಗಳು ನೆಲೆಕ್ಕೆ ಬಿದ್ದಿವೆ. ಕಾರ್ಮಿಕರು ಲಾಕ್‌ಡೌನ್‌ನಿಂದ ತಮ್ಮ ತಮ್ಮ ಊರುಗಳಿಗೆ ಹೋಗಿದ್ದು, ದುರಸ್ಥಿ ಕಾರ್ಯ ವಿಳಂಬವಾಗಿದೆ.

1100 Trees Were Uprooted Due To Heavy Rain In Bengaluru

ಬೆಂಗಳೂರಿನ ಅನೇಕ ಭಾಗಗಳಲ್ಲಿ ಮಳೆಯಿಂದ ವಿದ್ಯುತ್ ಕಡಿತದ ವರದಿಯಾಗಿದೆ. ಅದರಲ್ಲಿಯೂ ಜಯನಗರ, ಜೆಪಿ ನಗರ, ಯಶವಂತಪುರ, ಬಸವೇಶ್ವರ ನಗರ, ಕಾಡುಗೋಡಿ, ಎಚ್‌ಎಸ್‌ಆರ್ ಲೇ ಔಟ್, ಕೋರಮಂಗಲ, ಮಲ್ಲೇಶ್ವರಂ, ಬೇಗೂರು ರಸ್ತೆ, ಆಸ್ಟೀನ್ ಟೌನ್, ವೈಟ್ ಫೀಲ್ಡ್‌ ಕೆಎಚ್‌ಬಿ ಕಾಲೋನಿ, ಕೆಂಗೇರಿ ಭಾಗಗಳಲ್ಲಿ ಹೆಚ್ಚಿದೆ.

English summary
1100 trees were uprooted due to heavy rain in bengaluru over last 5 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X