ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು:110 ಹಳ್ಳಿಗಳ ಒಳಚರಂಡಿ ಕಾಮಗಾರಿಗೆ ಸರ್ಕಾರ ಸಮ್ಮತಿ

|
Google Oneindia Kannada News

ಬೆಂಗಳೂರು, ಮಾರ್ಚ್ 10: ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ 110 ಹಳ್ಳಿಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದ್ದು, ಮಾರ್ಚ್ ಮಧ್ಯದಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಪಾಲಿಕೆ ವ್ಯಾಪ್ತಿಗೆ ಈ ಹಳ್ಳಿಗಳನ್ನು ಸೇರ್ಪಡೆಗೊಳಿಸಿದ ನಂತರ ಮೂಲಸೌಕರ್ಯ ನೀಡಿರಲಿಲ್ಲ. ಶೌಚಗುಂಡಿಯ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಹರಿಬಿಡಲಾಗುತ್ತಿತ್ತು. ಕೆರೆಗಳು ಕಲುಷಿತಗೊಳ್ಳಲು ಇದು ಕೂಡ ಪ್ರಮುಖ ಕಾರಣವಾಗಿತ್ತು. ಇದೀಗ ಸರ್ಕಾರದ ಒಪ್ಪಿಗೆ ದೊರೆತಿರುವ ಹಿನ್ನೆಲೆಯಲ್ಲಿ ಮೂರು ಹಂತದ ಯೋಜನೆಯನ್ನು ಜಲಮಂಡಳಿ ತೀರ್ಮಾನಿಸಿದೆ.

ಬಿಬಿಎಂಪಿಯ 110 ಹಳ್ಳಿ ವ್ಯಾಪ್ತಿಯ ಕಟ್ಟಡಗಳಿಗೆ ಜಲಮಂಡಳಿಯಿಂದ ಎನ್ಒಸಿಬಿಬಿಎಂಪಿಯ 110 ಹಳ್ಳಿ ವ್ಯಾಪ್ತಿಯ ಕಟ್ಟಡಗಳಿಗೆ ಜಲಮಂಡಳಿಯಿಂದ ಎನ್ಒಸಿ

ವಲಯವಾರು ಹಳ್ಳಿಗಳನ್ನು ಪ್ರತ್ಯೇಕಿಸಿ ಕಾಮಗಾರಿ ನಡೆಸಲಾಗುತ್ತದೆ. 1 ಸಾವಿರ ಕೋಟಿ ರೂಗಳ ಯೋಜನೆಗೆ ಜಲಮಂಡಳಿ ಶೇ.50 ಅನುದಾನದ ರೂಪದಲ್ಲಿ ರಾಜ್ಯ ಸರ್ಕಾರ ಒದಗಿಸಲಿದೆ.

110 villages in outskirts Bengaluru will get UGD system

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ಈಗಾಗಲೇ 1886 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಒದಗಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ.ಕುಡಿಯುವ ನೀರಿನ ಯೋಜನೆ ಘೋಷಿಸಿದ ನಂತರ ಒಳಚರಂಡಿಕಾಮಗಾರಿ ಕೈಗೆತ್ತಿಕೊಳ್ಳುವ ಭರವಸೆಯನ್ನೂ ಸರ್ಕಾರ ನೀಡಿತ್ತು. ಆದರೆ, ಒಳಚರಂಡಿ ಕಾಮಗಾರಿಗೆ ಅನುದಾನ ಒದಗಿಸುವುದು, ಯೋಜನೆ ಕಾಲಮಿತಿ ಬಗ್ಗೆ ಯಾವುದೇ ತೀರ್ಮಾನಗಳಾಗಿಲ್ಲ. ಇದೀಗ ಮೂರು ಪ್ಯಾಕೇಜ್ ಗಳಲ್ಲಿ ಯೋಜನೆ ಕೈಗೆತ್ತಿಕೊಂಡು ಮೂರು ವರ್ಷದಲ್ಲಿ ಪೂರ್ಣಗೊಳಿಸುವಂತೆ ಸರ್ಕಾರ ಸೂಚಿಸಿದೆ.

English summary
The state government has approved under ground drainage system project in 110 village within BBMP limit at the cost of Rs.1000 crores. The BWSSB will take up this work in three phase manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X