ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಒಂದೇ ವಾರ್ಡ್ 11 ಪೌರ ಕಾರ್ಮಿಕರಿಗೆ ಕೋವಿಡ್ ಸೋಂಕು

|
Google Oneindia Kannada News

ಬೆಂಗಳೂರು, ಆಗಸ್ಟ್ 06 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಕೋವಿಡ್ ಪರೀಕ್ಷೆ ನಡೆಸುತ್ತಿದೆ. ಹಗದೂರು ವಾರ್ಡ್‌ನಲ್ಲಿ 11 ಪೌರ ಕಾರ್ಮಿಕರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಬಿಬಿಎಂಪಿ ಹಗದೂರು ವಾರ್ಡ್‌ನಲ್ಲಿ ಕಾರ್ಯ ನಿರ್ವಹಣೆ ಮಾಡುವ 132 ಕಾರ್ಮಿಕರಿಗೆ ರ‍್ಯಾಂಡಮ್ ಟೆಸ್ಟ್ ಮಾಡಿಸಿತ್ತು. 11 ಪೌರ ಕಾರ್ಮಿಕರು ಮತ್ತು 3 ಮಕ್ಕಳಿಗೆ ಸೋಂಕು ಇರುವುದು ದೃಢಪಟ್ಟಿದೆ.

ಬೆಂಗಳೂರು; ಒಂದೇ ವಾರ್ಡ್‌ 37 ಪೌರ ಕಾರ್ಮಿಕರಿಗೆ ಕೋವಿಡ್ ಸೋಂಕು ಬೆಂಗಳೂರು; ಒಂದೇ ವಾರ್ಡ್‌ 37 ಪೌರ ಕಾರ್ಮಿಕರಿಗೆ ಕೋವಿಡ್ ಸೋಂಕು

ಮಕ್ಕಳಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ. ಸೋಮವಾರ ಮೂವರು ಪೌರ ಕಾರ್ಮಿಕರ ಪರೀಕ್ಷೆ ವರದಿ ಬಂದಿತ್ತು. ಉಳಿದ ವರದಿಗಳು ಮಂಗಳವಾರ ಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶುಭ ಸುದ್ದಿ; ಬೆಂಗಳೂರಲ್ಲಿ ಕೋವಿಡ್ ಸೋಂಕು ಗುಣಮುಖ ಹೆಚ್ಚಳ ಶುಭ ಸುದ್ದಿ; ಬೆಂಗಳೂರಲ್ಲಿ ಕೋವಿಡ್ ಸೋಂಕು ಗುಣಮುಖ ಹೆಚ್ಚಳ

11 Pourakarmikas Of Hagadur Ward Tested Positive For COVID 19

ಯಾವುದೇ ಪೌರ ಕಾರ್ಮಿಕರಿಗೆ ಕೋವಿಡ್ ಸೋಂಕಿನ ಲಕ್ಷಣಗಳು ಇಲ್ಲ. ಚಿಕ್ಕ ಮಕ್ಕಳು ಇರುವವರನ್ನು ಹೋಂ ಐಸೊಲೇಷನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ. ಅಧಿಕಾರಿಗಳು ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆಯನ್ನೂ ಸಹ ಮಾಡಿದ್ದಾರೆ.

Recommended Video

SP Balasubrahmanyam tested positive for coronavirus | Oneindia Kannada

ಕೊರೊನಾವೈರಸ್ ಬಗ್ಗೆ ಡೋಂಟ್ ಕೇರ್ ಎನ್ನುತ್ತಿದೆಯಾ ಬಿಬಿಎಂಪಿ? ಕೊರೊನಾವೈರಸ್ ಬಗ್ಗೆ ಡೋಂಟ್ ಕೇರ್ ಎನ್ನುತ್ತಿದೆಯಾ ಬಿಬಿಎಂಪಿ?

ಈ ಪೌರ ಕಾರ್ಮಿಕರು ಯಾರೂ ಸಹ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಕಾರ್ಯ ನಿರ್ವಹಣೆ ಮಾಡಿರಲಿಲ್ಲ. ಒಂದು ಮನೆಯಲ್ಲಿ ಮೂವರು ಮಕ್ಕಳಿಗೆ ಸೋಂಕು ತಗುಲಿದೆ. ಆದರೆ, ಅವರ ತಂದೆ-ತಾಯಿ, ಅಜ್ಜ-ಅಜ್ಜಿಗೆ ಸೋಂಕು ತಗುಲಿಲ್ಲ.

ವಾರ್ಡ್‌ನಲ್ಲಿನ ಕಸ ನಿರ್ವಹಣೆ ನೋಡಿಕೊಳ್ಳುವ ಸೂಪರ್‌ ವೈಸರ್‌ಗೆ ಕೋವಿಡ್ ಸೋಂಕು ತಗುಲಿತ್ತು. ಅವರಿಂದಾಗಿ ಪೌರ ಕಾರ್ಮಿಕರಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.

English summary
In a rapid antigen test 11 pourakarmikas of Bengaluru Hagadur ward tested positive for COVID 19. All asked for home isolation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X