ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಗರದ ಸಾಧಕರಿಗೆ 'ನಮ್ಮ ಬೆಂಗಳೂರು' ಪ್ರಶಸ್ತಿ ಗೌರವ

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ನಮ್ಮ ಬೆಂಗಳೂರು ಪ್ರಶಸ್ತಿಯ ಹತ್ತನೇ ಆವೃತ್ತಿಯ ಪ್ರಧಾನ ಕಾರ್ಯಕ್ರಮವು ಇಂದು ವಸಂತನಗರದಲ್ಲಿ ನಡೆದಿದ್ದು, ಐದು ವಿಭಾಗಗಳಲ್ಲಿ ಸಾಧನೆ ಮಾಡಿದ ಬೆಂಗಳೂರಿನ ವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವರ್ಷದ ನಾಗರೀಕ, ವರ್ಷದ ಉದಯೋನ್ಮುಖ ತಾರೆ, ವರ್ಷದ ಪತ್ರಕರ್ತ, ವರ್ಷದ ಸಾಮಾಜಿಕ ಉದ್ಯಮಿ, ವರ್ಷದ ಸರ್ಕಾರಿ ಅಧಿಕಾರಿ, ವರ್ಷದ ನಮ್ಮ ಬೆಂಗಳೂರಿಗ ಎಂಬ ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಇಂದು ನೀಡಲಾಯಿತು.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅರ್ಹರೆಲ್ಲರಿಗೂ ನಿವೃತ್ತ ನ್ಯಾಯಮೂರ್ತಿ ಎನ್.ವೆಂಕಟಾಚಲಯ್ಯ ಅವರು ಹಾಗೂ ಇತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ನಮ್ಮ ಬೆಂಗಳೂರು ಪ್ರಶಸ್ತಿ ನೊಂದಾವಣಿಗೆ ರಮೇಶ್ ಅರವಿಂದ್ ಚಾಲನೆನಮ್ಮ ಬೆಂಗಳೂರು ಪ್ರಶಸ್ತಿ ನೊಂದಾವಣಿಗೆ ರಮೇಶ್ ಅರವಿಂದ್ ಚಾಲನೆ

ಈ ವರ್ಷದ ಅತ್ಯುತ್ತಮ ನಾಗರೀಕ ಪ್ರಶಸ್ತಿಗೆ ಇತಿಹಾಸಜ್ಞ ಉದಯ್ ಕುಮಾರ್ ಪಿಎಲ್‌ ಅವರು ಭಾಜನರಾದರು, ಬೆಂಗಳೂರನ್ನು ಕೇಂದ್ರೀಕರಿಸಿ ಅವರು ಮಾಡಿರುವ ಇತಿಹಾಸ ಸಂಶೋಧನೆಗಳನ್ನು ನಮ್ಮ ಬೆಂಗಳೂರು ಫೌಂಡೇಶನ್ ಮತ್ತು ಬೆಂಗಳೂರಿನ ಜನತೆ ಗುರುತಿಸಿದ್ದಾರೆ.

ಏಪ್ರಿಲ್ 27 ರಂದು ಪ್ರತಿಷ್ಠಿತ 'ನಮ್ಮ ಬೆಂಗಳೂರು' ಪ್ರಶಸ್ತಿ ಪ್ರದಾನಏಪ್ರಿಲ್ 27 ರಂದು ಪ್ರತಿಷ್ಠಿತ 'ನಮ್ಮ ಬೆಂಗಳೂರು' ಪ್ರಶಸ್ತಿ ಪ್ರದಾನ

ವರ್ಷದ ರೈಸಿಂಗ್ ಸ್ಟಾರ್ ಪ್ರಶಸ್ತಿ

ವರ್ಷದ ರೈಸಿಂಗ್ ಸ್ಟಾರ್ ಪ್ರಶಸ್ತಿ

ವರ್ಷದ ರೈಸಿಂಗ್ ಸ್ಟಾರ್ ಪ್ರಶಸ್ತಿಗೆ ಮೇಘನಾ ಮೂರ್ತಿ ಅವರು ಭಾಜನರಾಗಿದ್ದಾರೆ. 'ನೋಹೆಸೆಟೇಷನ್' ಎಂಬ ಕಾರ್ಯಕ್ರಮದ ಮೂಲಕ ಕಾರ್ಯಾಗಾರಗಳನ್ನು ಹಮ್ಮಿಕೊಂಡು 1200 ಸರ್ಕಾರಿ ಶಾಲಾ ವಿದ್ಯಾರ್ಥಿನಿಯರಿಗೆ ಋತುಚಕ್ರ ಮತ್ತು ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿದ್ದಾರೆ.

ವರ್ಷದ ಸಾಮಾಜಿಕ ಉದ್ಯಮಿ ಪ್ರಶಸ್ತಿ

ವರ್ಷದ ಸಾಮಾಜಿಕ ಉದ್ಯಮಿ ಪ್ರಶಸ್ತಿ

2019ರ 'ವರ್ಷದ ಸಾಮಾಜಿಕ ಉದ್ಯಮಿ'ಪ್ರಶಸ್ತಿಗೆ ಸ್ವಚ್ಚ ಇಕೋ ಸೊಲ್ಯೂಶನ್ಸ್ ಸಂಸ್ಥೆಯ ಶ್ರೀ ರಾಜೇಶ್ ಬಾಬು & ಶ್ರೀಮತಿ ವಿಕ್ಟೋರಿಯಾ ಜೆ ಡಿಸೋಜಾರವರು ಭಾಜನರಾಗಿದ್ದಾರೆ. ತಂತ್ರಜ್ಞಾನ ಬಳಸಿಕೊಂಡು ಪ್ಲಾಸ್ಟಿಕ್ ತ್ಯಾಜ್ಯವನ್ನು ನವೀನ ಉತ್ಪನ್ನಗಳಾಗಿ ಪರಿವರ್ತಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ವರ್ಷದ ಪತ್ರಕರ್ತ ಪ್ರಶಸ್ತಿ

ವರ್ಷದ ಪತ್ರಕರ್ತ ಪ್ರಶಸ್ತಿ

ವರ್ಷದ ಪತ್ರಕರ್ತ ಪ್ರಶಸ್ತಿಯು ಟೈಮ್ಸ್‌ ಆಫ್ ಇಂಡಿಯಾದ ರೋಹಿತ್ ಬಿಆರ್‌ ಅವರಿಗೆ ನೀಡಲಾಗಿದೆ. ನಾಗರೀಕ ಸಮಸ್ಯೆಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಅವರು ವರದಿಗಾರಿಕೆ ಮಾಡಿದ್ದಾರೆ, ಹಾಗಾಗಿ ಅವರನ್ನು ಈ ವರ್ಷದ ಪತ್ರಕರ್ತನಾಗಿ ನಮ್ಮ ಬೆಂಗಳೂರು ಫೌಂಡೇಶ್ ಗುರುತಿಸಿದೆ.

ವರ್ಷದ ಅತ್ಯುತ್ತಮ ಸರ್ಕಾರಿ ಅಧಿಕಾರಿ

ವರ್ಷದ ಅತ್ಯುತ್ತಮ ಸರ್ಕಾರಿ ಅಧಿಕಾರಿ

ವರ್ಷದ ಅತ್ಯುತ್ತಮ ಸರ್ಕಾರಿ ಅಧಿಕಾರಿ ಪ್ರಶಸ್ತಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಅವರು ಭಾಜನರಾಗಿದ್ದಾರೆ. ಬೆಂಗಳೂರಿನ ಅಳಿವಂಚಿನಲ್ಲಿರುವ ಕಾಡನ್ನು ಉಳಿಸುವಲ್ಲಿ ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ. ಇವರು 130 ಎಕರೆ ಅರಣ್ಯ ಪ್ರದೇಶವನ್ನು ಹಿಂಪಡೆಯುವಲ್ಲಿ ಇವರು ಯಶಸ್ವಿಯಾಗಿದ್ದಾರೆ.

English summary
Namma Bengaluru foundation today distributed Namma Bengaluru award to achievers of Bengaluru. retired chief justice N Venkatachalayya distributed the awards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X