ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ.23ರ ಭಾನುವಾರ ಬೆಂಗಳೂರಿನಲ್ಲಿ ಪಿಂಕಥಾನ್

|
Google Oneindia Kannada News

ಬೆಂಗಳೂರು, ಫೆ.22 : ಸ್ತನ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಇವೆಂಟ್‌ ಸಲ್ಯೂಷನ್‌ ಸಂಸ್ಥೆ, ಫೆ.23ರ ಭಾನುವಾರ '10ಕೆ ಪಿಂಕಥಾನ್‌' ಆಯೋಜಿಸಿದ್ದು, ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಭಾರತದಲ್ಲಿ 22 ಮಹಿಳೆಯರ ಪೈಕಿ ಒಬ್ಬರು ಸ್ತನ ಕ್ಯಾನ್ಸರ್‌ ನಿಂದ ಬಳಲುತ್ತಿದ್ದಾರೆ. ಆದ್ದರಿಂದ ಅರಿವು ಮೂಡಿಸಲು ಈ ಪಿಂಕಥಾನ್ ಆಯೋಜಿಸಲಾಗಿದೆ. ಭಾನುವಾರ ಕಂಠೀರವ ಸ್ಟೇಡಿಯಂನ ಅರ್ಚರಿ ಮೈದಾನದಿಂದ ಪಿಂಕಥಾನ್ ಆರಂಭವಾಗಲಿದೆ. [ನೋಂದಣಿಗಾಗಿ ವೆಬ್ ಸೈಟ್]

Pinkathon

ಬೆಂಗಳೂರು ಹಾಗೂ ದೇಶದ ಇತರ ನಗರಗಳಲ್ಲಿ ಪಿಂಕಥಾನ್ ನಡೆಯಲಿದೆ. ಬೆಂಗಳೂರಿನಲ್ಲಿ ಸುಮಾರು 5 ಸಾವಿರ ಹಾಗೂ ದೇಶದ ವಿವಿಧ ನಗರಗಳಿಂದ ಸುಮಾರು 12 ಸಾವಿರ ಮಹಿಳೆಯರು ಪಿಂಕಥಾನ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಪಿಂಕಥಾನ್ ನೋಂದಣಿಯಿಂದ ಬರುವ ಹಣವನ್ನು ಅನಾಥ ಹೆಣ್ಣು ಮಕ್ಕಳ ಕ್ಯಾನ್ಸರ್‌ ಚಿಕಿತ್ಸೆಗಾಗಿ ಖರ್ಚು ಮಾಡುವ ಉದ್ದೇಶವನ್ನು ಇವೆಂಟ್ ಸಲ್ಯೂಷನ್ ಸಂಸ್ಥೆ ಇಟ್ಟುಕೊಂಡಿದೆ. ಮುಂಬೈ, ಪುಣೆ, ದೆಹಲಿ ಮತ್ತು ಬೆಂಗಳೂರಿನಲ್ಲಿ ಪಿಂಕಥಾನ್‌ನಲ್ಲಿ ನಡೆಯಲಿದೆ. ಭಾಗವಹಿಸಲು ಇಚ್ಚಿಸುವವರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. [ಬೆಂಗಳೂರು, ಭಾರತದ ನೂತನ ಸ್ತನ ಕ್ಯಾನ್ಸರ್ ರಾಜಧಾನಿ]

ಭಾರತದಲ್ಲಿ 22 ಮಹಿಳೆಯರ ಪೈಕಿ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ. ಭಾರತದಲ್ಲಿ ವಾರ್ಷಿಕ 1,15,000 ಸ್ತನ ಕ್ಯಾನ್ಸರ್‌ ಪ್ರಕರಣ ದಾಖಲಾಗುತ್ತಿವೆ. 2015ರಲ್ಲಿ ಈ ಸಂಖ್ಯೆ 2,50,000 ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಆದ್ದರಿಂದ ಜಾಗೃತಿ ಮೂಡಿಸಲು ಈ ಪಿಂಕಥಾನ್ ಆಯೋಜಿಸಲಾಗಿದೆ.

English summary
On Feb 23 Sunday Run for fitness & to Raise awareness about Breast Cancer at Pinkathon 2014. Run only for women. The objective of the event is to encourage women’s health and fitness. Events begins in Kanteerava Stadium. for details visit http://www.pinkathon.in/.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X