ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; 105 ವರ್ಷದ ಕೋವಿಡ್ ಸೋಂಕಿತ ರೋಗಿ ಸಾವು

|
Google Oneindia Kannada News

ಬೆಂಗಳೂರು, ಜುಲೈ 26 : ಕರ್ನಾಟಕದ ಹಿರಿಯ ಕೊರೊನಾ ವೈರಸ್ ಸೋಂಕಿತ ರೋಗಿಯಾಗಿದ್ದ 105 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಜೂನ್ 20ರಂದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Recommended Video

EMISAT ಪ್ರಕಾರ India China Border ನಲ್ಲಿ ಇನ್ನು ಬೆಂಕಿ ಆರಿಲ್ಲ | Oneindia Kannada

ಬಸವೇಶ್ವರ ನಗರದ ನಿವಾಸಿಯಾದ 105 ವರ್ಷದ ವೃದ್ಧ ಶನಿವಾರ ಮೃತಪಟ್ಟಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಮೊದಲು ಯಾವುದೇ ಉಸಿರಾಟದ ತೊಂದರೆ ಅವರಿಗೆ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಬೆಂಗಳೂರಲ್ಲಿ 105 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು ಬೆಂಗಳೂರಲ್ಲಿ 105 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು

ಅವರ ರಕ್ತದೊತ್ತಡ ಕಡಿಮೆಯಾಗಿ ಉಸಿರಾಟದ ತೊಂದರೆ ಆರಂಭವಾಯಿತು. ಆಗ ಅವರನ್ನು ಐಸಿಯುಗೆ ಸ್ಥಳಾಂತರ ಮಾಡಿ ಆಕ್ಸಿಜನ್ ವ್ಯವಸ್ಥೆ ಮಾಡಲಾಯಿತು. ಶುಕ್ರವಾರ ಮುಂಜಾನೆ ತನಕ ಅವರಿಗೆ ಆಕ್ಸಿಜನ್ ನೀಡಲಾಗುತ್ತಿತ್ತು. ಬಳಿಕ ವೆಂಟಿಲೇಟರ್ ಅಳವಡಿಕೆ ಮಾಡಲಾಗಿತ್ತು.

ತಿರುಪತಿಯಲ್ಲಿ ಕೋವಿಡ್‌ನಿಂದ 101 ವರ್ಷದ ವೃದ್ಧೆ ಗುಣಮುಖ ತಿರುಪತಿಯಲ್ಲಿ ಕೋವಿಡ್‌ನಿಂದ 101 ವರ್ಷದ ವೃದ್ಧೆ ಗುಣಮುಖ

105 Age Karnatakas Oldest COVID 19 Patient Dies

"ಶ್ವಾಸಕೋಶಕ್ಕೆ ಸೋಂಕು ತಗುಲಿದ್ದ ಕಾರಣ ಉಸಿರಾಟದ ತೊಂದರೆಯಿಂದಾಗಿ ಅವರು ಮೃತಪಟ್ಟರು" ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟವರು.

ಬಳ್ಳಾರಿ; ಕೊರೊನಾ ಗೆದ್ದ 93 ವರ್ಷದ ವೃದ್ಧೆಬಳ್ಳಾರಿ; ಕೊರೊನಾ ಗೆದ್ದ 93 ವರ್ಷದ ವೃದ್ಧೆ

ಸರ್ಕಾರಿ ಲೆಕ್ಕಾಧಿಕಾರಿಯಾಗಿದ್ದ ರೋಗಿ 1973ರಲ್ಲಿ ನಿವೃತ್ತಿ ಹೊಂದಿದ್ದರು. ಕರ್ನಾಟಕದಲ್ಲಿ ಇವರೇ ಇದುವರೆಗಿನ ಹಿರಿಯ ಕೊರೊನಾ ವೈರಸ್ ಸೋಂಕಿತ ರೋಗಿಯಾಗಿದ್ದರು. ಕೇಂದ್ರ ಆರೋಗ್ಯ ಸಚಿವಾಲಯ ನೀಡುವ ಮಾಹಿತಿಯಂತೆ ದೇಶದಲ್ಲಿ ಕೋವಿಡ್‌ನಿಂದ ಸಾವನ್ನಪ್ಪುವವರ ವಯೋಮಿತಿ 60 ರಿಂದ 74.

English summary
105-year-old man resident of Basaveshwara Nagar, Bengaluru died. He is the oldest Covid -19 patient admitted to hospital on June 20. Patient was a former government accountant who retired in 1973.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X