ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ವ್ಯಕ್ತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು ಬರೋಬ್ಬರಿ 104 ಬಾರಿ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14: ಸಾಮಾನ್ಯವಾಗಿ ಒಂದೆರೆಡು ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವುದುಂಟು, ಆದರೂ ಇದೀಗ ಟ್ರಾಫಿಕ್ ದಂಡದ ಭಯದಿಂದ ಅದೂ ಕೂಡ ಕಡಿಮೆಯಾಗಿದೆ.

Recommended Video

ಲಂಚ ಪಡೆದ ಪೊಲೀಸರು ಅಮಾನತು

ಆದರೆ ಈ ವ್ಯಕ್ತಿ ಬರೋಬ್ಬರಿ 104 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾನೆ.ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಮೊತ್ತ ಹೆಚ್ಚಳ ಮಾಡಿದ್ದ ಸರ್ಕಾರ, ಆ ದಂಡದ ಮೊತ್ತವನ್ನು ಈಗಾಗಲೇ ಇಳಿಕೆ ಮಾಡಿದೆ.

ಈ ಬೆಳವಣಿಗೆಯ ನಡುವೆ 104 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಮೊಹಮ್ಮದ್ ಶಬ್ಬೀರ್ ಎಂಬಾತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರು - ಟ್ರಾಫಿಕ್ ಉಲ್ಲಂಘನೆ: ಬೆಚ್ಚಿಬೀಳಿಸುವ ಸಂಗ್ರಹವಾದ ದಂಡದ ಮೊತ್ತಬೆಂಗಳೂರು - ಟ್ರಾಫಿಕ್ ಉಲ್ಲಂಘನೆ: ಬೆಚ್ಚಿಬೀಳಿಸುವ ಸಂಗ್ರಹವಾದ ದಂಡದ ಮೊತ್ತ

ಹಲವು ತಿಂಗಳಲ್ಲಿ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದ ಜಾಲಹಳ್ಳಿ ನಿವಾಸಿ ಶಬ್ಬೀರ್ 10 ಸಾವಿರ ರೂ. ದಂಡ ವಿಧಿಸಿರುವುದಾಗಿ ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲೇ ರಶೀದಿ ನೀಡಿ ದಂಡ ವಸೂಲಿ

ಸ್ಥಳದಲ್ಲೇ ರಶೀದಿ ನೀಡಿ ದಂಡ ವಸೂಲಿ

ಶಬ್ಬೀರ್‌ನಿಗೆ ಸ್ಥಳದಲ್ಲೇ ರಶೀದಿ ನೀಡಿ ದಂಡ ವಸೂಲಿ ಮಾಡಲಾಗಿದೆ. ಆತನ ಚಾಲನಾ ಪರವಾನಗಿ ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ. ಎಂದರು ತಿಳಿಸಿದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘನೆ

ಟ್ರಾಫಿಕ್ ನಿಯಮ ಉಲ್ಲಂಘನೆ

ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಶಬ್ಬೀರ್ ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ, ಝಿಬ್ರಾ ಕ್ರಾಸಿಂಗ್ ಸೇರಿ ಹಲವು ಬಗೆಯ ನಿಯಮ ಉಲ್ಲಂಘಿಸಿದ್ದ .

ದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರ

104 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ

104 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ

ಭಾನುವಾರ ಠಾಣೆ ವ್ಯಾಪ್ತಿಯಲ್ಲಿ ಹೊರಟಿದ್ದ ಆತ , ಹೆಲ್ಮೆಟ್ ಧರಿಸಿರಲಿಲ್ಲ. ಆತನನ್ನು ತಡೆದು ನಿಲ್ಲಿಸಿದ್ದ ಸಿಬ್ಬಂದಿ ನಿಯಮ ಉಲ್ಲಂಘನೆ ಪ್ರಶ್ನಿಸಿದ್ದರು. ವಾಹನದ ಸಂಖ್ಯೆಯನ್ನು ತಮ್ಮ ಬಳಿಯ ಉಪಕರಣಗಳಲ್ಲಿ ನಮೂದಿಸಿದಾಗಲೇ ಆತ 104 ಬಾರಿ ನಿಯಮ ಉಲ್ಲಂಘಿಸಿದ್ದು ಬೆಳಕಿಗೆ ಬಂದಿದೆ.

ಜಾಲಹಳ್ಳಿ ಮಾತ್ರವಲ್ಲದೆ ಹಲವು ಠಾಣೆ ವ್ಯಾಪ್ತಿಗಳಲ್ಲಿ ಆತ ನಿಯಮ ಉಲ್ಲಂಘಿಸಿದ್ದ ಕೆಲ ಕಡೆ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾಗ ಅವರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ

ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ

ಕರ್ತವ್ಯನಿರತ ಪೋಲೀಸರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ವ್ಯಾಪಕವಾಗುತ್ತಿದೆ.. ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಶುಕ್ರವಾರ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಒಬ್ಬನನ್ನು ಹಿಡಿದ ನಂತರಟ್ರಾಫಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನನ್ನು ಐದು ಜನರ ಗುಂಪು ಥಳಿಸಿ ಹಲ್ಲೆ ನಡೆಸಿದೆ.

ಸಂಚಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಯನ್ನು ಹಿಡಿದ ನಂತರ ಆತ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆತಂದಿದ್ದಾನೆ. ಹಾಗೆಯೇ ಪೋಲೀಸ್ ಅಧಿಕಾರಿ ತಪ್ಪಿಸಿಕೊಳ್ಳುವ ಮುನ್ನ ಆತನ ಮೇಲೆ ಹಲ್ಲೆ ನಡೆದಿದೆ.

English summary
Food delivery executive Mohammed Shabbir had the shock of his life when the Honda Activa he was riding was flagged down at Ramachandrapura cross near Jalahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X