ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1 ಸಾವಿರ ಮಂದಿಯ ಕೊರೊನಾ ವರದಿ: ಬೆಂಗಳೂರಿಗೆ ವರವೋ ಶಾಪವೋ?

|
Google Oneindia Kannada News

ಬೆಂಗಳೂರು, ಮೇ 26: ಸಿಲಿಕಾನ್ ಸಿಟಿ ಬೆಂಗಳೂರು ಪಾಲಿಗೆ ಮೇ 26 ಮಹತ್ವದ ದಿನ ಆಗಲಿದೆ. ಯಾಕಂದ್ರೆ ಇಂದು 1 ಸಾವಿರ ಮಂದಿಯ ಕೊರೊನಾ ವೈರಸ್ ಪರೀಕ್ಷೆಯ ವರದಿ ಬರುವ ಸಾಧ್ಯತೆ ಇದೆ.

ಹಾಗಾಗಿ, ರಾಜ್ಯದಲ್ಲಿ ಇಂದು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಲಿದ್ಯಾ ಎಂಬ ಆತಂಕ ಕಾಡುತ್ತಿದೆ. ಎರಡ್ಮೂರು ವಾರಗಳಿಂದ ಬೆಂಗಳೂರಿನಲ್ಲಿ ಹೆಚ್ಚು ಕೊವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ.

ಕೊವಿಡ್-19 ನಿಯಂತ್ರಣದಲ್ಲಿ ಬೆಂಗಳೂರೇ ಸೈ, ವಾರಿಯರ್ಸ್ ಗೆ ಜೈ! ಕೊವಿಡ್-19 ನಿಯಂತ್ರಣದಲ್ಲಿ ಬೆಂಗಳೂರೇ ಸೈ, ವಾರಿಯರ್ಸ್ ಗೆ ಜೈ!

ಆದ್ರೆ, ಇಂದಿನ ವರದಿ ಮೇಲೆ ರಾಜ್ಯದ ಕಣ್ಣು ಬಿದ್ದಿದೆ. ಕ್ವಾರಂಟೈನ್‌ನಲ್ಲಿದ್ದವರು, ಕಂಟೈನ್ಮೆಂಟ್ ಝೋನ್‌ನಲ್ಲಿದ್ದವರು, ವಿದೇಶದ ಪ್ರಯಾಣಿಕರು ಸೇರಿ ಹಲವರ ರಿಪೋರ್ಟ್ ಬರಲಿದೆ.

1000 Coronavirus test report is coming up today in Bengaluru

ಮಧ್ಯಾಹ್ನದ ಒಂದು ಬ್ಯಾಚ್‌ನಲ್ಲಿ ಹಾಗೂ ಸಂಜೆ ಇನ್ನೊಂದು ಬ್ಯಾಚ್‌ನಲ್ಲಿ ವರದಿ ಬರಲಿದೆ ಎನ್ನಲಾಗಿದೆ. ಈ ಹಿನ್ನೆಲೆ ಕೊರೋನಾ ಶಂಕಿತರ ವರದಿಗೆ ಆರೋಗ್ಯಾಧಿಕಾರಿಗಳು ಕಾಯುತ್ತಿದ್ದಾರೆ. ಬೆಂಗಳೂರು ಹೊರತು ಪಡಿಸಿ ಇನ್ನುಳಿದಂತೆ ಬೇರೆ ಜಿಲ್ಲೆಗಳಿಂದಲೂ ಹಲವರ ವರದಿ ಬರಲಿದೆ ಎಂದು ಬೆಂಗಳೂರು DHO ಗುಳೂರು ಶ್ರೀನಿವಾಸ್ ಹೇಳಿದ್ದಾರೆ.

ಮತ್ತೊಂದೆಡೆ ಕೇಂದ್ರ ಸರ್ಕಾರ ಬೆಂಗಳೂರಿನ ಕುರಿತು ಪ್ರಶಂಸೆ ವ್ಯಕ್ತಪಡಿಸಿದೆ. ಕೊರನಾ ವೈರಸ್ ನಿಯಂತ್ರಣೆ ಮಾಡುತ್ತಿರುವ ದೇಶದ ನಾಲ್ಕು ಮಾದರಿ ನಗರಗಳನ್ನು ಗುರುತಿಸಲಾಗಿದೆ. ಅದರಲ್ಲಿ ಬೆಂಗಳೂರು ನಗರವೂ ಒಂದಾಗಿದೆ. ಈ ಫಲಿತಾಂಶಕ್ಕೆ ರಾಜ್ಯದ ಸಿಎಂ ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Today is most important Day for Bengaluru. because, 1000 Coronavirus test report is coming up today in city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X