ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶಸ್ವಿಯಾಗಿ ಜರುಗಿದ 'ಸಿಟಿ ಟು ವಿಲೇಜ್' ವಾಕಥಾನ್

|
Google Oneindia Kannada News

ಬೆಂಗಳೂರು, ಫೆಬ್ರವರಿ 24: ಗುರೂಜಿ ನಂದಕಿಶೋರ್ ತಿವಾರಿ ಸ್ಥಾಪಿಸಿದ ದರ್ಪಣ್ ಫೌಂಡೇಶನ್ ವತಿಯಿಂದ ಇತ್ತೀಚೆಗೆ ಗ್ರಾಮೀಣ ಶಾಲಾ ಮಕ್ಕಳ ಅಭಿವೃದ್ಧಿ ಹಾಗೂ ಸುಸ್ಥಿರ ಕೃಷಿ ಬಗ್ಗೆ 'ಸಿಟಿ ಟು ವಿಲೇಜ್' ವಾಕಥಾನ್ ಯಶಸ್ವಿಯಾಗಿ ಜರುಗಿತು.

ಶನಿವಾರ ಬೆಳಿಗ್ಗೆ ಬನ್ನೆರುಘಟ್ಟದಿಂದ ಆರಂಭವಾದ ಈ ವಾಕಥಾನ್ ಸಂಜೆ ತಮಿಳುನಾಡಿನ ದರ್ಪಣ್ ಫೌಂಡೇಶನ್ ಆಶ್ರಮವಿರುವ ಉರಿಗಂನಲ್ಲಿ ಅಂತ್ಯಗೊಂಡಿತು. 100 ಕಿಲೋ ಮೀಟರ್‌ನ ವಾಕಥಾನ್ ಇದಾಗಿತ್ತು.

ಈ ವೇಳೆ ದರ್ಪಣ್ ಆಶ್ರಮ ಅಭಿವೃದ್ಧಿಪಡಿಸಿದ 5 ಪದರಗಳ ನೈಸರ್ಗಿಕ ಕೃಷಿ ಮಾದರಿಯ ಬಗ್ಗೆ ಮತ್ತು ನೀರನ್ನು ಹೇಗೆ ಸಂರಕ್ಷಿಸಬೇಕು ಎಂದು ಡಾ.ಪ್ರಭಾಕರ್ ಅವರು ಮಾರ್ಗದಲ್ಲಿ ರೈತರಿಗೆ ಮಾಹಿತಿ ನೀಡಿದರು. ಗ್ರಾಮೀಣ ಜನರ ಕೌಶಲ್ಯ ಅಭಿವೃದ್ಧಿಗೆ ದರ್ಪಣ್ ಆಶ್ರಮ ಕೈಗೊಂಡ ಉಪಕ್ರಮಗಳ ಬಗ್ಗೆ ರೈತರು ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರೊಂದಿಗೆ ಅನೇಕ ದರ್ಪಣ್ ಸ್ವಯಂಸೇವಕರು ಮತ್ತು ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.

100 KM City To Village Walkathon By Darpan Foundation

ವಾಕಥಾನ್‌ನಲ್ಲಿ ತಮಿಳುನಾಡು ಮತ್ತು ಕರ್ನಾಟಕದ ಶಾಲಾ ಮಕ್ಕಳು ಭಾಗವಹಿಸಿದ್ದರು. ೫೦ ಕ್ಕೂ ಹೆಚ್ಚು ದರ್ಪಣ್ ಸ್ವಯಂಸೇವಕರು ಭಾಗವಹಿಸಿದ್ದರು.

English summary
100 KM Walkathon By Darpan Foundation. City To Village Walkathon Done Bengaluru To Urugam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X