ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಪರಮೇಶ್ವರ 100 ಐಟಿಐ ಸ್ಥಾಪನೆ ಮಾಡ್ತಾರಂತೆ

By Srinath
|
Google Oneindia Kannada News

100 ITIs to be opened cost of Rs 1000 cr Karnataka Labour Minister P T Parameshwara Naik,
ಬೆಂಗಳೂರು, ನ.13: ನೂರು ಐಟಿಐ ಕಾಲೇಜುಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಕಾರ್ಮಿಕ ಸಚಿವ ಪಿಟಿ ಪರಮೇಶ್ವರ ನಾಯ್ಕ ಅವರು ನೂರನೇ ಬಾರಿ ಹೇಳಿದಂತಿದೆ.

ಐದಾರು ತಿಂಗಳಿಂದ ಹೋದ ಕಡೆಯಲ್ಲೆಲ್ಲಾ ರಾಜ್ಯದಲ್ಲಿ ನೂರು ಐಟಿಐ ಕಾಲೇಜುಗಳನ್ನು ಆರಂಭಿಸುವುದಾಗಿ ಹೇಳುತ್ತಾ ಬಂದಿರುವ ಕಾರ್ಮಿಕ ಸಚಿವ ಪಿಟಿ ಪರಮೇಶ್ವರ ನಾಯ್ಕ ಅವರು ಆ ಬಗ್ಗೆ ಯಾವುದೇ ದಿಟ್ಟ ನಿರ್ಧಾರ ತೆಗೆದುಕೊಂಡ ಲಕ್ಷಣಗಳು ಕಂಡುಬರುತ್ತಿಲ್ಲ. ಆದರೆ ಮುಂದಿನ ಶೈಕ್ಷಣಿಕ ವರ್ಷಾರಂಭದ ವೇಳೆಗೆ 1,000 ಕೋಟಿ ರೂ. ವೆಚ್ಚದಲ್ಲಿ 100 ಐಟಿಐ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದಾಗಿ ನಿನ್ನೆ ತಾಜಾ ಆಗಿ ಪುನರುಚ್ಚರಿಸಿದ್ದಾರೆ.

ರಾಜ್ಯದ 53 ತಾಲೂಕುಗಳಲ್ಲಿ ಇನ್ನೂ ಐಟಿಐ ಕಾಲೇಜುಗಳಿಲ್ಲ. ಅದಕ್ಕಾಗಿ ಹೊಸದಾಗಿ ಒಂದು ನೂರು ಐಟಿಐ ಕಾಲೇಜುಗಳನ್ನು ತೆರೆಯಲು ಮತ್ತು ಹಳೆಯ ಐಟಿಐ ಕಾಲೇಜುಗಳನ್ನು ನವೀಕರಣಗೊಳಿಸುವ ಕುರಿತು ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾನ್ಯ ಸಚಿವರು ಹೇಳುತ್ತಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಐಟಿಐ ಅಭ್ಯರ್ಥಿಗಳಿಗೆ ಸಾಕಷ್ಟು ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಯುವಕರಿಗೆ ಸೂಕ್ತ ತರಬೇತಿಯನ್ನು ನೀಡಬೇಕಿದೆ. ಜರ್ಮನ್ ನೆರವಿನಿಂದ ಐಟಿಐಯ ಎಲೆಕ್ಟ್ರಿಷಿಯನ್ ಟ್ರೇಡನ್ನು ಆಧುನೀಕರಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದೂ ನಾಯ್ಕರ ತಿಳಿಸಿದ್ದಾರೆ.

92 ITIಗಳಿಗೆ ಜಮೀನು ಗುರುತಿಸಲಾಗಿದೆ. ಇದಕ್ಕಾಗಿ ಸುಮಾರು 2 ಸಾವಿರ ಸಿಬ್ಬಂದಿ ಅಗತ್ಯವಿದೆ. ರಾಜ್ಯ ಸರಕಾರ ಭಾಗಶಃ ಧನ ಸಹಾಯ ಮಾಡಲಿದ್ದು, ಕೇಂದ್ರವು ಯಂತಯ್ರೋಪಕರಣ ಸೇರಿದಂತೆ ಉಳಿದ ಧನ ಸಹಾಯ ಮಾಡಲಿದೆ. NABARDನಿಂದಲೂ ಸಾಲ ಪಡೆಯಲಾಗುವುದು ಎಂದು ಹೇಳಿದ್ದಾರೆ.

English summary
100 ITIs to be opened at the cost of Rs 1000 cr. Land has been identified for 92 of those proposed ITIs which require a staff strength in the range of 1,500-2,000 Karnataka Labour Minister P T Parameshwara Naik told reporters on Nov 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X