ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಹೊಸದಾಗಿ 10 ಕೊರೊನಾ ಪ್ರಕರಣ ಪತ್ತೆ, 207ಕ್ಕೆ ಏರಿಕೆ

|
Google Oneindia Kannada News

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 10 ಕೊವಿಡ್ ಕೇಸ್ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ.

ಈ ಕುರಿತು ಸರ್ಕಾರದಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದ್ದು, ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ. ಹತ್ತು ಪ್ರಕರಣಗಳ ಪೈಕಿ ಬೆಂಗಳೂರು 2, ಬೆಂಗಳೂರು ಗ್ರಾಮಾಂತರ 2, ಮೈಸೂರು 5, ಕಲಬುರಗಿಯಲ್ಲಿ 1 ಕೇಸ್ ದೃಢವಾಗಿದೆ.

ಕೊರೊನಾ ದಾಳಿಗೆ ಡೇಂಜರ್ ಝೋನ್‌ ಪ್ರವೇಶಿಸಿರುವ ಭಾರತದ 5 ರಾಜ್ಯಗಳುಕೊರೊನಾ ದಾಳಿಗೆ ಡೇಂಜರ್ ಝೋನ್‌ ಪ್ರವೇಶಿಸಿರುವ ಭಾರತದ 5 ರಾಜ್ಯಗಳು

ಹೊಸದಾಗಿ ಪತ್ತೆಯಾಗಿರುವ ಈ ಹತ್ತು ಜನರು, ಈ ಹಿಂದೆ ಸೋಂಕಿಗೆ ಒಳಪಟ್ಟವರ ಸಂಪರ್ಕದಲ್ಲಿದ್ದವರು ಎನ್ನುವುದು ಗಮನಾರ್ಹ. ಆರು ಜನ ಪುರುಷ ಮತ್ತು ನಾಲ್ಕು ಜನ ಮಹಿಳೆಯರಲ್ಲಿ ಸೋಂಕು ದಾಖಲಾಗಿದೆ. ಇದರಲ್ಲಿ 8 ವರ್ಷದ ಹುಡುಗ ಮತ್ತು 11 ವರ್ಷದ ಬಾಲಕಿಯೂ ಸೇರಿದ್ದಾರೆ.

10 New COVID 19 Cases Reported In Karnataka

ಇನ್ನು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಕಾರಣ, ಲಾಕ್‌ಡೌನ್‌ ವಿಸ್ತರಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತಿಸಿದೆ. ಈಗಾಗಲೇ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ್ದು, ಲಾಕ್‌ಡೌನ್‌ ವಿಸ್ತರಣೆ ಮಾಡುವಂತೆ ಬೇಡಿಕೆ ಬಂದಿದೆ ಎಂದು ಸಿಎಂ ಹೇಳಿದ್ದಾರೆ.

ಕೊರೊನಾ ಕಡಿವಾಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೀಲ್ ಡೌನ್?ಕೊರೊನಾ ಕಡಿವಾಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೀಲ್ ಡೌನ್?

ಶನಿವಾರ ಬೆಳಿಗ್ಗೆ ಪ್ರಧಾನಿ ಮೋದಿ, ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚಿಸಲಿದ್ದಾರೆ. ಈ ಚರ್ಚೆಯ ಬಳಿಕ ಲಾಕ್‌ಡೌನ್‌ ಮುಂದುವರಿಯವ ಕುರಿತು ಅಧಿಕೃತ ಮಾಹಿತಿ ಸಿಗಲಿದೆ ಎಂದು ಖುದ್ದಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

English summary
10 new coronavirus cases reported in karnataka. bengaluru 2, bengaluru rural 2, mysore 5 and kalaburagi 1 case reported
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X