ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10 ಪೊಲೀಸ್ ಯೂನಿಫಾರ್ಮ್ ಖರೀದಿಸಿದ್ದು ಯಾರು?

|
Google Oneindia Kannada News

ಬೆಂಗಳೂರು, ನ. 13 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶಕ್ಕಾಗಿ ಬೆಂಗಳೂರು ಪೊಲೀಸರು ಅಗತ್ಯ ಸಿದ್ಧತೆ ಕೈಗೊಳ್ಳುತ್ತಿರುವ ಹೊತ್ತಿನಲ್ಲೇ, ಅನಾಮಿಕ ವ್ಯಕ್ತಿಯೊಬ್ಬರು 10 ಪೊಲೀಸ್ ಸಮವಸ್ತ್ರ ಖರೀದಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದನ್ನು ಖರೀದಿ ಮಾಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಎರಡು ದಿನಗಳ ಹಿಂದೆ ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯ ಸಮವಸ್ತ್ರ ಒದಗಿಸುವ ಟೈಲರ್ ನಿಂದ ಸಮಸ್ತ್ರದ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದ ಅನಾಮಿಕ ವ್ಯಕ್ತಿ, 10 ಸಮವಸ್ತ್ರ ಖರೀದಿಸಿದ್ದಾನೆ, ಮಾರುಕಟ್ಟೆಯಿಂದ ಲಾಠಿ ಮತ್ತು ಟೋಪಿಗಳನ್ನು ಖರೀದಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಇದನ್ನು ದೃಢಪಡಿಸಿದ್ದು, ಹೆಚ್ಚಿನ ಮಾಹಿತಿ ನೀಡಲು ನಿಕಾರಿಸಿದ್ದಾರೆ.

 police

ನರೇಂದ್ರ ಮೋದಿ ಅವರ ಸಮಾವೇಶದ ಹಿನ್ನಲೆಯಲ್ಲಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಿದ್ದಾರೆ, ಪೊಲೀಸ್ ಇಲಾಖೆಗೆ ಸಮವಸ್ತ್ರ ಪೂರೈಸುವ ಟೈಲರ್ ಅನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಅನಾಮಿಕ ವ್ಯಕ್ತಿ ಹೇಗಿದ್ದ ಎಂಬ ಕುರಿತು ಟೈಲರ್ ಪೊಲೀಸರಿಗೆ ವಿವರ ನೀಡಿದ್ದಾರೆ. ಪ್ರಾಥಮಿಕ ತನಿಖೆಯಂತೆ ಖರೀದಿ ಮಾಡಿರುವ ವ್ಯಕ್ತಿ ಉತ್ತರ ಭಾರತ ಮೂಲದವನು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸದ್ಯ ಬೆಂಗಳೂರು ಪೊಲೀಸರು ಸಮವಸ್ತ್ರ ಖರೀದಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಅನುಮಾನ ಬಂದ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಿ ತನಿಖೆ ನಡೆಸಲು ಮುಂದಾಗಿದ್ದಾರೆ. ನರೇಂದ್ರ ಮೋದಿ ಸಮಾವೇಶದ ಹಿನ್ನಲೆಯಲ್ಲಿ ತನಿಖೆ ಚುರುಕುಗೊಳಿಸಲಾಗಿದ್ದು, ಪ್ರಕರಣವನ್ನು ಬಗರಹರಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.

ನರೇಂದ್ರ ಮೋದಿ ಅವರ ಸಮಾವೇಶದ ಭದ್ರತೆಯ ನೋಡಿಕೊಳ್ಳುತ್ತಿರುವ ಪೊಲೀಸರಿಗೆ ವಿಶೇಷ ಪಾಸ್ ಗಳನ್ನು ನೀಡಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ. ಆ ಮೂಲಕ ನಕಲಿ ಸಮವಸ್ತ್ರ ಧರಿಸಿ ಬರುವ ಅನಾಮಿಕ ವ್ಯಕ್ತಿಗಳನ್ನು ತಡೆಯಲು ಮುಂದಾಗಿದ್ದಾರೆ.

English summary
The purchase of a quantity of police uniforms from a tailor in Shivajinagar Bangalore a week ago by an unidentified man has made the city police jittery. BJP's prime ministerial candidate Narendra Modi set to address a rally in the city on the weekend, so police brass is being extra cautious. police commissioner Raghavendra Auradkar confirmed the incident, but refused to divulge any detail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X