ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಏರ್ಪೋರ್ಟಲ್ಲಿ 2 ಕೋಟಿ ಬೆಲೆಯ ಮಾದಕ ವಸ್ತು ವಶ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರಿಂದ ರಫ್ತಾಗಲು ಹೊರಟಿದ್ದ 10 ಕೆಜಿ ಮಾದಕ ಪದಾರ್ಥ ಎಫೆಡ್ರಿನ್ ವಶಕ್ಕೆ ಪಡೆಯಲಾಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 2 ಕೋಟಿ ಎಂದು ಅಂದಾಜು ಮಾಡಲಾಗಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 25: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರಿಂದ ರಫ್ತಾಗಲು ಹೊರಟಿದ್ದ 10 ಕೆಜಿ ಮಾದಕ ಪದಾರ್ಥ ವಶಕ್ಕೆ ಪಡೆಯಲಾಗಿದೆ.

ವಶಕ್ಕೆ ಪಡೆದ ನಿಷೇಧಿತ ಮಾದಕ ವಸ್ತುವನ್ನು ಎಫೆಡ್ರಿನ್ ಎಂದು ಗುರುತಿಸಲಾಗಿದೆ. ಇದೊಂದು ದುಬಾರಿ ಮಾದಕ ವಸ್ತುವಾಗಿದ್ದು ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 2 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ.

10 kgs of contraband Ephedrine seized in Kempegowda International Airport

ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ವಲಯದ ಮಾದಕ ವಸ್ತು ನಿಯಂತ್ರಣ ದಳ (ಎನ್ ಸಿಬಿ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇದನ್ನು ವಶಕ್ಕೆ ಪಡೆದಿದ್ದಾರೆ.

ಮುಜೀಬುರ್ ರೆಹಮಾನ್ ನೈನಾ ಮೊಹಮ್ಮದ್ ಎಂಬ ಚೆನ್ನೈ ಮೂಲದ ವ್ಯಕ್ತಿಯ ಬ್ಯಾಗಿನಲ್ಲಿ ಈ ಮಾದಕ ವಸ್ತು ಪತ್ತೆಯಾಗಿದೆ. ಆತ ವಿಮಾನ ಬೆಂಗಳೂರಿನಿಂದ ಮಲೇಷ್ಯಾಗೆ ಪ್ರಯಾಣಿಸಲು ಹೊರಟಿದ್ದ ಎನ್ನಲಾಗಿದೆ. ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

10 kgs of contraband Ephedrine seized in Kempegowda International Airport

ಆತನ ಬಳಿ 35 ಮಕ್ಕಳ ಬ್ಯಾಗುಗಳಿತ್ತು. ಇದರಲ್ಲಿ ಈ ಮಾದಕ ವಸ್ತುಗಳನ್ನು ಅಡಗಿಸಡಲಾಗಿತ್ತು. ಇನ್ನು ವಿಚಾರಣೆ ವೇಳೆ ತಾನು ಮಲೇಷ್ಯಾ. ಶ್ರೀಲಂಕಾ ಮೊದಲಾದ ದೇಶಗಳಿಗೆ ಮಾದಕ ವಸ್ತು ಕಳ್ಳ ಸಾಗಣೆ ಮಾಡುತ್ತಿದ್ದುದಾಗಿ ಆತ ಹೇಳಿದ್ದಾನೆ ಎನ್ನಲಾಗಿದೆ.

ಮಾದಕ ವಸ್ತು ನಿಯಂತ್ರಣ ಕಾಯ್ದೆಯಡಿಯಲ್ಲಿ ಎಫೆಡ್ರಿನ್ ಕಳ್ಳ ಸಾಗಣೆ ಮಾಡಿದರೆ 10 ವರ್ಷ ತನಕ ಜೈಲು ಶಿಕ್ಷೆ ವಿಧಿಸುವ ಅವಕಾಶಗಳಿವೆ.

English summary
Narcotics Control Bureau (NCB) seized 10 kgs of illicit contraband Ephedrine in Kempegowda International Airport, Bengaluru. The value of the seized drug was about Rs 2 crore in international market. One accused arrested in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X