ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ಬಂಧನ ಸಾಧ್ಯತೆ; ಲಾಕರ್ ನಲ್ಲಿ 10 ಕೋಟಿ ನಗದು, ಚಿನ್ನ ಪತ್ತೆ

ಡಿ.ಕೆ. ಶಿವಕುಮಾರ್ ಅವರ ನಿವಾಸಗಳ ಮೇಲೆ ಐಟಿ ರೈಡ್. ಸಂಜೆ ಹೊತ್ತಿಗೆ ಅವರಿಗೆ ಸೇರಿದ ಲಾಕರ್ ನಿಂದ 10 ಕೆಜಿ ಚಿನ್ನ, 10 ಕೋಟಿ ರು. ಹಣ ಜಪ್ತಿ. ಯಾವುದೇ ಕ್ಷಣದಲ್ಲಿ ಡಿಕೆ ಶಿವಕುಮಾರ್ ಅವರ ಬಂಧನ ಸಾಧ್ಯತೆ.

|
Google Oneindia Kannada News

ಬೆಂಗಳೂರು, ಆಗಸ್ಟ್ 2: ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿರುವ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆಯಲ್ಲಿನ ಲಾಕರ್ ನಲ್ಲಿ ಏನಿದೆ ಎಂಬ ಪ್ರಶ್ನೆಗೆ ಉತ್ತರ ನಿಧಾನವಾಗಿ ಲಭ್ಯವಾಗುತ್ತಿದೆ. ಇದರ ಜತೆಯಲ್ಲೇ, ಅವರನ್ನು ಐಟಿ ಅಧಿಕಾರಿಗಳು ಯಾವುದೇ ಕ್ಷಣದಲ್ಲಾದರೂ ಬಂಧಿಸಬಹುದು ಎಂದು ಹೇಳಲಾಗುತ್ತಿದೆ.

ಪವರ್ ಸಚಿವ ಡಿಕೆ ಶಿವಕುಮಾರ್ ಅಂದಾಜು ಆಸ್ತಿ ಎಷ್ಟಿದೆ?ಪವರ್ ಸಚಿವ ಡಿಕೆ ಶಿವಕುಮಾರ್ ಅಂದಾಜು ಆಸ್ತಿ ಎಷ್ಟಿದೆ?

ಸದ್ಯಕ್ಕೆ ಬಂದಿರುವ ಮಾಹಿತಿಯ ಪ್ರಕಾರ, ಲಾಕರ್ ನಲ್ಲಿ 10 ಕೋಟಿ ನಗದು, 10 ಕೆಜಿ ಚಿನ್ನಾಭರಣ ಸಿಕ್ಕಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಲಾಕರ್ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರರಿಗೆ ಸೇರಿದ್ದು ಎನ್ನಲಾಗಿದ್ದು, ಇದರಲ್ಲಿರುವ 10 ಕೆ.ಜಿ. ಚಿನ್ನಾಭರಣವು, ನೋಟ್ ಬ್ಯಾನ್ ಗೂ ಮೊದಲೇ ಖರೀದಿಸಿದ್ದಾಗಿ ಡಿಕೆ ಶಿವಕುಮಾರ್ ಅವರು ಐಟಿ ಅಧಿಕಾರಿಗಳಿಗೆ ವಿಚಾರಣೆ ವೇಳೆ ತಿಳಿಸಿದ್ದಾರೆಂದು ಹೇಳಲಾಗಿದೆ.

10 KG Gold, 10 crore recovered by IT officials, DK Shivakumar may get arrested: Sources

ಲಾಕರ್ ನಲ್ಲಿ ಸಿಕ್ಕಿರುವ ಹಣ, ಚಿನ್ನ ಹಾಗೂ ಬೆಳಗ್ಗೆ ಡಿಕೆ ಶಿವಕುಮಾರ್ ಅವರಿಗೆ ಸಂಬಂಧಪಟ್ಟ ನಿವಾಸಗಳ ಮೇಲೆ ನಡೆದ ಐಟಿ ರೈಡ್ ವೇಳೆಯಲ್ಲಿ ಸಿಕ್ಕ ಸಂಪತ್ತಿನ ಹಿನ್ನೆಲೆಯಲ್ಲಿ, ಹೆಚ್ಚಿನ ವಿಚಾರಣೆಗಾಗಿ ಡಿಕೆಶಿ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ

ಬುಧವಾರ ಬೆಳಗಿನ ಝಾವವೇ ಡಿಕೆ ಶಿವಕುಮಾರ್ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ರೈಡ್ ಮಾಡಿದ್ದರು. ಆ ವೇಳೆಯಲ್ಲಿ, ಅವರಿಗೆ ಸೇರಿದ್ದ ಲಾಕರ್ ಪತ್ತೆಯಾಗಿತ್ತು.

ಹಾಗಾಗಿ, ಮನೆಯಲ್ಲಿ ಸಿಕ್ಕಿದ್ದ ಲಾಕರ್ ತೆಗೆಯಲು ಡಿಕೆಶಿ ಅವರೇ ಖುದ್ದಾಗಿ ಬರಬೇಕಾಗಿದ್ದರಿಂದ ಬುಧವಾರ ಸಂಜೆಯ ಹೊತ್ತಿಗೆ ಅವರನ್ನು ಅವರ ಮನೆಗೆ ಅಧಿಕಾರಿಗಳು ಕರೆ ತಂದರು. ಆನಂತರ, ಲಾಕರ್ ನ ಬೀಗದ ಕೈಯ್ಯನ್ನು ಉಪಯೋಗಿಸಿ ಲಾಕರ್ ತೆರೆಯಲಾಯಿತು ಎಂದು ವರದಿಗಳು ಹರಿದಾಡಿವೆ.

English summary
Income Tax officials recover 10 KG gold and jewellers and currency of 10 crore value from Karnataka's Power Minister DK Shivakumar's home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X