ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Video: ಕರ್ನಾಟಕದಲ್ಲಿ ಬಡ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ 10 ಕೆಜಿ ಅಕ್ಕಿ ಉಚಿತ

|
Google Oneindia Kannada News

ದೊಡ್ಡಬಳ್ಳಾಪುರ, ಜುಲೈ 18: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ 10 ಕೆಜಿ ಉಚಿತ ಅಕ್ಕಿಯನ್ನು ಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆ.

ದೊಡ್ಡಬಳ್ಳಾಪುರದ ಭಗತ್ ಸಿಂಗ್ ನಗರದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡವರಿಗೆ ಫುಡ್ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಕಂಬಳಿ ಹಾಗೂ ಟಗರು ನೀಡುವ ಮೂಲಕ ವಿನೂತನವಾಗಿ ಗೌರವಿಸಲಾಯಿತು. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸಿದ್ದರಾಮಯ್ಯ ಗುಡುಗಿದರು.

Recommended Video

ಬೆಂಗಳೂರು: ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ತಲಾ 10ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

Video: ಸುರಿಯುವ ಮಳೆ ನಡುವೆ ನಿಂತು ಡಿ ಕೆ ಶಿವಕುಮಾರ್ ಭಾಷಣ!Video: ಸುರಿಯುವ ಮಳೆ ನಡುವೆ ನಿಂತು ಡಿ ಕೆ ಶಿವಕುಮಾರ್ ಭಾಷಣ!

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. "ಬಡವರು ಎರಡು ಹೊತ್ತಾದರೂ ಊಟ ಮಾಡಲೇಬೇಕು. ಯಾರೊಬ್ಬರೂ ಹಸಿದುಕೊಂಡು ಇರಬಾರದು. ಕಾಂಗ್ರೆಸ್ ಪಕ್ಷವು ಬಡವರ ಹಸಿವು ನೀಗಿಸುವ ಕೆಲಸವನ್ನು ಮಾಡುತ್ತದೆ. ನಾವೆಲ್ಲ ಸಾಂಕೇತಿಕವಾಗಿ ನಾಲ್ಕೈದು ಜನರಿಗೆ ಆಹಾರದ ಕಿಟ್ ಅನ್ನು ಕೊಟ್ಟು ಹೋಗುತ್ತೇವೆ. ಉಳಿದ ಸಾರ್ವಜನಿಕರಿಗೆ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿತರಿಸುತ್ತಾರೆ," ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

10 KG Free rice For Poor Peoples Of Karnataka After Congress Come To Power: Ex-CM Siddaramaiah

ಎಲ್ಲಿದೆ ಅಚ್ಛೇ ದಿನ್:

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ ಅಚ್ಛೇ ದಿನ್ ಎಲ್ಲಿದೆ. ಅವರಿಗೆ ಮಾನ ಮರ್ಯಾದೆಯೇನೂ ಇಲ್ಲ. ದೇಶದ ಪ್ರಧಾನಿಯಾಗಿ ಸುಳ್ಳು ಹೇಳುತ್ತಾರೆ ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.

ಬಡವರು ಹಸಿವಿನಿಂದ ಯಾವತ್ತೂ ನರಳಬಾರದು:

"ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಕರ್ನಾಟಕದಲ್ಲಿ ಯಾವೊಬ್ಬ ಬಡವರು ಕೂಡ ಹಸಿವಿನಿಂದ ನರಳಬಾರದು. ಕಾಂಗ್ರೆಸ್ ಪಕ್ಷ ಅಂದರೆ ಬಡವರ ಪಕ್ಷ, ಕಾಂಗ್ರೆಸ್ ಪಕ್ಷ ಅಂದರೆ ಕಾರ್ಮಿಕರ ಪಕ್ಷ, ಕಾಂಗ್ರೆಸ್ ಪಕ್ಷ ಅಂದರೆ ರೈತರ ಪಕ್ಷ, ಮಹಿಳೆಯರ ಪಕ್ಷ, ದಲಿತರ ಪಕ್ಷ, ಹಿಂದುಳಿದವರ ಪಕ್ಷ, ಅಲ್ಪಸಂಖ್ಯಾಂತರ ಪಕ್ಷ, ಇದು ನಿಮ್ಮ ಪಕ್ಷ ದಯಮಾಡಿ ನೀವೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕು. ದೊಡ್ಡಬಳ್ಳಾಪುರದಿಂದ ಮತ್ತೊಮ್ಮೆ ವಿಧಾನಸಭೆಗೆ ಕಳುಹಿಸಿ ಕೊಡಬೇಕು.

English summary
10 KG Free rice For Poor Peoples Of Karnataka After Congress Come To Power: Ex-CM Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X