ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಾಣಾವರದ ಮನೆಯಲ್ಲಿ ಊಟದ ಡಬ್ಬಿಗಳಲ್ಲೂ ಬಾಂಬ್ ಇಟ್ಟಿದ್ದ ಉಗ್ರರು

|
Google Oneindia Kannada News

ಬೆಂಗಳೂರು, ಜುಲೈ 8: ಬೆಂಗಳೂರಿನ ಜನರು ಬೆಚ್ಚಿ ಬೀಳುವಂಥ ಸಂಗತಿಯೊಂದು ಎನ್ ಐಎ ಕಾರ್ಯಾಚರಣೆಯಿಂದ ಬಯಲಾಗಿದೆ. ಚಿಕ್ಕಬಾಣಾವರದ ಹಳೆ ರೈಲು ನಿಲ್ದಾಣ ರಸ್ತೆಯಲ್ಲಿನ ಮನೆಯೊಂದರ ಮೇಲೆ ಭಾನುವಾರ ಸಂಜೆ ಎನ್ ಐಎನಿಂದ ದಾಳಿ ನಡೆಸಿದರು. ಆ ವೇಳೆ ಹತ್ತು ಜೀವಂತ ಬಾಂಬ್ ಹಾಗೂ ದೊಡ್ಡ್ ಪ್ರಮಾಣದಲ್ಲಿ ಸ್ಫೋಟಕ ಸಾಮಗ್ರಿ ಪತ್ತೆ ಆಗಿದೆ.

ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ್ಕೆ ಸಂಚು ನಡೆಸಿದ್ದುದು ಬಹಿರಂಗವಾಗಿದೆ. ಈ ಮನೆಯು ಸ್ಥಳೀಯ ಮುಸ್ತಾನ್ ಎಂಬುವವರಿಗೆ ಸೇರಿದ್ದಾಗಿದೆ. ರಾತ್ರಿ ಪೂರ್ತಿ ಶೋಧ ನಡೆಸಿರುವ ಎನ್ ಐಎ ಅಧಿಕಾರಿಗಳು ಬಾಂಬ್, ಏರ್ ಗನ್ ಮತ್ತು ಸ್ಫೋಟಕ ಸಾಮಗ್ರಿಗಳನ್ನು ಮನೆಯಲ್ಲಿ ಪತ್ತೆ ಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸ್ಫೋಟ: ದೊಡ್ಡಬಳ್ಳಾಪುರದಲ್ಲಿ ಉಗ್ರನ ಬಂಧನಪಶ್ಚಿಮ ಬಂಗಾಳದಲ್ಲಿ ಸ್ಫೋಟ: ದೊಡ್ಡಬಳ್ಳಾಪುರದಲ್ಲಿ ಉಗ್ರನ ಬಂಧನ

ಈಚೆಗೆ ದೊಡ್ಡಬಳ್ಳಾಪುರದ ಬಂಧಿಸಿದ್ದ ಶಂಕಿತ ಉಗ್ರಗಾಮಿ ಹಬೀಬುರ್ ರೆಹಮಾನ್ ತನ್ನ ಸ್ನೇಹಿತರ ಜತೆಗೆ ಇದೇ ಮನೆಯಲ್ಲಿ ವಾಸವಿದ್ದ. ವಿಚಾರಣೆ ವೇಳೆಯಲ್ಲಿ ಆತ ಬಾಯ್ಬಿಟ್ಟ ಸಂಗತಿಗಳ ಆಧಾರದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಲ ವರ್ಷಗಳ ಹಿಂದೆ ಚಿಕ್ಕ ಬಾಣಾವರದಲ್ಲಿ ಮನೆ ಮಾಡಿದ್ದ ಹಬೀಬುರ್ ಮತ್ತು ಸ್ನೇಹಿತರು ಈ ಮನೆಯಲ್ಲೇ ಬಾಂಬ್ ತಯಾರಿಸುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ಮನೆ ಖಾಲಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

NIA

ಆಕ್ಕಪಕ್ಕದ ಮನೆಯವರಿಗೆ ತಾವು ವ್ಯಾಪಾರಿಗಳು ಅಂತಲೇ ಪರಿಚಯಿಸಿಕೊಂಡಿದ್ದ ಈ ಮೂವರು, ಸಂಜೆ ಹೊತ್ತು ಮಾತ್ರ ಮನೆಯಿಂದ ಆಚೆ ಬರುತ್ತಿದ್ದರು. ಈ ಬಾಡಿಗೆ ಮನೆ ತುಂಬಾ ಬಾಂಬ್ ಗಳೇ ತುಂಬಿದ್ದವು. ಕೊನೆಗೆ ಊಟದ ಡಬ್ಬಿಗಳಲ್ಲೂ ಸ್ಫೋಟಾಕ ಸಾಮಗ್ರಿಗಳು ಪತ್ತೆ ಆಗಿವೆ.

English summary
10 bomb found in Bengaluru Chikkabanavar house by NIA officers on Sunday. Here is the explosive details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X