ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಬರ್ ಕ್ರೈಂ : ಐಎಎಸ್ ಅಧಿಕಾರಿ ಖಾತೆಯಿಂದ 1 ಲಕ್ಷ ರೂ. ಕಳವು

|
Google Oneindia Kannada News

ಬೆಂಗಳೂರು, ಡಿಸೆಂಬರ್ 05 : ಐಎಎಸ್ ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಮಾರು 1 ಲಕ್ಷ ರೂ.ಗಳನ್ನು ಅಧಿಕಾರಿಯ ಅಕೌಂಟ್‌ನಿಂದ ಕದಿಯಲಾಗಿದೆ.

ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಅವರ ಎಸ್‌ಬಿಐ ಖಾತೆಯಿಂದ ಹಣ ಕದಿಯಲಾಗಿದೆ. ಎಸ್‌ಬಿಐ ಬ್ಯಾಂಕ್‌ನಿಂದ ಎಂದು ಕರೆ ಮಾಡಿದ್ದ ವ್ಯಕ್ತಿಗೆ ಅವರು ಖಾತೆಯ ವಿವರಗಳನ್ನು ನೀಡಿದ್ದರು.

ಸೈಬರ್‌ ಕ್ರೈಂ ಕೇಸುಗಳಲ್ಲಿ ಬೆಂಗಳೂರಿಗೆ 2ನೇ ಸ್ಥಾನಸೈಬರ್‌ ಕ್ರೈಂ ಕೇಸುಗಳಲ್ಲಿ ಬೆಂಗಳೂರಿಗೆ 2ನೇ ಸ್ಥಾನ

ನವೆಂಬರ್ 19ರಂದು ಸಂತೋಷ್ ಸುಬ್ರಮಣ್ಯ ಎಂಬುವವರು ಬಿ.ಬಸವರಾಜು ಅವರಿಗೆ ಕರೆ ಮಾಡಿದ್ದರು. ಎಸ್‌ಬಿಐ ಉದ್ಯೋಗಿ ಎಂದು ಹೇಳಿದ್ದ ಅವರು, ನಿಮ್ಮ ಡೆಬಿಟ್ ಕಾರ್ಡ್ ವ್ಯಾಲಿಡಿಟಿ ಮುಗಿದು ಹೋಗಿದೆ ಎಂದು ಖಾತೆ ವಿವರ ಕೇಳಿದ್ದರು.

ಸೈಬರ್ ಕ್ರೈಂ ತಡೆಗೆ ಬೆಂಗಳೂರಲ್ಲಿ 8 ಸೈಬರ್ ವಿಶೇಷ ಠಾಣೆಸೈಬರ್ ಕ್ರೈಂ ತಡೆಗೆ ಬೆಂಗಳೂರಲ್ಲಿ 8 ಸೈಬರ್ ವಿಶೇಷ ಠಾಣೆ

1 lakh stolen from IAS officer bank account

ಬ್ಯಾಂಕ್ ಖಾತೆ ಪಡೆದ ವ್ಯಕ್ತಿ ತಕ್ಷಣ ಅವರ ಫೋನ್‌ಗೆ ಓಟಿಪಿ ಕಳಿಸಿದ್ದ. ಆಗಲೂ ಅನುಮಾನ ಬಾರದ ಅವರು ಅದನ್ನು ಕರೆ ಮಾಡಿದ್ದ ವ್ಯಕ್ತಿಗೆ ನೀಡಿದ್ದರು. ಕೆಲವೇ ನಿಮಿಷದಲ್ಲಿ ಅವರ ಖಾತೆಯಿಂದ ಹಣ ಡ್ರಾ ಆಗಿದೆ.

ಸೆಲ್ಫೀ ಓಕೆ, ಬೆರಳು ತೋರೋದೇಕೆ:ಸುರಕ್ಷತಾ ಟಿಪ್ಸ್‌ ಕೊಟ್ಟ ಐಪಿಎಸ್‌ ರೂಪಾಸೆಲ್ಫೀ ಓಕೆ, ಬೆರಳು ತೋರೋದೇಕೆ:ಸುರಕ್ಷತಾ ಟಿಪ್ಸ್‌ ಕೊಟ್ಟ ಐಪಿಎಸ್‌ ರೂಪಾ

ಬಸವರಾಜು ಅವರು ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರಿಗೆ ಕರೆ ಬಂದ ನಂಬರ್ ಬ್ಲಾಕ್ ಲಿಸ್ಟ್‌ನಲ್ಲಿ ಸೇರಿದೆ. ಸೈಬರ್ ಕ್ರೈಂ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.

ಬೆಂಗಳೂರು ನಗರದಲ್ಲಿ ವರ್ಷದಿಂದ ವರ್ಷಕ್ಕೆ ಸೈಬರ್ ಕ್ರೈಂ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. 2018ರ ನವೆಂಬರ್ 3ರ ತನಕ 3953 ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರಿನಲ್ಲಿ 8 ಸೈಬರ್ ಕ್ರೈಂ ಪೊಲೀಸ್ ಠಾಣೆಗಳನ್ನು ತೆರೆಯಬೇಕು ಎಂದು ಗೃಹ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

English summary
Rs 1 lakh was stolen from Karnataka Transport Department Principal Secretary B.Basavaraju bank accountant. On November 19 he received the phone call posing as an employee of SBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X