ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ್ಮ್ಯಾಟ್ ಆಸ್ಪತ್ರೆ ಬಳಿ ರಾಜ ಕಾಲುವೆಗೆ ಕೊಳಚೆ ನೀರು: ದೂರು ಏನಾಯ್ತು?

|
Google Oneindia Kannada News

ಬೆಂಗಳೂರು, ಜುಲೈ1: ಹೊಸ್ಮ್ಯಾಟ್ ಆಸ್ಪತ್ರೆ ಬಳಿ ರಾಜಕಾಲುವೆಗೆ ಕೊಳಚೆ ನೀರು ಹರದು ಹೋಗುತ್ತಿರುವ ಕುರಿತು ಜಲಮಂಡಳಿ ಕಾಂಟ್ರಾಕ್ಟರ್‌ಗೆ 1 ಲಕ್ಷ ರೂ ದಂಡ ವಿಧಿಸಲಾಗಿದೆ.

ಮನಸ್ಸಿಗೆ ಬಂದಂತೆ ಕೊಳಚೆ ನೀರನ್ನು ಎಲ್ಲೆಂದರಲ್ಲಿ ಹರಿದುಬಿಡುವಂತಿಲ್ಲ. ಯುನೈಟೆಡ್ ಬೆಂಗಳೂರು ಈ ಕುರಿತು ವಿಡಿಯೋ ಒಂದನ್ನು ಮಾಡಿ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರಶ್ನೆ ಮಾಡಿತ್ತು.

ಕೆರೆ ಮಾಲಿನ್ಯದ ಬಗ್ಗೆ ಸಿಎಂ, ಡಿಸಿಎಂಗೆ ಯುನೈಟೆಡ್ ಬೆಂಗಳೂರು ದೂರು ಕೆರೆ ಮಾಲಿನ್ಯದ ಬಗ್ಗೆ ಸಿಎಂ, ಡಿಸಿಎಂಗೆ ಯುನೈಟೆಡ್ ಬೆಂಗಳೂರು ದೂರು

ತಕ್ಷಣವೇ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚೆತ್ತುಕೊಂಡು ಜಲಮಂಡಳಿಗೆ ಒಂದು ಲಕ್ಷ ರೂ ದಂಡ ವಿಧಿಸಿದೆ ಎಂಬುದು ಆರ್‌ಟಿಇ ಮೂಲಕ ತಿಳಿದುಬಂದಿದೆ.

1 Lakh fine imposed on Jetting Machine Contractor

ಜಲಮಂಡಳಿ ಜೆಟ್ಟಿಂಗ್ ಮಿಷನ್ ಮೂಲಕ ಇಲಾಖಾ ಸಿಬ್ಬಂದಿ ಹಾಗೂ ಡ್ರೈವರ್ ಕಲುಷಿತ ಮತ್ತು ತ್ಯಾಜ್ಯ ನೀರನ್ನು ರಾಜಕಾಲುವೆಗೆ ಅಕ್ರಮವಾಗಿ ಹರಿಸುತ್ತಿದ್ದನ್ನು ವಿಡಿಯೋ ದಾಖಲೆ ಸಮೇತ ಯುನೈಟೆಡ್ ಬೆಂಗಳೂರು ದೂರು ನೀಡಿತ್ತು. ಈ ಕುರಿತು ಜನವರಿ 2 ರಂದು ಜಲಮಂಡಳಿ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಈ ರೀತಿ ಯಾವುದೇ ತ್ಯಾಜ್ಯವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಿಡುವುದರಿಂದ ಅದು ಬೆಳ್ಳಂದೂರು ಕೆರೆಗೆ ಸೇರುತ್ತದೆ. ಅದಕ್ಕೂ ಮೊದಲು ಎಸ್‌ಟಿಪಿಯನ್ನು ಅಳವಡಿಸಬೇಕಿದೆ. ಆನ್‌ಲೈನ್ ಮೂಲಕ ಮಾನಿಟರ್ ಮಾಡುವ ವಿಧಾನವನ್ನೂ ಕೂಡ ಅಳವಡಿಸಬೇಕಿದೆ.

ಯುನೈಟೆಡ್ ಬೆಂಗಳೂರು ಎಚ್.ಎಸ್.ದೊರೆಸ್ವಾಮಿಯವರ ನೇತೃತ್ವದಲ್ಲಿ ಅಕ್ರಮವಾಗಿ ಕೊಳಚೆ ನೀರನ್ನು ಹೋಸ್ಮ್ಯಾಟ್ ಆಸ್ಪತ್ರೆಯ ಬಳಿಯ ರಾಜಕಾಲುವೆಗೆ ಬಿಡುತ್ತಿದ್ದ ಬಿಡಬ್ಲ್ಯೂ ಎಸ್ ಎಸ್ ಬಿ ವಿರುದ್ಧ ದೂರು ಸಲ್ಲಿಸಿತು ಅಶೋಕ್ ನಗರ ಪೊಲೀಸ್ ಠಾಣೆ ಈ ಬಗ್ಗೆ ಎಫ್ ಐಆರ್ ದಾಖಲಿಸಿಕೊಂಡಿದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ದೂರು ನೀಡಲಾಗಿತ್ತು.

English summary
1 Lakh fine imposed on Jetting Machine Contractor, Action Taken on Complaint, Proceedings of their meeting, hearing with BWSSB Chairman on the basis of United Bengaluru Complaint against BWSSB.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X