• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ 1 ಕೋಟಿ ಲಂಚ! ತನಿಖೆಗೆ ಕಾಂಗ್ರೆಸ್ ಆಗ್ರಹ

|
Google Oneindia Kannada News

ಬೆಂಗಳೂರು, ಮೇ 09: ಸಹಾಯಕ ಪ್ರಾದ್ಯಾಪಕರ ಹುದ್ದೆ ಅಕ್ರಮ ಹಾಗೂ ಪ್ರಾಂಶುಪಾಲರ ಹುದ್ದೆಯಲ್ಲಿ ಮಾಡಲು ಹೊರಟಿರುವ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ವಕ್ತಾರ ರಮೇಶ್‌ಬಾಬು ಆಗ್ರಹಿಸಿದರು.

ಒಂದೊಂದು ಹುದ್ದೆಗೆ 1 ಕೋಟಿಯಷ್ಟು ಲಂಚ ಪಡೆದಿರುವ ಪ್ರಬಲ ಆರೋಪ ಕೇಳಿಬರುತ್ತಿದೆ. ಸಚಿವ ಅಶ್ವತ್ಥ್ ನಾರಾಯಣ ಅವರು ಸಾಕಷ್ಟು ಸಬೂಬುಗಳನ್ನು ಕೊಡಬಹುದು. 1242 ಹುದ್ದೆಗೆ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದು, ಆಗಿರುವ ಅಕ್ರಮ, ಇಬ್ಬರ ಬಂಧನವಾಗಿರುವುದಕ್ಕೆ ಕಾರಣ ಇದೆಲ್ಲದರ ವಿಚಾರ ತನಿಖೆ ನಡೆಯದೇ ಸತ್ಯಾಂಶ ಹೊರಬರುವುದಿಲ್ಲ ಎಂದು ಅವರು ಸೋಮವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಒತ್ತಾಯಿಸಿದರು.

1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅಕ್ಟೋಬರ್ ನಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿ, ಪರೀಕ್ಷೆ ನಡೆಸಲು ಅಧಿಸೂಚನೆ ನೀಡಿದ ನಂತರ 2 ಬಾರಿ ಅದು ಮುಂದೂಡಲ್ಪಡುತ್ತದೆ. ನಂತರ 30 ಸಾವಿರಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಕಳೆದ ಮಾ.12,13,14,15ರಂದು ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳಾ ಅತಿಥಿ ಉಪನ್ಯಾಸಕಿ ಹಾಗೂ ರಿಜಿಸ್ಟ್ರಾರ್ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಪರೀಕ್ಷೆಯಲ್ಲೂ ಓಎಂಆರ್ ಪತ್ರಿಕೆಗಳನ್ನು ತಿದ್ದಿ ಅಕ್ರಮ ಮಾಡಿದ್ದು, ಇದು ಪಿಎಸ್ ಐ ಅಕ್ರಮಕ್ಕೆ ಸಾಮ್ಯತೆ ಹೊಂದಿದೆ ಎಂದು ಹೇಳಿದರು.

ಸಚಿವರ ಸಂಬಂಧಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ:

ಪ್ರದೀಪ್ ಅವರು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದು, ಇವರು ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ್ ನಾರಾಯಣ ಅವರ ಸಂಬಂಧಿಗಳಾಗಿದ್ದಾರೆ. ಇವರನ್ನು ಆಪ್ತಸಹಾಯಕರನ್ನಾಗಿ ನೇಮಕಗೊಂಡ ನಂತರ ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರನ್ನಾಗಿ ಅವರನ್ನೇ ಮುಂದುವರಿಸಿದ್ದಾರೆ ಎಂದರು.

ಇಂದಿನ ಎಲ್ಲ ಆರೋಪಗಳಲ್ಲಿ ಈ ಇಲಾಖೆಯ ಮೇಲಿನ ಅಪನಂಬಿಕೆ ಹೆಚ್ಚಾಗಿರುವುದರಿಂದ ಅವರ ಹೆಸರು ಪ್ರಸ್ತಾಪ ಮಾಡಬೇಕಾಗಿದೆ. ಕಾಲೇಜು ಶಿಕ್ಷಣ ಇಲಾಖೆಯನ್ನು ಆಯುಕ್ತಾಲಯವನ್ನಾಗಿ ಪರಿವರ್ತಿಸಿ ತಾಂತ್ರಿಕ ಇಲಾಖೆಯನ್ನು ಇವರ ಅಡಿಗೆ ತೆಗೆದುಕೊಂಡು ಬರುತ್ತಾರೆ. ಇಂಜಿನಿಯರಿಂಗ್ ಕಾಲೇಜುಗಳ ಸೀಟ್ ಮಾನ್ಯತೆಗಳೆಲ್ಲವೂ, ಪಾಲಿಟೆಕ್ನಿಕ್ ಈ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತದೆ.

430ಕ್ಕೂ ಹೆಚ್ಚು ಪ್ರಾಂಶುಪಾಲರ ಹುದ್ದೆ ಖಾಲಿ

1242 ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಹಗರಣವಾಗಿರುವ ಸಂದರ್ಭದಲ್ಲಿ, ರಾಜ್ಯದ 3800ಕ್ಕೂ ಹೆಚ್ಚು ಸರ್ಕಾರಿ ಕಾಲೇಜುಗಳ ಪೈಕಿ 430ಕ್ಕೂ ಹೆಚ್ಚು ಪ್ರಾಂಶುಪಾಲರ ಹುದ್ದೆ ಖಾಲಿ ಇದೆ. ಆ ಹುದ್ದೆ ತುಂಬಲು 310 ಹುದ್ದೆಗಳಿಗೆ ಆರ್ಥಿಕ ಇಲಾಖೆಯಿಂದ ತುಂಬಲು ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ಅದರಲ್ಲೂ ಅಕ್ರಮ ಮಾಡಲು ಉನ್ನತ ಶಿಕ್ಷಣ ಸಚಿವರು ಕಾಲೇಜು ಶಿಕ್ಷಣ ಇಲಾಖೆ ಮೂಲಕ ಅಕ್ರಮ ಎಸಗುವ ಪ್ರಯತ್ನ ಮಾಡಿದ್ದಾರೆ. ಆದರೆ ಬೇರೆ ಕಾರಣಕ್ಕೆ ಈ ಹುದ್ದೆ ನೇಮಕಾತಿಗೆ ಅರ್ಜಿ ಕರೆದಿಲ್ಲ.

ಒಂದೆಡೆ ಸಹಾಯಕ ಪ್ರಾದ್ಯಾಪಕರ ಹುದ್ದೆ ಅಕ್ರಮ ಹಾಗೂ ಪ್ರಾಂಶುಪಾಲರ ಹುದ್ದೆಯಲ್ಲಿ ಮಾಡಲು ಹೊರಟಿರುವ ಅಕ್ರಮ ಇವೆರಡು ತನಿಖೆಗೆ ಒಳಪಡಿಸಬೇಕು ಎಂದು ಪಕ್ಷದ ಪರವಾಗಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ಸಚಿವ ಅಸ್ವತ್ಥ್ ನಾರಾಯಣ ಅವರು ಸಾಕಷ್ಟು ಸಬೂಬುಗಳನ್ನು ಕೊಡಬಹುದು. 1242 ಹುದ್ದೆಗೆ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದು, ಆಗಿರುವ ಅಕ್ರಮ, ಇಬ್ಬರ ಬಂಧನವಾಗಿರುವುದಕ್ಕೆ ಕಾರಣ ಇದೆಲ್ಲದರ ವಿಚಾರ ತನಿಖೆ ನಡೆಯದೇ ಸತ್ಯಾಂಶ ಹೊರಬರುವುದಿಲ್ಲ.

ಈ ಎರಡು ನೇಮಕಾತಿ ಪ್ರಕರಣಗಳಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಭಾಗಿಯಾಗಿದ್ದು, ಸರ್ಕಾರ ಕೂಡಲೇ ಈ ವಿಚಾರವಾಗಿ ತನಿಖೆ ನಡೆಸಬೇಕು. ಅವರು ಯಾವ ತನಿಖೆ ಮಾಡುತ್ತಾರೋ ಮುಖ್ಯಮಂತ್ರಿಗಳು ನಿರ್ಧರಿಸಲಿ, ಆದರೆ ಪಿ.ಎಚ್ಡಿ, ಎಂ ಫಿಲ್, ನೆಟ್, ಸ್ಲೆಟ್ ಅರ್ಹತೆ ಪಡೆದು ಉದ್ಯೋಗದ ಆಕಾಂಕ್ಷೆಯೊಂದಿಗೆ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಮೋಸ ಮಾಡುವ ಪ್ರಕ್ರಿಯೆಗೆ ಸರ್ಕಾರ ಅವಕಾಶ ನೀಡಬಾರದು ಎಂದು ಒತ್ತಾಯಿಸುತ್ತೇನೆ.

ಕಳೆದ ಒಂದು ವಾರದ ಹಿಂದೆ ಕಾಲೇಜು ಶಿಕ್ಷಣ ಇಲಾಖೆಯಿಂದ ಒಂದು ಪ್ರಕಟಣೆ ನೀಡಿದ್ದು, ಯಾರೆಲ್ಲಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರು, ನಿಯೋಜನೆ ಮೇರೆಗೆ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ ಎಂದು ಹೇಳಿದೆ. ಆದರೆ ಭಗವಾನ್ ಎಂಬ ಉಪನ್ಯಾಸಕರು ಎಂ.ಎಸ್ ಕಟ್ಟಡದಲ್ಲಿ ಸುಮಾರ್ 20 ವರ್ಷದಿಂದ ಇ ಗವರ್ನೆಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ವಿಧಾನ ಪರಿಷತ್ ಸಮಿತಿಯು ಇದು ಅಕ್ರಮವಾಗಿ ನಿಯೋಜಿಸಿದ್ದು, ಅವರನ್ನು ವಾಪಸ್ ಕರೆತರಬೇಕು ಎಂದು ವರದಿ ನೀಡಿದ್ದರೂ ಅವರನ್ನು ಅಲ್ಲೇ ಮುಂದುವರಿಸಲಾಗಿದೆ ಎಂದು ವಿವರಿಸಿದರು.

2019-20ನೇಸಾಲಿನಲ್ಲಿ ಪದವಿ ಕಾಲೋಜುಗಳಲ್ಲಿ 1,09,916 ಲ್ಯಾಪ್ ಟಾಪ್ ವಿತರಿಸಿದ್ದು, ನಂತರ 2020-21ನೇ ಸಾಲಿನಲ್ಲಿ 1,55,000 ಟ್ಯಾಬ್ಲೆಟ್ ವಿತರಿಸಿದ್ದು, ಇದರಲ್ಲೂ ಸಾಕಷ್ಟು ಅಕ್ರಮಗಳು ನಡೆದಿವೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಸವರಾಜ ರಾಯರೆಡ್ಡಿ ಅವರು ಉನ್ನತಶಿಕ್ಷಣ ಸಚಿವರಾಗಿದ್ದಾಗ ಬಿಜೆಪಿಯ ಮಿತ್ರರು ವಿಧಾನ ಪರಿಷತ್ ನಲ್ಲಿ ಚರ್ಚೆ ಮಾಡಿ ಲ್ಯಾಪ್ ಟಾಪ್ ದರದಲ್ಲಿ ವ್ಯಾತ್ಯಾಸ ಇದ್ದು ತನಿಖೆ ಮಾಡಬೇಕು ಎಂದರು. ಆದರೆ ಇಂದು ಇವರು ವಿತರಿಸಿರುವ ಲ್ಯಾಪ್ ಟಾಪ್ ಹಾಗೂ ಟ್ಯಾಬ್ಲೆಟ್ ಖರೀದಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ.

ಹೀಗೆ ಅಶ್ವತ್ಥ್ ನಾರಾಯಣ ಅವರು ಉನ್ನತಶಿಕ್ಷಣ ಇಲಾಖೆ ಸಚಿವರಾದ ನಂತರ ಹಲವು ಹಂತಗಳಲ್ಲಿ ಅವ್ಯವಹಾರ ಮಾಡಿ ಇಡೀ ಉನ್ನತ ಶಿಕ್,ಣ ಇಲಾಖೆಯನ್ನು ಕಲುಷಿತ ಮಾಡಿದ್ದಾರೆ. ಈ ಎಳ್ಲ ವಿಚಾರವಾಗಿ ತನಿಖೆ ಮಾಡಬೇಕು ಎಂದು ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ರಮೇಶ್ ಬಾಬು ವಿವರಿಸಿದರು.

   ಪೊಲ್ಲಾರ್ಡ್ ಗೆಟ್ ಔಟ್!! ಮುಂಬೈ ಅಭಿಮಾನಿಗಳಿಂದ ಪೊಲಾರ್ಡ್ ಫುಲ್ ಟ್ರೋಲ್ | Oneindia Kannada
   English summary
   KPCC spokesperson Ramesh Babu has called for an investigation into the illegality of the post of assistant professor and the role of the principal.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X