ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಲಪುಷ್ಪ ಪ್ರದರ್ಶನ: ಲಾಲ್‌ಬಾಗ್‌ಗೆ ಒಂದೇ ವಾರದಲ್ಲಿ 1.2 ಲಕ್ಷ ಜನರ ಭೇಟಿ

|
Google Oneindia Kannada News

ಬೆಂಗಳೂರು, ಆಗಸ್ಟ್‌ 13: ಸ್ವಾತಂತ್ರ್ಯೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಲಾಲ್‌ಬಾಗ್‌ ನೆಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಪ್ರದರ್ಶನವು ಆಗಸ್ಟ್ 5 ರಂದು ಪ್ರಾರಂಭವಾದಾಗಿನಿಂದ 1,20,000 ಜನರು ಇಲ್ಲಿಗೆ ಭೇಟಿ ನೀಡಿದ್ದಾರೆ.

ಸ್ಯಾಂಡಲ್‌ವುಡ್ ಚಲನಚಿತ್ರ ನಟರಾದ ಡಾ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಫ್ಲವರ್ ಶೋ ಆಗಸ್ಟ್ 15 ರವರೆಗೆ ನಡೆಯಲಿದೆ.

ಫಲಪುಷ್ಪ ಪ್ರದರ್ಶನ: 3 ದಿನ ಪೇಪರ್ ಟಿಕೆಟ್ ನೀಡಲಿದೆ ನಮ್ಮ ಮೆಟ್ರೋಫಲಪುಷ್ಪ ಪ್ರದರ್ಶನ: 3 ದಿನ ಪೇಪರ್ ಟಿಕೆಟ್ ನೀಡಲಿದೆ ನಮ್ಮ ಮೆಟ್ರೋ

ಫಲಪುಷ್ಪ ಕಾರ್ಯಕ್ರಮವನ್ನು ಕಸ ಮುಕ್ತವಾಗಿಡಲು ಪ್ರತಿಜ್ಞೆ ಮಾಡಿದ ಅಧಿಕಾರಿಗಳು ಘನ ತ್ಯಾಜ್ಯವನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಈ ವರ್ಷ ತ್ಯಾಜ್ಯ ಉತ್ಪಾದನೆಯಲ್ಲಿ ತೀವ್ರ ಗತಿಯಲ್ಲಿ ಇಳಿಕೆಯಾಗಿದೆ. ಪ್ಲಾಸ್ಟಿಕ್ ಬಳಕೆ ತಪ್ಪಿಸುವ ನಿಟ್ಟಿನಲ್ಲಿ ಅದಮ್ಯ ಚೇತನ ಸಂಸ್ಥೆಯಿಂದ ಸಹಾಯ ಪಡೆದಿದ್ದೇವೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ತಪ್ಪಿಸಲು ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ಸಹ ಮಾರಾಟ ಮಾಡುತ್ತಿದ್ದೇವೆ ಎಂದು ತೋಟಗಾರಿಕೆ (ಲಾಲ್‌ಬಾಗ್) ಉಪ ನಿರ್ದೇಶಕಿ ಕುಸುಮಾ ಜಿ ಹೇಳಿದರು.

1.2 lakh people visit Lalbagh in a single week

ಶುಚಿತ್ವವನ್ನು ಕಾಯ್ದುಕೊಳ್ಳಲು ಸಸ್ಯೋದ್ಯಾನದಾದ್ಯಂತ ಸುಮಾರು 100 ಸ್ವಚ್ಛತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 50 ಸ್ವಯಂಸೇವಕರು ಮತ್ತು ಜಾಗೃತಿ ಮೂಡಿಸಲು ಐದು ಮಾರ್ಷಲ್‌ಗಳು ಮತ್ತು ಸಂದರ್ಶಕರು ಯಾವುದೇ ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಮೈದಾನದಲ್ಲಿ ಕೆಲಸ ಮಾಡುತ್ತಿದ್ದಾರೆ.

ಲಾಲ್‌ಬಾಗ್‌ನಲ್ಲಿ ರಾಜ್‌ ಕುಮಾರ್ 'ಅಪ್ಪು'ಗೆಯ ಅದ್ಭುತ ಪುಷ್ಪ ದೃಶ್ಯ ವೈಭವಲಾಲ್‌ಬಾಗ್‌ನಲ್ಲಿ ರಾಜ್‌ ಕುಮಾರ್ 'ಅಪ್ಪು'ಗೆಯ ಅದ್ಭುತ ಪುಷ್ಪ ದೃಶ್ಯ ವೈಭವ

ನಾವು 2014 ರಿಂದ ಫಲಪುಷ್ಪ ಪ್ರದರ್ಶನಗಳಲ್ಲಿ ಶೂನ್ಯ ತ್ಯಾಜ್ಯ ಉತ್ಪಾದನೆಯ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ವರ್ಷ ಜನರಲ್ಲಿ ತೀವ್ರ ಸುಧಾರಣೆ ಮತ್ತು ಜಾಗೃತಿಯನ್ನು ಹೆಚ್ಚಿಸಿರುವುದನ್ನು ನಾವು ನೋಡಿದ್ದೇವೆ. ತಮ್ಮ ಅಂಗಡಿಗಳನ್ನು ಸ್ಥಾಪಿಸುವ ಮಾರಾಟಗಾರರು ಸಹ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಲ್ಲದೆ ಪ್ಲಾಸ್ಟಿಕ್ ಬಳಸುವುದನ್ನು ತಡೆಯುತ್ತಿದ್ದಾರೆ ಎಂದು ಘನತ್ಯಾಜ್ಯ ನಿರ್ವಹಣಾ ದುಂಡುಮೇಜಿನ ಸದಸ್ಯ ಎನ್‌ಎಸ್ ರಮಾಕಾಂತ್ ಹೇಳಿದರು.

1.2 lakh people visit Lalbagh in a single week

ಫಲಪುಷ್ಪ ಪ್ರದರ್ಶನ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್ ಪೋಲೀಸ್ (ಬಿಟಿಪಿ) ಅಧಿಕಾರಿಗಳು ಲಾಲ್‌ಬಾಗ್‌ನಲ್ಲಿ ಕಾಲ್ನಡಿಗೆಯಲ್ಲಿ ಏರಿಕೆಯಾಗಿದ್ದರೂ ಯಾವುದೇ ದೊಡ್ಡ ವಾಹನ ದಟ್ಟಣೆ ಉಂಟಾಗಿಲ್ಲ. ಸಾರ್ವಜನಿಕ ಸಾರಿಗೆಯನ್ನು ಬಳವಂತೆ ಕಾರ್ಯಕ್ರಮದ ಸಂದರ್ಶಕರು ಮನವಿ ಮಾಡಿದ್ದಾರೆ ಎಂದು ಹೇಳಿದರು.

ನಿಧಾನವಾಗಿ ಚಲಿಸುವ ದಟ್ಟಣೆಯನ್ನು ಹೊರತುಪಡಿಸಿ ಈ ಪ್ರದೇಶದಲ್ಲಿ ಟ್ರಾಫಿಕ್‌ ಜಾಮ್‌ನಂತಹ ಯಾವುದೇ ಪ್ರಮುಖ ಘಟನೆಗಳು ಕಂಡು ಬಂದಿಲ್ಲ. ಹೆಚ್ಚಿನ ಜನರು ಸಾರ್ವಜನಿಕ ಸಾರಿಗೆಯನ್ನು ಆರಿಸಿಕೊಳ್ಳುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ವರದಿಯಾಗಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Recommended Video

ಚಾಮರಾಜನಗರದಲ್ಲಿ 750ಮೀಟರ್ ಉದ್ದದ ರಾಷ್ಟ್ರ ಧ್ವಜ ಪ್ರದರ್ಶನ | *Karnataka | OneIndia Kannada

English summary
The main attraction of Bangalore city, Lalbagh Flower Show attracts more than lakhs of people. 1,20,000 people have visited the exhibition since its opening on August 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X