ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಯುಷ್ ಮಂತ್ರಾಲಯದ ಬಗ್ಗೆ ಬಾಬಾ ರಾಮದೇವ್ ಅಸಮಾಧಾನ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಫೆಬ್ರವರಿ 04: ಬಳ್ಳಾರಿಯಲ್ಲಿ ಜಿಲ್ಲೆ ಪ್ರವಾಸದಲ್ಲಿರುವ ಯೋಗ ಗುರು ಬಾಬಾ ರಾಮದೇವ್ ಅವರು ಯೋಗದ ಮಹತ್ವ ಹಾಗೂ ಆಯುಷ್ ಸಚಿವಾಲಯದ ಬಗ್ಗೆ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ದೇಶದಲ್ಲಿ ಶಾಲಾ ಮಕ್ಕಳಿಗೆ ಯೋಗ ಕಡ್ಡಾಯವಾಗಬೇಕು ಅನ್ನೋದು ನನ್ನ ಕನಸು-ಎಲ್ಲಾ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸುದ್ದೇನೆ. ಯಾವ ಸರ್ಕಾರಗಳು ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.

ಕೇಂದ್ರ ಸರ್ಕಾರವು ಆಯುಷ್ ಮಂತ್ರಾಲಯ ಮಾಡಿದ್ದು ಹೆಸರಿಗಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನ ಬಲಪಡಿಸಲು ಪತಂಜಲಿ ಯೋಗ ಟ್ರಸ್ಟ್ ಉಚಿತ ವಾಗಿ ಸೇವೆ ನೀಡಲು ಸಿದ್ದ- ಇದಕ್ಕೆ ಅಧಿಕಾರ ಮತ್ತು ಹಣದ ಅವಶ್ಯಕತೆ ಇಲ್ಲ.

Yoga should be made Mandatory in School Yoga Guru Baba Ramdev

ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಯೋಗ ಶಿಬಿರವನ್ನು ಯೋಗ ಗುರು ಬಾಬಾ ರಾಮ್‌ದೇವ್ ನಡೆಸಿಕೊಟ್ಟರು.

ಭಾನುವಾರ ಬೆಳಗ್ಗೆ 5ಗಂಟೆಗೆ ಶಿಬಿರಕ್ಕೆ ಬಾಬಾ ರಾಮ್​ದೇವ್​ ಅವರಿಂದ ಯೋಗ ಶಿಬಿರಕ್ಕೆ ಚಾಲನೆ ಸಿಕ್ಕಿತು. ಈ ಯೋಗ ಶಿಬಿರದಲ್ಲಿ ಮುಗಳಖೋಡ ಮಠದ ಸ್ವಾಮೀಜಿ, ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಯೋಗದ ಮಹತ್ವ ಕುರಿತು ಯೋಗ ಗುರೂಜಿ ಬಾಬಾ ರಾಮ್ ದೇವ್ ವಿವರಿಸಿದರು.

English summary
Yoga should be made Mandatory in School said Yoga Guru Baba Ramdev in Ballari. He is in Ballari and participating in a 3 day yoga camp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X