ಕುಂ. ವೀರಭದ್ರಪ್ಪ ಹೊಸ ಕಾದಂಬರಿ 'ಕತ್ತೆಗೊಂದು ಕಾಲ'

Posted By: ಜಿಎಂಆರ್, ಬಳ್ಳಾರಿ
Subscribe to Oneindia Kannada

ಬಳ್ಳಾರಿ, ಮಾರ್ಚ್ 10 : ವಿಭಿನ್ನ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಂಡು ಕಾದಂಬರಿಗಳನ್ನು ಬರೆಯುವ ಬಿಸಿಲೂರ ಕಾದಂಬರಿಕಾರ ಕುಂ. ವೀರಭದ್ರಪ್ಪ ಅವರ ಹೊಸ 'ಕತ್ತೆಗೊಂದು ಕಾಲ' ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಆಕರ್ಷಕವಾದ ವ್ಯಂಗ್ಯಚಿತ್ರದ ಮುಖಪುಟವನ್ನು ಹೊಂದಿರುವ ಈ ಪುಸ್ತಕದ ಶೀರ್ಷಿಕೆಯೂ ಅಷ್ಟೇ ಗಮನಾರ್ಹವಾಗಿದೆ. ಅರಮನೆ, ರಾಯಲುಸೀಮ, ನಿಜಲಿಂಗ ಹೀಗೇ ಕನ್ನಡದ ನೆಲ, ಕರ್ನಾಟಕದ ಗಡಿಭಾಗದ ರಾಯಲಸೀಮೆ ಪ್ರಭಾವದಲ್ಲೇ ಬರಹವನ್ನು ಚಿತ್ರೀಕರಿಸಿ, ಖ್ಯಾತಿ ಪಡೆದಿರುವ ಅವರ 'ಕತ್ತೆಗೊಂದು ಕಾಲ' ಕಾದಂಬರಿ ಸಾಹಿತ್ಯಾಸಕ್ತರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಗೌರಿ ಹತ್ಯೆ ಪ್ರಜಾಪ್ರಭುತ್ವವನ್ನು ಕತ್ತಲಲ್ಲಿರಿಸಿದೆ: ಕುಂ.ವೀರಭದ್ರಪ್ಪ

ಲೇಖಕರ ಆಪ್ತರ ಪ್ರಕಾರ, 'ಪುಸ್ತಕದ ಮುದ್ರಣ ಬಹುತೇಕ ಪೂರ್ಣಗೊಂಡಿದೆ. ಪುಸ್ತಕ ಬಿಡುಗಡೆ ದಿನಾಂಕ ಮತ್ತು ಸ್ಥಳವೂ ನಿಗದಿ ಆಗುವ ಹಂತದಲ್ಲಿದೆ. ಎಲ್ಲ ಮಾಹಿತಿಯೂ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ' ಎನ್ನುತ್ತಾರೆ.

Writer Kum Veerabhadrappa new novel Kattegondu Kaala will be release soon

ಕುಂ.ವೀರಭದ್ರಪ್ಪ ಅವರ ಕತೆ- ಕಾದಂಬರಿಗಳಲ್ಲಿ ಪಾತ್ರಗಳು ಅದ್ಭುತವಾಗಿರುತ್ತವೆ ಜತೆಗೆ ನಮ್ಮ ಮಧ್ಯೆಯೂ ನಿತ್ಯ ಕಾಣಸಿಗುವಂಥವಾಗಿರುತ್ತವೆ. ಭಳಾರೇ ವಿಚಿತ್ರಂ ಕಥಾ ಸಂಕಲನ, ಗಾಂಧಿಕ್ಲಾಸ್ ಕಾದಂಬರಿಯನ್ನು ಪದೇ ಪದೇ ನೆನಪಿಸಿಕೊಳ್ಳುವಂತಾಗುತ್ತದೆ. ಇವರ 'ಕೂರ್ಮಾವತಾರ' ಕಥೆಯು ಸಿನಿಮಾ ಆಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada well known writer Kum Veerabhadrappa new novel Kattegondu Kaala will be release soon. According to sources all set to be release soon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ