ವಿಮ್ಸ್ ಆಸ್ಪತ್ರೆ ಆಪರೇಷನ್ ಥಿಯೇಟರ್ ಮೇಲ್ಛಾವಣಿ ಕುಸಿತ

Posted By: Gururaj
Subscribe to Oneindia Kannada

ಬಳ್ಳಾರಿ, ಸೆಪ್ಟೆಂಬರ್ 12 : ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಶಸ್ತ್ರ ಚಿಕಿತ್ಸಾ ವಿಭಾಗದ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.

ವಿಜಯನಗರ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ವಿಮ್ಸ್) ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನ ಮೇಚ್ಛಾವಣಿ ಮಂಗಳವಾರ ಕುಸಿದುಬಿದ್ದಿದೆ. ಈ ಸಮಯದಲ್ಲಿ ಯಾವುದೇ ಆಪರೇಷನ್ ನಡೆಯುತ್ತಿರಲಿಲ್ಲ.

ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

VIMS hospital operation theater roof collapses

ಒಂದು ವೇಳೆ ಆಪರೇಷನ್ ನಡೆಯವ ವೇಳೆ ಈ ಘಟನೆ ನಡೆದಿದ್ದರೆ ವೈದ್ಯರು ಮತ್ತು ರೋಗಿಗೆ ತೊಂದರೆ ಉಂಟಾಗುವ ಸಾಧ್ಯತೆ ಇತ್ತು. ಆಸ್ಪತ್ರೆಯ ಸಿಬ್ಬಂದಿ ಈ ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಮೇಲ್ಛಾವಣಿ ಕುಸಿದು ಬಿದ್ದಿರುವ ಹಿನ್ನಲೆಯಲ್ಲಿ ಇಂದು ನಡೆಯಬೇಕಿದ್ದ ಎಲ್ಲಾ ಶಸ್ತ್ರ ಚಿಕಿತ್ಸೆಯನ್ನು ರದ್ದು ಮಾಡಲಾಗಿದೆ. ಆಪರೇಷನ್ ಥಿಯೇಟರ್‌ಗೆ ಬೀಗ ಹಾಕಲಾಗಿದೆ.

2017ರ ಫೆಬ್ರವರಿಯಲ್ಲಿ ವಿಮ್ಸ್ ಆಸ್ಪತ್ರೆಯ ದಾಸ್ತಾನು ಕೊಠಡಿಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ನಂತರ ಬೆಂಕಿ ಮಕ್ಕಳ ವಾರ್ಡ್ ಸೇರಿದಂತೆ ಇತರ ವಾರ್ಡ್ ಗಳಿಗೆ ಹಬ್ಬಿತ್ತು.

2016ರಲ್ಲಿ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವ ಸಂತೋಷ್ ಲಾಡ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The roof of a Ballari Vijanagar Institute Of Medical Sciences (VIMS) hospital operation theater collapsed on Tuesday, September 12, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ