ಎರಡು ವರ್ಷಗಳ ಬಳಿಕ ತುಂಗಭದ್ರಾ ಜಲಾಶಯ ಭರ್ತಿ

Posted By: Gururaj
Subscribe to Oneindia Kannada

ಬಳ್ಳಾರಿ, ಅಕ್ಟೋಬರ್ 19 : ಹೊಸಪೇಟೆಯ ತುಂಗಭದ್ರಾ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಎರಡು ವರ್ಷಗಳ ನಂತರ ಅಣೆಕಟ್ಟು ಭರ್ತಿಯಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಜಲಾಶಯದ ಗರಿಷ್ಠ ಮಟ್ಟ 1,633 ಅಡಿ.

ಜಲಾಶಯದ ನೀರಿನ ಮಟ್ಟ 1,629 ಅಡಿಗಳಿಗೆ ತಲುಪಿದೆ. 13, 738 ಕ್ಯೂಸೆಕ್ ಒಳಹರಿವು ಇದೆ. ತುಂಗಭದ್ರಾ ಜಲಾಶಯದಲ್ಲಿ ರಾಜ್ಯದ ಪಾಲು ಶೇ 60ರಷ್ಟು. ಉಳಿದ ನೀರನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕೃಷಿ, ಕುಡಿಯುವ ನೀರಿನ ಉದ್ದೇಶಕ್ಕೆ ನೀಡಬೇಕು.

ತುಂಗಭದ್ರೆ ನದಿಯ ಏತನೀರಾವರಿ ಯೋಜನೆ, ಏನಿದು?

Hospet

ಬರಗಾಲದಿಂದಾಗಿ ಎರಡು ವರ್ಷಗಳಿಂದ ಜಲಾಶಯ ಭರ್ತಿ ಆಗಿರಲಿಲ್ಲ. ಈ ವರ್ಷವೂ ಜಲಾಶಯ ಭರ್ತಿಯಾಗುವುದು ಅನುಮಾನವಾಗಿತ್ತು. ಆದ್ದರಿಂದ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರಿಗೆ ಭತ್ತ ಬೆಳೆಯದಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಈಗ ಡ್ಯಾಂ ಭರ್ತಿಯಾಗಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಮೈದುಂಬಿದ ಕಬಿನಿಗೆ ಬಾಗಿನ ಅರ್ಪಿಸಿದ ಸಿದ್ದರಾಮಯ್ಯ

2017ರ ಅಕ್ಟೋಬರ್ 17ಕ್ಕೆ ಜಲಾಶಯದಲ್ಲಿ 88.91 ಟಿಎಂಸಿ ನೀರು ಸಂಗ್ರಹವಾಗಿದೆ. 2016ರಲ್ಲಿ 35.61, 2015ರಲ್ಲಿ 71.10, 2014ರಲ್ಲಿ 100.86 ಟಿಎಂಸಿ ನೀರಿನ ಸಂಗ್ರಹವಿತ್ತು. ಅಕ್ಟೋಬರ್ ತಿಂಗಳಿನಲ್ಲಿಯೇ ಜಲಾಶಯಕ್ಕೆ 23.23 ಟಿಎಂಸಿ ನೀರು ಹರಿದುಬಂದಿದೆ. (Thousand Million Cubic).

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ

'ಮುಂಗಾರು ಹಂಗಾಮಿನ ಬೆಳೆಗೆ ಒಟ್ಟು 70 ಟಿಎಂಸಿ, ಎರಡನೇ ಬೆಳೆಗೆ ಅಂದಾಜು 50 ಟಿಎಂಸಿ, ಕುಡಿಯುವ ನೀರಿನ ಉದ್ದೇಶಕ್ಕೆ 10 ಟಿಎಂಸಿ ನೀರು ಶೇಖರಣೆ ಮಾಡಬೇಕಿದೆ' ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಡಿ.ರಂಗಾರೆಡ್ಡಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tungabhadra dam in Hospet, Ballari is full. 1,629 feet water stored at dam. Reservoir level of the dam is 1,633 ft.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ