ಸೆ.21ರಿಂದ ಬಳ್ಳಾರಿ-ಹೈದರಾಬಾದ್ ನಡುವೆ ವಿಮಾನ ಸೇವೆ

Posted By: Gururaj
Subscribe to Oneindia Kannada

ಬಳ್ಳಾರಿ, ಸೆಪ್ಟೆಂಬರ್ 12 : ಸುಮಾರು 9 ವರ್ಷಗಳ ಬಳಿಕ ಬಳ್ಳಾರಿಯಲ್ಲಿ ವಿಮಾನಗಳ ಹಾರಾಟ ನಡೆಯಲಿದೆ. ಟ್ರೂ ಜೆಟ್ ಬಳ್ಳಾರಿ-ಹೈದರಾಬಾದ್ ನಡುವೆ ಸೆ.21ರಿಂದ ವಿಮಾನ ಸಂಚಾರ ಆರಂಭಿಸಲಿದೆ.

ಹೈದರಾಬಾದ್-ಮೈಸೂರು ನಡುವೆ ಟ್ರೂ ಜೆಟ್ ವಿಮಾನ ಹಾರಾಟ

ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಟ್ರೂ ಜೆಟ್ ಎರಡು ನಗರಗಳ ನಡುವೆ ವಿಮಾನ ಸೇವೆ ಆರಂಭಿಸುತ್ತಿದೆ. ಹೈದರಾಬಾದ್‌ನಿಂದ ಮೊದಲ ವಿಮಾನ ಬಳ್ಳಾರಿಯ ವಿದ್ಯಾನಗರದಲ್ಲಿರುವ ವಿಮಾನ ನಿಲ್ದಾಣಕ್ಕೆ ಸೆ.21ರಂದು ಬಂದು ತಲುಪಲಿದೆ.

Trujet will connect Ballari-Hyderabad from September 21, 2017

72 ಸೀಟಿನ ವಿಮಾನ ಬೆಳಗ್ಗೆ 6ಗಂಟೆಗೆ ಹೈದರಾಬಾದ್‌ನಿಂದ ಹೊರಡಲಿದ್ದು, 7.05ಕ್ಕೆ ಬಳ್ಳಾರಿ ತಲುಪಲಿದೆ. 7.30ಕ್ಕೆ ಬಳ್ಳಾರಿಯಿಂದ ಹೊರಡುವ ವಿಮಾನ 8.35ಕ್ಕೆ ಹೈದರಾಬಾದ್ ತಲುಪಲಿದೆ. ಪ್ರಯಾಣ ದರ 999 ರೂ. ನಿಗದಿಪಡಿಸಲಾಗಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ : ಬಳ್ಳಾರಿ-ಹೈದರಾಬಾದ್ ನಡುವೆ ವಿಮಾನ ಸಂಚಾರ ಆರಂಭವಾದರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಹಂಪಿ, ತುಂಗಭದ್ರಾ ಡ್ಯಾಂ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ಸ್ಥಳಗಳಿದ್ದು, ಹೆಚ್ಚಿನ ಪ್ರವಾಸಿಗರು ಆಗಮಿಸಲು ಸಾಧ್ಯವಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hyderabad based Trujet will connect Ballari-Hyderabad. Flight service will begins from September 21, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ