ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಗಾಳಿಮಾತು: ಸಿದ್ದರಾಮಯ್ಯ

Posted By:
Subscribe to Oneindia Kannada

ಬಳ್ಳಾರಿ, ಜನವರಿ, 23: ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ ಕಾಂಗ್ರೆಸ್ ಸೇರಿವ ವಿಷಯ ಕೇವಲ ಗಾಳಿಮಾತು ಎಂದು ಬಳ್ಳಾರಿಯಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ಕುಡಿಯುವ ನೀರು ಯೋಜನೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸೊಮಣ್ಣ ಅವರು ಕಾಂಗ್ರೆಸ್ ಸೇರುವ ವಿಷಯ ಕೇಲವ ಉಹಾಫೋಹ, ಗಾಳಿ ಮಾತು ಎಂದರು. ಇನ್ನು ಲೋಕಾಯುಕ್ತ ಹೆಸರನ್ನು ಮತ್ತಷ್ಟು ಸ್ಪಷ್ಟನೆಗಳೊಂದಿಗೆ ಮತ್ತೆ ರಾಜ್ಯ ಪಾಲರಿಗೆ ಕಳುಹಿಸುತ್ತೇವೆ ಎಂದು ತಿಳಿಸಿದರು.[ಕಾಂಗ್ರೆಸ್ ಕಡೆ ವಾಲಿರುವುದು ಸುಳ್ಳು ಎಂದು ಹೇಳಲ್ಲ : ಸೋಮಣ್ಣ]

The congress inclusion of V. Somanna is rumor: Siddaramaiah

ಈ ಹಿಂದೆಯೂ ಸೋಮಣ್ಣ ನವರು ಕಾಂಗ್ರೆಸ್ ಸೇರುವ ವಿಷಯವಾಗಿ ಸ್ಪಷ್ಟ ಮಾಹಿತಿಯಿಲ್ಲ ಎಂದು ಸಿಎಂ ತಿಳಿಸಿದ್ದರು. ಅದರೆ ಕಾಂಗ್ರೆಸ್ ಹಿರಿಯ ನಾಯಕ ವಿಶ್ವನಾಥ್ ವಿ.ಸೋಮಣ್ಣನವರು ಪಕ್ಷಕ್ಕೆ ಬರುವುದಾದರೆ ಸ್ವಾಗತ ಎಂದು ಹೇಳಿದ್ದರು.[ಕಾಂಗ್ರೆಸ್ಸಿಗೆ ಸೋಮಣ್ಣ ಬರುವುದಾದರೆ ಸ್ವಾಗತ: ವಿಶ್ವನಾಥ್]

ಇನ್ನು ಬಿಜೆಪಿಯಲ್ಲಿ ಭಿನ್ನಮತಿಯರಿಗಾಗಿಯೇ ಅನೇಕ ಸಭೆಗಳು ನಡೆಯುತ್ತಿವೆ. ವಿ.ಸೋಮಣ್ಣನವರು ಪಕ್ಷದಲ್ಲಿ ಕಡೆಗಣಿಸಿರುವ ಕಾರಣ ಕಾಂಗ್ರೆಸ್ಸಿಗೆ ಹೋಗುವುದಾಗಿ ಮಾಧ್ಯಮದವರಿಗೆ ಮಾರ್ಮಿಕವಾಗಿ ನುಡಿದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The congress inclusion of V. Somanna is rumor say chief Minister Siddaramaiah in siraguppa ballari.
Please Wait while comments are loading...