ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಾಮುಲುಗೆ ಅತಿಯಾದ ಆತ್ಮವಿಶ್ವಾಸವೇ ಮುಳ್ಳಾಗಿ ಪರಿಣಮಿಸಿತೇ..?

|
Google Oneindia Kannada News

ಬಳ್ಳಾರಿ, ನವೆಂಬರ್.06: ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಟ್ಟಾಗಿ ಹೋದರೆ ಬಿಜೆಪಿಯ ವೇಗಕ್ಕೆ ತಡೆಯೊಡ್ಡಿ, ಮೋದಿ ಅಲೆ ರಾಜ್ಯದಲ್ಲಿ ಪರಿಣಾಮ ಬೀರದಂತೆ ಮಾಡಬಹುದು ಎಂಬ ಧೈರ್ಯ ಇದೀಗ ಮೈತ್ರಿ ಸರ್ಕಾರದಲ್ಲಿ ಕಾಣಿಸಿಕೊಂಡಿದೆ.

ಇದಕ್ಕೆ ಕಾರಣ ಕಳೆದ ಒಂದೂವರೆ ದಶಕದಿಂದ ಬಿಜೆಪಿ ಪ್ರಾಬಲ್ಯದಲ್ಲಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಉಪಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ಸಾಕ್ಷಿಯಾಗಿದೆ. ಇಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉಗ್ರಪ್ಪನವರು ಜೆಡಿಎಸ್ ಮತ್ತು ಕಾಂಗ್ರೆಸ್‌ನ ಒಮ್ಮತದ ಅಭ್ಯರ್ಥಿಯಾಗಿದ್ದರೂ ಅದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸ್ಪರ್ಧೆಯಾಗಿ ಮಾರ್ಪಟ್ಟಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ.

5 ಕ್ಷೇತ್ರಗಳ ಉಪ ಚುನಾವಣೆ : ಯಾರಿಗೆ ಎಷ್ಟು ಮತಗಳು? 5 ಕ್ಷೇತ್ರಗಳ ಉಪ ಚುನಾವಣೆ : ಯಾರಿಗೆ ಎಷ್ಟು ಮತಗಳು?

ಇಲ್ಲಿ ದೇವೇಗೌಡರು, ಸಿದ್ದರಾಮಯ್ಯ ಸೇರಿದಂತೆ ಎಲ್ಲ ನಾಯಕರೂ ಪ್ರಚಾರ ನಡೆಸಿದರೂ ಇಲ್ಲಿನ ಚುನಾವಣೆಯ ಜವಬ್ದಾರಿ ತೆಗೆದುಕೊಂಡು ಗೆಲುವು ತಂದುಕೊಟ್ಟಿದ್ದು ಸಚಿವ ಡಿ.ಕೆ.ಶಿವಕುಮಾರ್ ಎಂಬುದನ್ನು ತಳ್ಳಿಹಾಕುವಂತಿಲ್ಲ.

ಬಳ್ಳಾರಿಯಲ್ಲಿ ಬಿದ್ದ ಬಿಜೆಪಿಯ ಗಾಯಕ್ಕೆ ಉಪ್ಪು ಸವರಿದ ಸಿದ್ದರಾಮಯ್ಯ ಟ್ವೀಟ್‌ ಬಳ್ಳಾರಿಯಲ್ಲಿ ಬಿದ್ದ ಬಿಜೆಪಿಯ ಗಾಯಕ್ಕೆ ಉಪ್ಪು ಸವರಿದ ಸಿದ್ದರಾಮಯ್ಯ ಟ್ವೀಟ್‌

ಸೂಕ್ಷ್ಮವಾಗಿ ಗಮನಿಸಿದರೆ ಬಳ್ಳಾರಿಯ ಲೋಕಸಭಾ ಉಪಚುನಾವಣೆ ಡಿ.ಕೆ.ಶಿವಕುಮಾರ್ ಮತ್ತು ಶ್ರೀರಾಮಲು ನಡುವಿನ ಪ್ರತಿಷ್ಠೆಯಾಗಿ ಕಂಡು ಬಂದಿತಲ್ಲದೆ, ಅದು ಕ್ರಮೇಣ ಬಳ್ಳಾರಿಯ ನಾಯಕರು ಮತ್ತು ಕನಕಪುರದ ಗೌಡರು ಎಂಬಂತೆಯೂ ಭಾಸವಾಗತೊಡಗಿತು. ಇಲ್ಲಿ ಜನಾರ್ಧನ ರೆಡ್ಡಿಯ ಅತಿರೇಖದ ಮಾತುಗಳು ಕೂಡ ಕಾಂಗ್ರೆಸ್‌ಗೆ ವರದಾನವಾಯಿತು. ಮುಂದೆ ಓದಿ...

 ಕಾಂಗ್ರೆಸ್ ಚೇತರಿಸಿಕೊಳ್ಳುತ್ತಿದೆ

ಕಾಂಗ್ರೆಸ್ ಚೇತರಿಸಿಕೊಳ್ಳುತ್ತಿದೆ

ತಾನೊಬ್ಬನೇ ಏಕಾಂಗಿಯಾಗಿ ಬಿಜೆಪಿ ಅಭ್ಯರ್ಥಿ ಸಹೋದರಿ ಶಾಂತಾ ಅವರನ್ನು ಗೆಲ್ಲಿಸಿಕೊಡುತ್ತೇನೆ ಎಂಬ ಅತಿಯಾದ ಆತ್ಮವಿಶ್ವಾಸವೂ ಶ್ರೀರಾಮಲುಗೆ ಮುಳ್ಳಾಗಿ ಪರಿಣಮಿಸಿತು ಎಂದರೆ ತಪ್ಪಾಗಲಾರದು. ಬಳ್ಳಾರಿ ಒಂದು ಕಾಲದಲ್ಲಿ ಬಿಜೆಪಿಯ ಭದ್ರ ಕೋಟೆಯಾಗಿತ್ತಾದರೂ ಬದಲಾದ ಪರಿಸ್ಥಿತಿಯಲ್ಲಿ ಅಲ್ಲಿ ಕಾಂಗ್ರೆಸ್ ಚೇತರಿಸಿಕೊಳ್ಳುತ್ತಿದೆ ಎಂಬುದು ಶ್ರೀರಾಮಲುಗೆ ಗೊತ್ತಿಲ್ಲದ ವಿಚಾರವೇನಲ್ಲ.

 ಭಾರೀ ಅಂತರದಲ್ಲಿ ಗೆಲುವು

ಭಾರೀ ಅಂತರದಲ್ಲಿ ಗೆಲುವು

ಈ ಬಾರಿ ಏಕಾಂಗಿಯಾಗಿ ಹೋರಾಟ ಮಾಡಿ ಗೆಲ್ಲಿಸಿಕೊಟ್ಟರೆ ರಾಜ್ಯ ಬಿಜೆಪಿಯಲ್ಲಿ ಪ್ರಭಾವಿ ನಾಯಕನಾಗಿ ಮಿಂಚಬಹುದು. ಜತೆಗೆ ಕೇಂದ್ರದ ನಾಯಕರ ಮೆಚ್ಚುಗೆಗೆ ಪಾತ್ರರಾಗಬಹುದು ಎಂಬ ಬಯಕೆಯೂ ಅವರಲ್ಲಿತ್ತು. ಹೀಗಾಗಿಯೇ ಅವರು ಬಿಜೆಪಿಯ ರಾಜ್ಯ ನಾಯಕರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಾವೇ ಹಗಲು ರಾತ್ರಿ ಎನ್ನದೆ ಓಡಾಡಿದರು. ಏನೇನೋ ತಂತ್ರಗಳನ್ನು ಮಾಡಿದರು. ಆದರೆ ಅದೆಲ್ಲವೂ ಈಗ ಠುಸ್ ಆಗಿದ್ದು, ಕಾಂಗ್ರೆಸ್‌ನ ಅಭ್ಯರ್ಥಿ ಉಗ್ರಪ್ಪ ಅವರು ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಬಳ್ಳಾರಿಯಲ್ಲಿ ಬಿದ್ದ ಬಿಜೆಪಿಯ ಗಾಯಕ್ಕೆ ಉಪ್ಪು ಸವರಿದ ಸಿದ್ದರಾಮಯ್ಯ ಟ್ವೀಟ್‌ ಬಳ್ಳಾರಿಯಲ್ಲಿ ಬಿದ್ದ ಬಿಜೆಪಿಯ ಗಾಯಕ್ಕೆ ಉಪ್ಪು ಸವರಿದ ಸಿದ್ದರಾಮಯ್ಯ ಟ್ವೀಟ್‌

 ಕರಗತವಾದ ತಂತ್ರ

ಕರಗತವಾದ ತಂತ್ರ

ಇಲ್ಲಿ ಹೀರೋ ಆಗಲು ಹೋದ ಶ್ರೀರಾಮಲು ಮುಗ್ಗರಿಸಿದರೆ, ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ತನ್ನ ವರ್ಚಸ್ಸು ಏನೆಂಬುದನ್ನು ರಾಮನಗರ ಮತ್ತು ಬಳ್ಳಾರಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಜತೆಗೆ ಹೈಕಮಾಂಡ್ ನ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಗೆಲುವಿನ ನಾಗಾಲೋಟವನ್ನು ಮುಂದುವರೆಸಲು ಮತ್ತು ಬಿಜೆಪಿಯನ್ನು ಎಲ್ಲಿ ಮತ್ತು ಹೇಗೆ ಕಟ್ಟಿ ಹಾಕಬೇಕು ಎಂಬುದರ ಬಗೆಗಿನ ತಂತ್ರವೂ ಅವರಿಗೆ ಕರಗತವಾಗಿದೆ.

 ಲೋಕಸಭಾ ಚುನಾವಣೆ ಕಬ್ಬಿಣದ ಕಡಲೆ

ಲೋಕಸಭಾ ಚುನಾವಣೆ ಕಬ್ಬಿಣದ ಕಡಲೆ

ಕೇವಲ ಸಮ್ಮಿಶ್ರ ಸರ್ಕಾರವನ್ನು ಕೆಡವಿ ತಾವು ಸರ್ಕಾರ ರಚಿಸುವುದು ಹೇಗೆ ಎಂಬುದರ ಬಗ್ಗೆ ಹಗಲು ಕನಸು ಕಾಣುತ್ತಾ ಬಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ನಾಯಕರು ಇನ್ನು ಮುಂದೆಯಾದರೂ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳದೆ ಕಚ್ಚಾಡುತ್ತಾ, ಕೇವಲ ಸಮಿಶ್ರ ಸರ್ಕಾರವನ್ನು ಉರುಳಿಸುವುದರ ಬಗ್ಗೆ ಯೋಚಿಸುತ್ತಾ ಕಾಲ ಕಳೆದರೆ ಮುಂದಿನ ಲೋಕಸಭಾ ಚುನಾವಣೆ ಕಬ್ಬಿಣದ ಕಡೆಲೆಯಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ.

ಬಳ್ಳಾರಿ ಅಂತಿಮ ಫಲಿತಾಂಶ: ಎಲ್ಲಾ ದಾಖಲೆ ಮುರಿದ ವಿಎಸ್ ಉಗ್ರಪ್ಪಬಳ್ಳಾರಿ ಅಂತಿಮ ಫಲಿತಾಂಶ: ಎಲ್ಲಾ ದಾಖಲೆ ಮುರಿದ ವಿಎಸ್ ಉಗ್ರಪ್ಪ

English summary
Bellary Lok Sabha by-election was found to be a prestige between DK Shivakumar and Sriramulu. Likewise talks of Janardhana Reddy also a boon to the Bellary Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X