ಪಾದಯಾತ್ರೆ ಹೊರಟ ತಿಪ್ಪೇಸ್ವಾಮಿ ಬೆಂಬಲಿಗರು

Posted By: ಜಿಎಂಆರ್
Subscribe to Oneindia Kannada

ಬಳ್ಳಾರಿ, ಏಪ್ರಿಲ್. 11 : ಮೊಳಕಾಲ್ಮೂರು ಶಾಸಕ ಎಸ್. ತಿಪ್ಪೇಸ್ವಾಮಿ ಅವರ ಬೆಂಬಲಿಗರು 25 ಬಸ್ಸುಗಳು, ಐದು ಕಾರುಗಳಲ್ಲಿ ಬುಧವಾರ ಸಂಜೆ 5.30ರ ಸುಮಾರಿಗೆ ಬಳ್ಳಾರಿಗೆ ಆಗಮಿಸಿದ್ದು, ಸಂಸದ, ನಿಯೋಜಿತ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಅವರನ್ನು ಭೇಟಿ ಮಾಡಿ, ಅಸಮಾಧಾನ ವ್ಯಕ್ತಪಡಿಸಲು ನಿರ್ಧರಿಸಿದ್ದರು. ಆದರೆ ಇವರ ಎಲ್ಲಾ ವಾಹನಗಳನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಎಸ್ಪಿ ಸರ್ಕಲ್‍' ನಲ್ಲಿ ತಡೆದಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರ : ಉಗ್ರಪ್ಪ, ಶ್ರೀರಾಮುಲು ನೇರ ಪೈಪೋಟಿ?

ಪೊಲೀಸರ ಕ್ರಮ ವಿರೋಧಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎಸ್. ತಿಪ್ಪೇಸ್ವಾಮಿ ಬೆಂಬಲಿಗರು ನಾವು ಬಿ. ಶ್ರೀರಾಮುಲು ಅವರನ್ನು ಭೇಟಿ ಮಾಡಿ, ಎಸ್. ತಿಪ್ಪೇಸ್ವಾಮಿ ಅವರಿಗೆ ಬಿಜೆಪಿಯ ಟಿಕೇಟ್ ಕೊಡಿಸಲು ಬಂದಿದ್ದರೆ ಪೊಲೀಸರು ಅನಗತ್ಯವಾಗಿ ನಮ್ಮನ್ನು ತಡೆದು, ಕಾನೂನು - ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಲಿದ್ದಾರೆ ಎಂದು ಆರೋಪಿಸಿದರು.

Supporters of MLA S. Thippeswamy Stage protest

ಕೊನೆಗೆ ಎಲ್ಲರೂ ವಾಹನಗಳನ್ನು ಬಿಟ್ಟು, ಪಾದಯಾತ್ರೆಯಲ್ಲಿ ಬಿ. ಶ್ರೀರಾಮುಲು ಮನೆಗೆ ತೆರಳಿದರು. ಬಿ. ಶ್ರೀರಾಮುಲು ಮನೆಯ ಸುತ್ತಲೂ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Members and supporters of the MLA S.Thippeswamy protest against theparty leaders for denying ticket to Molkalmuru MLA S. Thippeswamy from the constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ