ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛ ಭಾರತ ಅಭಿಯಾನದ ರಾಯಭಾರಿ ಬಳ್ಳಾರಿಯ ಈ ಬಾಲಕಿ

By ಜಿಎಂಆರ್, ಬಳ್ಳಾರಿ
|
Google Oneindia Kannada News

ಬಳ್ಳಾರಿ, ಮಾರ್ಚ್. 01 - ಎರೆಡು ದಿನಗಳ ಕಾಲ ಅನ್ನ - ನೀರು ತ್ಯಜಿಸಿ ತನ್ನ ಮನೆಯ ಅಂಗಳದಲ್ಲಿ ಶೌಚಾಲಯ ಕಟ್ಟಿಸಿಕೊಳ್ಳುವಲ್ಲಿ ಯಶಸ್ವಿ ಆಗಿರುವ ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮದ ಸರ್ಕಾರಿ ಶಾಲೆಯ ಏಳನೆಯ ತರಗತಿ ವಿದ್ಯಾರ್ಥಿನಿ ಎಚ್. ಮಹಾಂಕಾಳಿ ಈಗ ಜಿಲ್ಲೆಯ ಸ್ವಚ್ಛಭಾರತ ಮಿಷನ್‍ನ ಅಂಬಾಸಿಡರ್ (ರಾಯಭಾರಿ).

ಈ ವಿದ್ಯಾರ್ಥಿನಿ ಎರೆಡು ದಿನಗಳ ಕಾಲ ಅನ್ನ - ನೀರು ಬಿಟ್ಟಿದ್ದೂ ಅಲ್ಲದೇ, ತಂದೆ - ತಾಯಿಯನ್ನು ಒಪ್ಪಿಸಿ ಮನೆಯಂಗಳದಲ್ಲಿ ಶೌಚಾಲಯ ನಿರ್ಮಿಸಲು ಒಪ್ಪಿಗೆ ಪಡೆದಿದ್ದಳು.

ಸಿರುಗುಪ್ಪ ಮಹಾಂಕಾಳಿಯ ಶೌಚಾಲಯ ನಿರ್ಮಾಣ ಹೋರಾಟದ ಸಾಹಸ ಗಾಥೆಸಿರುಗುಪ್ಪ ಮಹಾಂಕಾಳಿಯ ಶೌಚಾಲಯ ನಿರ್ಮಾಣ ಹೋರಾಟದ ಸಾಹಸ ಗಾಥೆ

ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್, ವಿದ್ಯಾರ್ಥಿನಿ ಮಹಾಂಕಾಳಿಯ ಹೋರಾಟ, ಛಲ ಮತ್ತು ಗುರಿ ತಲುಪಿದ ವಿಧಾನ ಅನೇಕರಿಗೆ ಸ್ಪೂರ್ತಿದಾಯಕ. ಈ ನಿಟ್ಟಿನಲ್ಲಿ ಈ ಯಶೋಗಾಥೆಯನ್ನು ಪ್ರೋತ್ಸಾಹಿಸಲು ಜಿಲ್ಲಾ ಅಂಬಾಸಡರ್ ಆಗಿ ನೇಮಕ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದಿದ್ದಾರೆ.

Siraguppa girl Mahankali now Ambassador for 'Swach Bharat Abhiyan'

ತಾಳೂರು ಗ್ರಾಮ ಪಂಚಾಯಿತಿ ಶಾಲೆಯಲ್ಲಿ ಏರ್ಪಡಿಸಿದ್ದ 'ಸ್ವಚ್ಛ ಭಾರತ' ಕಾರ್ಯಕ್ರಮದಲ್ಲಿ ಶೌಚಾಲಯ ನಿರ್ಮಾಣದ ಅನಿವಾರ್ಯ ಮತ್ತು ಅಗತ್ಯ, ಅದರ ಬಳಕೆಯ ಅನುಕೂಲಗಳ ತಿಳಿಸಲಾಗಿತ್ತು. ಆ ಜಾಗೃತಿ ಶಿಬಿರದಿಂದ ಪ್ರೇರಣೆ ಪಡೆದು, ಹೋರಾಟದ ಕಿಡಿಯನ್ನು ಹೊತ್ತಿಸಿಕೊಂಡ ಆಕೆ, ಶೌಚಾಲಯದ ನಿರ್ಮಾನಕ್ಕೆ ಪಟ್ಟು ಹಿಡಿದಳು. ಅನ್ನ, ನೀರು ಬಿಟ್ಟು ಮನೆಯಲ್ಲಿ ಅನೇಕರ ಮನ ಪರಿವರ್ತಿಸಿದಳು. ಗ್ರಾಮದ ಅನೇಕರ ಗಮನ ಸೆಳೆದು ಶೌಚಾಲಯ ಕಟ್ಟಿಸಿಕೊಳ್ಳುವ ಮೂಲಕ ಹಿಡಿದ ಪಟ್ಟು ಸಾಧಿಸಿದ್ದಾಳೆ.

ಮಹಿಳೆಯರು ಬಯಲು ಬಹಿರ್ದೆಸೆಯಿಂದ ಪದ್ಧತಿಯನ್ನು ಸ್ವಯಂ ಕೈಬಿಡಬೇಕು. ಸರಕಾರ ನೀಡುವ ಅನುದಾನ ಪಡೆದು ಶೌಚಾಲಯ ನಿರ್ಮಿಸಿಕೊಳ್ಳಬೇಕು. ಪ್ರತಿಯೊಬ್ಬ ಮಹಿಳೆ, ಬಾಲಕಿ, ಮತ್ತು ನಾಗರೀಕರು ಬಯಲು ಶೌಚಾಲಯ ಬಿಟ್ಟು, ಮರ್ಯಾದೆಯಿಂದ ಬದುಕುವುದನ್ನು ಕಲಿಯಬೇಕು ಎನ್ನುತ್ತಾಳೆ ವಿದ್ಯಾರ್ಥಿನಿ ಮಹಾಂಕಾಳಿ.

ಮೋದಿ ಹೊಗಳಿದ ಕೊಪ್ಪಳದ ಮಲ್ಲಮ್ಮ ಯಾರು?ಮೋದಿ ಹೊಗಳಿದ ಕೊಪ್ಪಳದ ಮಲ್ಲಮ್ಮ ಯಾರು?

ವಿಜಯಪುರ : ಶೌಚಾಲಯಕ್ಕಾಗಿ ಪ್ರತಿಭಟನೆ ಮಾಡಿದ ಮಹಿಳೆಯರುವಿಜಯಪುರ : ಶೌಚಾಲಯಕ್ಕಾಗಿ ಪ್ರತಿಭಟನೆ ಮಾಡಿದ ಮಹಿಳೆಯರು

English summary
Siraguppa girl Mahankali who did strike against her parents to build toilet is now nominated as Ambassador for Swach Bharat Abhiyan. She is just 14 year old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X