ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಬಳ್ಳಾರಿಯ ಇಂದಿರಾ ಪ್ರಿಯದರ್ಶಿನಿ ಜಿಂಕೆ ಸಫಾರಿ

|
Google Oneindia Kannada News

ಬಳ್ಳಾರಿ, ನವೆಂಬರ್ 4 : ಕಮಲಾಪುರದಲ್ಲಿ ನಿರ್ಮಾಣವಾಗಿರುವ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನ ಹಾಗೂ ಇಂದಿರಾ ಪ್ರಿಯದರ್ಶಿನಿ ಜಿಂಕೆ ಸಫಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ. ರಾಜ್ಯದ ಅತಿ ದೊಡ್ಡ ಜೈವಿಕ ಉದ್ಯಾನವನ ಇದಾಗಿದೆ.

ತ್ಯಾವರೆಕೊಪ್ಪದಿಂದ ಗುಜರಾತ್‌ಗೆ ಹೊರಟ 6 ಚಿರತೆಗಳುತ್ಯಾವರೆಕೊಪ್ಪದಿಂದ ಗುಜರಾತ್‌ಗೆ ಹೊರಟ 6 ಚಿರತೆಗಳು

ಪರಿಸರವಾದಿಗಳ ವಿರೋಧದ ನಡುವೆಯೇ ರಾಜ್ಯ ಮೃಗಾಲಯ ಪ್ರಾಧಿಕಾರ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನವನ್ನು ನಿರ್ಮಿಸಿದೆ. ಸುಮಾರು 149 ಹೆಕ್ಟೇರ್ ಪ್ರದೇಶದಲ್ಲಿ ಜೈವಿಕ ಉದ್ಯಾನವನ ಹಾಗೂ ಇಂದಿರಾ ಪ್ರಿಯದರ್ಶಿನಿ ಜಿಂಕೆ ಸಫಾರಿಯನ್ನು ನಿರ್ಮಾಣ ಮಾಡಲಾಗಿದೆ.

ಸಕ್ರೆಬೈಲಿನಿಂದ ಉತ್ತರ ಪ್ರದೇಶಕ್ಕೆ ಹೊರಟು ನಿಂತ ಆನೆಗಳು!ಸಕ್ರೆಬೈಲಿನಿಂದ ಉತ್ತರ ಪ್ರದೇಶಕ್ಕೆ ಹೊರಟು ನಿಂತ ಆನೆಗಳು!

ಬಿಳಿಕಲ್ಲು ಅರಣ್ಯ ಪ್ರದೇಶದಲ್ಲಿ ಈ ಉದ್ಯಾನ ನಿರ್ಮಾಣವಾಗಿದೆ. 2012ರಲ್ಲಿ ಜನಾರ್ದನ ರೆಡ್ಡಿ ಅವರು ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನವನ್ನು 30 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಕಾರ್ಯಾರಂಭ ಮಾಡಿದ್ದರು. ಆದರೆ, ರಾಜ್ಯ ಸರ್ಕಾರದಿಂದ ಇದಕ್ಕೆ ಅನುಮತಿ ಸಿಕ್ಕಿರಲಿಲ್ಲ.

ಚಿತ್ರಗಳು : ಸಕ್ರೆಬೈಲಿನಲ್ಲಿ ಆನೆಗಳ ತುಂಟಾಟ, ಆಟೋಟಚಿತ್ರಗಳು : ಸಕ್ರೆಬೈಲಿನಲ್ಲಿ ಆನೆಗಳ ತುಂಟಾಟ, ಆಟೋಟ

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು. ಉದ್ಯಾನದ ಪರಿಷ್ಕೃತ ಯೋಜನೆಯನ್ನು 67 ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. ಎಲ್ಲಾ ಅಡೆ-ತಡೆಗಳನ್ನು ಮೀರಿ ಉದ್ಯಾನ ಲೋಕಾರ್ಪಣೆಗೊಂಡು ಜನರಿಗೆ ಮುಕ್ತವಾಗಿದೆ.

30 ಕೋಟಿಗೆ ಏರಿದ 67 ನಿರ್ಮಾಣ ವೆಚ್ಚ

30 ಕೋಟಿಗೆ ಏರಿದ 67 ನಿರ್ಮಾಣ ವೆಚ್ಚ

ಜನಾರ್ದನ ರೆಡ್ಡಿ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನ್ನು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಿದ್ದರು. ಅಂದಿನ ಬಿಜೆಪಿ ಸರ್ಕಾರ 20 ಕೋಟಿ ರೂ., ಸಂಡೂರಿನ ಎನ್‌ಡಂಡಿಸಿ ಸಂಸ್ಥೆ 2 ಕೋಟಿ ರೂ. ಅನುದಾನ ನೀಡಿತ್ತು. ಈ ಮೊತ್ತವನ್ನು ಬ್ಯಾಂಕ್‌ ನಲ್ಲಿ ಠೇವಣಿ ಇಡಲಾಗಿತ್ತು. ಆ ಹಣಕ್ಕೆ ಬಡ್ಡಿ ಸೇರಿ ಒಟ್ಟು 30 ಕೋಟಿಯಾಗಿತ್ತು. ಸದ್ಯ, ಉದ್ಘಾಟನೆ ಆಗುವಾಗ ವೆಚ್ಚ 67 ಕೋಟಿಗೆ ಏರಿಕೆಯಾಗಿದೆ.

ಮೂರು ಆವರಣಗಳ ನಿರ್ಮಾಣ

ಮೂರು ಆವರಣಗಳ ನಿರ್ಮಾಣ

ಬಿಳಿಕಲ್ಲು ಅರಣ್ಯ ಪ್ರದೇಶದಲ್ಲಿನ 149 ಹೆಕ್ಟೇರ್ ಪ್ರದೇಶದಲ್ಲಿ ಜೈವಿಕ ಉದ್ಯಾನ ನಿರ್ಮಿಸಲಾಗಿದೆ. ಉದ್ಯಾನದಲ್ಲಿ ತಲಾ 80 ಎಕರೆ ಪ್ರದೇಶದ ಮೂರು ಆವರಣಗಳನ್ನು ನಿರ್ಮಿಸಲಾಗಿದೆ.

75 ಚುಕ್ಕೆ ಜಿಂಕೆಗಳಿವೆ

75 ಚುಕ್ಕೆ ಜಿಂಕೆಗಳಿವೆ

ಬಳ್ಳಾರಿ ಕಿರುಮೃಗಾಲಯದಿಂದ ತಂದಿರುವ 75 ಚುಕ್ಕೆ ಜಿಂಕೆ, 70 ಕೃಷ್ಣಮೃಗಗಳು, ಮೈಸೂರಿನಿಂದ ತರಲಾದ 5 ನೀಲಗಾಯ್‌ ಗಳು ಜಿಂಕೆ ಸಫಾರಿಯಲ್ಲಿರುತ್ತವೆ. ಜಿಂಕೆ ಮತ್ತು ಸಸ್ಯಹಾರಿ ಪ್ರಾಣಿ, ಮೈಸೂರು ಮತ್ತು ಬನ್ನೇರುಘಟ್ಟದಿಂದ ಬರಲಿರುವ ಎರಡು ಜೋಡಿ ಹುಲಿಗಳನ್ನು ಸಫಾರಿಯಲ್ಲಿಡಲು ಚಿಂತೆನೆ ನಡೆಸಲಾಗಿದೆ.

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ

ಪರಿಸರವಾದಿ ಸಂತೋಷ್ ಮಾರ್ಟಿನ್ ಮತ್ತು ಇತರರು ಜೈವಿಕ ಉದ್ಯಾನ ಆರಂಭಕ್ಕೆ ತಡೆ ನೀಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ರಾಜ್ಯ ಸರ್ಕಾರ ಸೇರಿ 11 ಪ್ರತಿವಾದಿಗಳಿಗೆ ಕರ್ನಾಟಕ ಹೈಕೋರ್ಡ್ ನೋಟಿಸ್ ಜಾರಿ ಮಾಡಿದ್ದು, ನ.16ರಂದು ವಿಚಾರಣೆ ನಡೆಸಲಿದೆ.

English summary
Karnataka Chief Minister Siddaramaih inaugurate Indira Priyadarshini Zoological park in Bilikallu Reserve Forest in Kamalapura, Ballari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X