ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ಲಕ್ಷ ಬೀಜದ ಉಂಡೆಗಳ ತಯಾರಿಕಾ ಅಭಿಯಾನಕ್ಕೆ ಚಾಲನೆ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಮೇ. 31 : ಸಿರುಗುಪ್ಪದ ಕೃಷ್ಣದೇವರಾಯ ಶಾಲೆಯಲ್ಲಿ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲಾ ಭಾರತ ವಿದ್ಯಾರ್ಥಿ ಪರಿಷತ್ ಜಂಟಿ ಆಶ್ರಯದಲ್ಲಿ ಸಿರುಗುಪ್ಪ ಗ್ರೀನ್ ಪ್ರಾಜೆಕ್ಟ್' ಅಂಗವಾಗಿ ಒಂದು ಲಕ್ಷ ಬೀಜದ ಉಂಡೆಗಳ ತಯಾರಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಎಬಿವಿಪಿ ಜಿಲ್ಲಾ ಸಂಚಾಲಕ ಸಂತೋಷರಾವ್ ಬೀಜದ ಉಂಡೆಗಳ ತಯಾರಿಕಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಸಾರಿಗೆ ಇಲಾಖೆ: ಮಹಿಳೆಯರಿಗೆ ಲಘುವಾಹನ ತರಬೇತಿಸಾರಿಗೆ ಇಲಾಖೆ: ಮಹಿಳೆಯರಿಗೆ ಲಘುವಾಹನ ತರಬೇತಿ

ವಿದ್ಯಾರ್ಥಿಗಳು, ಪರಿಷತ್ತಿನ ಸದಸ್ಯರು ಮತ್ತು ಸಾರ್ವಜನಿಕರ ಸಹಯೋಗದಲ್ಲಿ ವಿವಿಧ ವೃಕ್ಷ, ಜಾತಿಯ ಬೀಜಗಳ ಉಂಡೆಗಳನ್ನು ತಯಾರಿಸಿ, ಮಳೆಗಾದಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ, ಕುರುಚಲು ಕಾಡುಗಳಲ್ಲಿ ಬಿಸಾಕಲಾಗುತ್ತದೆ. ಆಗ ನೈಸರ್ಗಿಕವಾಗಿ ಹೊಸ ಸಸಿಗಳು ಮೊಳಕೆಯೊಡೆಯಲಿವೆ ಎಂದರು.

Santhosh Rao, launched One lakh seed pellets manufacturing campaign

ಬೇವು, ಹುಣಸೆ, ಸಿಗೇಕಾಯಿ, ಹಲಸು, ಮಾವು, ಸೀತಾಫಲ, ನೇರಳೆಹಣ್ಣು, ಬಾದಮಿ, ಅರಳಿವೃಕ್ಷ, ಗುಲ್ ಮೋರ್, ಸುಬಾನಿ, ಸೆಣಬು, ನೆಲ್ಲಿಕಾಯಿ, ಆಲದ ಮರದ ಬೀಜಗಳು ಸೇರಿದಂತೆ ವಿವಿಧ ಜಾತಿ - ವರ್ಗಗಳ ಬೀಜದ ಉಂಡೆಗಳು ಸಿರುಗುಪ್ಪ ಗ್ರೀನ್ ಪ್ರಾಜೆಕ್ಟ್' ಅಭಿಯಾನದಲ್ಲಿ ಸಿದ್ಧವಾಗುತ್ತಿವೆ.

ವಿವಿಧ ಗಿಡಗಳ ಬೀಜಗಳನ್ನು ಸ್ವಯಂಸೇವಕರು ಶೇಖರಿಸಿ, ಗೊಬ್ಬರ ಮಿಶ್ರಿತ ಮಣ್ಣಿನ ಉಂಡೆಗಳಲ್ಲಿ ಅಂಟಿಸಿ, ಒಣಗಿಸಿ ಇರಿಸಲಾಗುತ್ತದೆ. ಪ್ರತಿ ದಿನ 20 ಸಾವಿರದಂತೆ 5ದಿನಗಳಲ್ಲಿ 1ಲಕ್ಷ ಬೀಜದ ಉಂಡೆಗಳನ್ನು ತಯಾರಿಸುವ ಗುರಿಯನ್ನು ಸ್ವಯಂಸೇವಕರು ಹೊಂದಿದ್ದಾರೆ.

Santhosh Rao, launched One lakh seed pellets manufacturing campaign

ಸ್ವಯಂ ಸೇವಕರಾದ ವೆಂಕಟೇಶ ಎಲೆಗಾರ, ವೆಂಕಟೇಶ ಹೆಬ್ಬರ, ಯೋಗರಾಜ, ಮುರುಳಿ, ಸಂತೋಷ, ವಿಜಯ ಸೇರಿದಂತೆ ಅನೇಕರು ಬೀಜದ ಉಂಡೆ ತಯಾರಿಕೆಯ ನೇತೃತ್ವವಹಿಸಿದ್ದಾರೆ.

English summary
Bellary ABVP district convener, Santhosh Rao, launched One lakh seed pellets manufacturing campaign at Krishnadevaraya school in Siruguppa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X