ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಯಲ್ಲಿ ರೈತರಿಗೆ ಕೃಷ್ಣ ಬೈರೇಗೌಡರ ಎರೆಹುಳು ಪಾಠ

|
Google Oneindia Kannada News

ಬಳ್ಳಾರಿ, ನವೆಂಬರ್ 22: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಅವರು ಕೊಳಗಲ್,ಬಾದನಹಟ್ಟಿ,ಹಂದಿಹಾಳ್,ಗುಡದೂರು,ಕೊರ್ಲಗುಂದಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ನರೇಗಾ ಸೇರಿದಂತೆ ವಿವಿಧ ಯೋಜನೆಗಳಡಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ವೀಕ್ಷಿಸಿದರು.

ಮೊದಲಿಗೆ ಬಳ್ಳಾರಿ ಸಮೀಪದ ಕೊಳಗಲ್ಲು ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು ನರೇಗಾ ಅಡಿ ಸಾಮಾಜಿಕ ಅರಣ್ಯದ ವತಿಯಿಂದ ಕೈಗೊಳ್ಳಲಾಗಿರುವ ರೈಲ್ವೆ ಗೇಟ್ ಹತ್ತಿರದ ಗಿಡ ನೆಡುವ ಕಾಮಗಾರಿ, ರಸ್ತೆ ಬದಿ ನೆಡುತೋಪು ಮತ್ತು ಕೊಳಗಲ್ಲುವಿನಲ್ಲಿ ನಿರ್ಮಿಸಲಾಗಿರುವ 35 ಎರೆಹುಳು ತೊಟ್ಟಿಗಳನ್ನು ವೀಕ್ಷಿಸಿದ ಸಚಿವರು ಈ ತೊಟ್ಟಿಗಳ ಉಪಯುಕ್ತತೆ ಕುರಿತಂತೆ ರೈತರೊಂದಿಗೆ ಕೆಲಹೊತ್ತು ಸಂವಾದ ನಡೆಸಿದರು. ನಂತರ ಅವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ವೀಕ್ಷಿಸಿದರು. ನಂತರ ಬಾದನಹಟ್ಟಿ ಗ್ರಾಮಕ್ಕೆ ತೆರಳಿದರು.

RDPR inspects MNREGA work in Ballary district

ಕಬ್ಬು ಬಾಕಿ ಹಣ ಪಾವತಿಸುವಂತೆ ಕಿಸಾನ್‌ ಘಟಕದಿಂದ 'ಕೈ' ನಾಯಕರಿಗೆ ಪತ್ರ ಕಬ್ಬು ಬಾಕಿ ಹಣ ಪಾವತಿಸುವಂತೆ ಕಿಸಾನ್‌ ಘಟಕದಿಂದ 'ಕೈ' ನಾಯಕರಿಗೆ ಪತ್ರ

ಈ‌ ಸಂದರ್ಭದಲ್ಲಿ ಸಚಿವರೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಕೆಂಚೇಗೌಡ, ಸಚಿವರ ಆಪ್ತ ಕಾರ್ಯದರ್ಶಿ ಪುರುಷೋತ್ತಮ, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಜಿಪಂ ಅಭಿವೃದ್ಧಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್,ತಾಪಂ ಇಒ ಜಾನಕಿರಾಮ್, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಈ‌ ಸಂದರ್ಭದಲ್ಲಿ ಇದ್ದರು.

English summary
RDPR minister Krishna Byregowda has been conducted inspection of various rural drinking water project and MNREGA work in Ballary district on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X