ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀವು ಕರೆದಾಗಲೆಲ್ಲಾ ಕರ್ನಾಟಕಕ್ಕೆ ಬರುವೆ: ರಾಹುಲ್ ವಚನ

|
Google Oneindia Kannada News

ಹೊಸಪೇಟೆ, ಫೆಬ್ರವರಿ 10 : ಕರ್ನಾಟಕದ ಚುನಾವಣೆಯ ಮುಂದಿನ ಭವಿಷ್ಯವನ್ನು ನೀವೇ ನಿರ್ಧಾರ ಮಾಡಬೇಕಿದೆ. ನಿಮ್ಮ ಕಷ್ಟಗಳಿಗೆ ಸ್ಪಂದಿಸಲು ನಾನು ಎಂದಿಗೂ ಸಿದ್ಧನಿದ್ದೇನೆ ಕನ್ನಡಿಗರು ಕರೆದಾಗಲೆಲ್ಲಾ ಕರ್ನಾಟಕಕ್ಕೆ ಬಂದು ಅವರ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದರು.

ಹೊಸಪೇಟೆಯಲ್ಲಿ ನಡೆಯುತ್ತಿರುವ ಜನಾಶೀರ್ವಾದ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಯಾರು ಅರ್ಹರು ಎಂದು ನೀವೇ ತೀರ್ಮಾನಿಸಬೇಕಿದೆ. ಒಂದೆಡೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇನ್ನೊಂದೆಡೆ ಬಿಜೆಪಿ ಹಾಗೂ ನರೇಂದ್ರ ಮೋದಿ ಇದ್ದಾರೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನೀವೇ ಆಲೋಚಿಸಿ ಎಂದರು.

ರಾಜ್ಯಕ್ಕೆ ಬಂದು ಸಿದ್ದರಾಮಯ್ಯ ಅವರ ಬಳಿ ಪಾಠ ಕಲಿತು ಹೋಗಿ. ಆಗ ಹೇಳಿದ್ದನ್ನು ಮಾಡಬೇಕು ಎನ್ನುವುದು ತಿಳಿಯುತ್ತದೆ. ರೈತರ ಸಾಲಮನ್ನಾ ವಿಚಾರಗಳು ಅರ್ಥವಾಗುತ್ತವೆ. ಪ್ರಧಾನಿ ಮೋದಿ ಹೋದಲ್ಲೆಲ್ಲ ಗುಜರಾತ್‌ನ್ನು ಬದಲಾಯಿಸಿದೆ ಎಂದು ಹೇಳುತ್ತಾರೆ. ಆದರೆ, ಬದಲಾವಣೆ ಸಾಧ್ಯವಾಗಿದ್ದು ಅಲ್ಲಿನ ರೈತರು, ವ್ಯಾಪಾರಿಗಳು ಮತ್ತು ಕಾರ್ಮಿಕರಿಂದ ಎಂದು ಹೇಳಿದರು.

In Pics : ಹೊಸಪೇಟೆಯಲ್ಲಿ ರಾಹುಲ್ ಜನಾಶೀರ್ವಾದ ಯಾತ್ರೆ

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಪ್ರತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂ ಹಣ ಸಂದಾಯ ಮಾಡುವುದಾಗಿ ಸುಳ್ಳು ಭರವಸೆ ನೀಡಿದ್ದರು. ಎಷ್ಟು ಜನರ ಖಾತೆಗಳಿಗೆ ಹಣ ಸಂದಾಯವಾಗಿದೆ ನೀವೇ ಹೇಳಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರವು ಕೇವಲ ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದ್ದುಕೊಂಡೇ ಬೀದರ್, ಕಲಬುರಗಿ ಹಗೂ ಕೊಪ್ಪಳದಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದೆ ಎಂದರು.

ನರೇಂದ್ರ ಮೋದಿ ಮಾಡಿದ ತಪ್ಪನ್ನೇ ರಾಹುಲ್ ಗಾಂಧಿಯೂ ಮಾಡಿದರಾ?!ನರೇಂದ್ರ ಮೋದಿ ಮಾಡಿದ ತಪ್ಪನ್ನೇ ರಾಹುಲ್ ಗಾಂಧಿಯೂ ಮಾಡಿದರಾ?!

ಕಲಂ 371 ಜೆ ತಿದ್ದುಪಡಿ

ಕಲಂ 371 ಜೆ ತಿದ್ದುಪಡಿ

ಕಲಂ 371 ಜೆ ಅಭಿವೃದ್ಧಿ ಮಾಡಿ ಹೈದರಾಬಾದ್ ಕರ್ನಾಟಕವನ್ನು ಅಭಿವೃದ್ಧಿ ಮಾಡಿರುವು ಕಾಂಗ್ರೆಸ್ ಸರ್ಕಾರ, ಹೈದರಾಬಾದ್ ಕರ್ನಾಟಕಕ್ಕೆ ಈ ಮೊದಲು 350 ಕೋಟಿ ಅನುದಾನ ದೊರೆಯುತ್ತಿತ್ತು ಆದರೆ ಆರ್ಟಿಕಲ್ 371 ಜೆ ತಿದ್ದುಪಡಿ ತಂದ ನಂತರ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ 4 ಸಾವಿರ ಕೋಟಿ ಅನುದಾನ ಬರುವಂತಾಗಿದೆ ಎಂದರು.

ಮೋದಿ ಭರವಸೆಯಂತೆ 2 ಕೋಟಿ ಜನಕ್ಕೆ ಉದ್ಯೋಗ ನೀಡಿದ್ದಾರೆಯೇ?

ಮೋದಿ ಭರವಸೆಯಂತೆ 2 ಕೋಟಿ ಜನಕ್ಕೆ ಉದ್ಯೋಗ ನೀಡಿದ್ದಾರೆಯೇ?

ಪ್ರತಿ ವರ್ಷವೂ ಎರಡು ಕೋಟಿ ನಿರುದ್ಯೋಗಿಗಳಿಗೆ ಕೆಲಸ ನೀಡುವುದಾಗಿ ಹೇಳಿದ್ದರು. ಪ್ರತಿ 24 ಗಂಟೆಯಲ್ಲಿ450 ಜನರಿಗೆ ಕೆಲಸ ನೀಡುವುದಾಗಿ ಸುಳ್ಳು ಭರವಸೆ ನೀಡಿದ್ದಾರೆ. ಇದುವರೆಗೆ ಎಷ್ಟು ಜನರಿಗೆ ಕೆಲಸವನ್ನು ಕೆಲಸವನ್ನು ಕೊಡಿಸಿದ್ದಾರೆ ಎಂದು ಅವರೇ ಆತ್ಮವಿಮರ್ಷೆ ಮಾಡಿಕೊಳ್ಳಲಿ ಎಂದು ಹೇಳಿದರು.

ಇತಿಹಾಸದ ಮಾತುಗಳನ್ನು ಜನರು ಕೇಳಲು ಸಿದ್ಧವಿಲ್ಲ

ಇತಿಹಾಸದ ಮಾತುಗಳನ್ನು ಜನರು ಕೇಳಲು ಸಿದ್ಧವಿಲ್ಲ

ನರೇಂದ್ರ ಮೋದಿಯವರು ಮಾಡಿದ ಒಂದು ಗಂಟೆಯ ಭಾಷಣದಲ್ಲಿ ಎಲ್ಲಿಯೂ ಮುಂದಿನ ಭವಿಷಯದ ಬಗ್ಗೆ ಮಾತನಾಡಿಲ್ಲ, ಬದಲಾಗಿ ಇತಿಹಾಸದ ಕುರಿತು ಸಾಕಷ್ಟು ಮಾತನಾಡಿದ್ದಾಋಎ. ಜನರಿಗೆ ಭಿಷ್ಯ ಕುರಿತು ಕನಸಿದೆಯೇ ಹೊಒರತು ಕಳೆದು ಹೋದ ಘಳಿಗೆಯ ಬಗ್ಗೆ ಕೇಳಲು ತಾಳ್ಮೆ ಇಲ್ಲ. ಇಂದಿನ ಜನತೆಗೆ ಬೇಖಾಗಿರುವುದು ಮೋದಿಯವರು ಮುಂದೇನು ಮಾಡುತ್ತಾರೆ ಎಂದಷ್ಟೇ ಎಂದು ಹೇಳಿದರು.

ಮೋದಿಯವರು ಗಾಡಿಯಲ್ಲಿರುವ ಕನ್ನಡಿಯನ್ನು ನೋಡುತ್ತಾ ಚಲಾಯಿಸುತ್ತಾರೆ

ಮೋದಿಯವರು ಗಾಡಿಯಲ್ಲಿರುವ ಕನ್ನಡಿಯನ್ನು ನೋಡುತ್ತಾ ಚಲಾಯಿಸುತ್ತಾರೆ

ಸಿದ್ದರಾಮಯ್ಯ ಅವರು ಭವಿಷ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ತೋರುತ್ತಾರೆ ಹಾಗಾಗಿ ಮುಂಬರುವ ಏಳು ಬೀಳುಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. ಆದರೆ ಮೋದಿ ಹಾಗಲ್ಲ ಏಳು ಬೀಳು ಯಾವುದನ್ನೂ ಗಮನಿಸದೆ ಹಿಂದೆ ಆಗಿರುವ ಘಟನೆಗಳನ್ನು ಮೆಲುಕು ಹಾಕುತ್ತಾ ಮುಂದೆ ಸಾಗುತ್ತಾರೆ ಹಾಗಿದ್ದಾಗ ಅಂಥವರಿಂದ ದೇಶದ ಏಳಿಗೆ ಬಯಸಲು ಹೇಗೆ ಸಾಧ್ಯ ಎಂದರು.

ವರ್ಷಕ್ಕೆ ಒಂದೂ ಕಾರು ಉತ್ಪಾದಿಸದ ಕಂಪನಿಗೆ 35 ಸಾವಿರ ಕೋಟಿ

ವರ್ಷಕ್ಕೆ ಒಂದೂ ಕಾರು ಉತ್ಪಾದಿಸದ ಕಂಪನಿಗೆ 35 ಸಾವಿರ ಕೋಟಿ

ಮೋದಿಯವರು ವರ್ಷಕ್ಕೆ ಒಂದು ಕಾರನ್ನೂ ಕೂಡ ತಯಾರಿಸಿದ ಟಾಟಾ ನ್ಯಾನೋ ಕಂಪನಿಗೆ 35 ಸಾವಿರ ಕೋಟಿ ನೀಡಿದ್ದಾರೆ. ಅವರಿಗೆ ಉಚಿತ ವಿದ್ಯುತ್, ಮೂಲ ಸೌಕರ್ಯ ಗಳನ್ನು ನೀಡಿದ್ದಾರೆಅದರ ಬದಲು ಅದನ್ನು ದೇಶದ ಅಭಿವೃದ್ಧಿಗೆ ಬಳಬಹುದಿತ್ತು.
ನರೇಗಾ ಯೋಜನೆಯಲ್ಲಿ ಬಡವರಿಗೆ ಉದ್ಯೋಗ ನೀಡಿದ್ದೇವೆ.

ಒಂದು ಹೆಕ್ಟೇರ್ ಗೆ 1 ರೂ ನಂತೆ 40 ಸಾವಿರ ಹೆಕ್ಟೇರ್ ಭೂಮಿ

ಒಂದು ಹೆಕ್ಟೇರ್ ಗೆ 1 ರೂ ನಂತೆ 40 ಸಾವಿರ ಹೆಕ್ಟೇರ್ ಭೂಮಿ

ಒಬ್ಬ ಉದ್ಯಮಿಗೆ 40 ಸಾವಿರ ಹೆಕ್ಟೇರ್ ನ್ನು ಒಂದು ಹೆಕ್ಟೇರ್ ಗೆ ಒಂದು ರೂ ನಂತೆ ಕೊಟ್ಟರು ಅದನ್ನು ದುಬಾರಿ ಬೆಲೆಗೆ ಮಾರಾಟ ಮಾಡಿಕೊಂಡಿದ್ದು ಅಕ್ರಮವಲ್ಲವಾ ಎಂದು ಪ್ರಶ್ನಿಸಿದರು.

ಕರ್ನಾಟಕದಿಂದ ಎಸ್ಸಿಎಸ್ಟಿ ಅಭಿವೃದ್ಧಿಗೆ 27 ಸಾವಿರ ಕೋಟಿ

ಕರ್ನಾಟಕದಿಂದ ಎಸ್ಸಿಎಸ್ಟಿ ಅಭಿವೃದ್ಧಿಗೆ 27 ಸಾವಿರ ಕೋಟಿ

ಕಾಂಗ್ರೆಸ್ ಪಕ್ಷವು ಎಂದೂ ಸುಳ್ಳು ಭರವಸೆಯನ್ನು ನೀಡುವುದಿಲ್ಲ, ಆದರೆ ಬಿಜೆಪಿಯು ತಮ್ಮ ಪ್ರತಿ ಭಾಷಣದಲ್ಲೂ ಸುಳ್ಳು ಭರವಸೆಯನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಡೀ ದೇಶಕ್ಕೆ 55 ಸಾವಿರ ಕೋಟಿ ಕೇಂದ್ರ ಮೀಸಲಿಟ್ಟರೆ ಕರ್ನಾಟಕ ಸರ್ಕಾರ ರಾಜ್ಯವೊಂದಕ್ಕೆ 27 ಸಾವಿರ ಕೋಟಿ ಮೀಸಲಿಟ್ಟಿದೆ. ಇದರಿಂದ ಯಾರು ದೇಶವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ ಎಂದು ಹೇಳಿದರು.

English summary
AICC president Rahul gandhi promised that he will come to Karnataka while people of the state want him to be present. He was addressing a rally in Hospet on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X