ರಾಹುಲ್ ಗಾಂಧಿ ಹಂಪಿ ವಿರೂಪಾಕ್ಷನ ದರ್ಶನ ಏಕೆ ಪಡೆಯುತ್ತಿಲ್ಲ?

Posted By: Gururaj
Subscribe to Oneindia Kannada

ಬಳ್ಳಾರಿ, ಫೆಬ್ರವರಿ 08 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳ್ಳಾರಿಗೆ ಬಂದರೂ ವಿಜಯನಗರ ಸಾಮ್ರಾಜ್ಯದ ಆರಾಧ್ಯದೈವ ಹಂಪೆಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆಯುತ್ತಿಲ್ಲ.

ರಾಹುಲ್ ಗಾಂಧಿ ಏಕೆ ವಿರೂಪಾಕ್ಷನ ದರ್ಶನ ಪಡೆಯುತ್ತಿಲ್ಲ? ಅಧಿಕಾರ ಕಳೆದುಕೊಳ್ಳುವ ಭೀತಿಗಾಗಿಯೋ? ಮೌಢ್ಯದ ಆತಂಕಕ್ಕಾಗಿಯೋ? ಅಥವಾ ಬೇರೆ ಕಾರಣಕ್ಕೋ ಎಂಬ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಉತ್ತರ ನೀಡಬೇಕು.

ಹೊಸಪೇಟೆಯಲ್ಲಿ ರಾಹುಲ್ ಸಮಾವೇಶ, ವಿಶೇಷತೆಗಳೇನು?

ಕೆಪಿಸಿಸಿ ಬಿಡುಗಡೆ ಮಾಡಿರುವ ರಾಹುಲ್‍ ಗಾಂಧಿ ಅವರ ಪ್ರವಾಸ ಪಟ್ಟಿಯಲ್ಲಿ ವಿರೂಪಾಕ್ಷೇಶ್ವರ, ಪಾರ್ವತಿ (ಭುವನೇಶ್ವರಿ) ದೇವಿಯ ದರ್ಶನವೇ ಇಲ್ಲ. ಕೊಪ್ಪಳದ ಆರಾಧ್ಯದೈವ ಗವಿಸಿದ್ದೇಶ್ವರ ದೇವಸ್ಥಾನ ಮತ್ತು ಹುಲುಗಿಯ ಗ್ರಾಮ ದೇವತೆ ಹುಲಿಗೆಮ್ಮ ದೇವಾಲಯ ಸೇರಿವೆ.

Rahul Gandhi skips Hampi Virupaksha temple visit

ದೇಶಾದ್ಯಂತ ವಿವಿಧ ಈಶ್ವರ ದೇವಾಲಯಗಳಿಗೆ ಭೇಟಿ ನೀಡಿರುವ ರಾಹುಲ್‍ ಗಾಂಧಿ ಐತಿಹಾಸಿಕ ಪ್ರಸಿದ್ಧ, ಧಾರ್ಮಿಕ ಮತ್ತು ರಾಜಕೀಯ ಪ್ರಾಮುಖ್ಯತೆಯನ್ನು ಪಡೆದಿರುವ ಹಂಪೆಗೆ ಭೇಟಿ ನೀಡುವುದನ್ನು ತಪ್ಪಿಸಿದ್ದು ಮೌಢ್ಯವೇ? ಭಯವೇ?.

ದೇಶ-ವಿದೇಶದ ನೂರಾರು ಪ್ರವಾಸಿಗರು, ಗಣ್ಯರು ಹಂಪೆಗೆ ಭೇಟಿ ನೀಡುತ್ತಾರೆ. ಎಐಸಿಸಿ ಅಧ್ಯಕ್ಷರು ಹಂಪೆಗೆ ಭೇಟಿ ನೀಡಿ, ಆರಾಧ್ಯದೈವ ವಿರೂಪಾಕ್ಷೇಶ್ವರನ ದರ್ಶನ ಪಡೆಯಬೇಕಿತ್ತು ಎನ್ನುವುದು ಅನೇಕ ಕಾಂಗ್ರೆಸ್ಸಿಗರ ಅಭಿಪ್ರಾಯ.

ಕರ್ನಾಟಕ ಬರಲಿರುವ ರಾಹುಲ್ ಗಾಂಧಿಗೆ ದಲಿತರಿಂದ ಪ್ರತಿಭಟನೆ ಸ್ವಾಗತ

ಇಂದಿರಾ ಗಾಂಧಿ ಬಂದಿದ್ದರು : ಒಮ್ಮೆ ಇಂದಿರಾ ಗಾಂಧಿ ಹಂಪೆಗೆ ಸಾಮಾನ್ಯರಂತೆ ರಹಸ್ಯವಾಗಿ ಭೇಟಿ ಮಾಡಿ, ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಿದ್ದರು. ಇಂದಿರಾ ಗಾಂಧಿ ಅವರ ಈ ಭೇಟಿ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಕ್ಕೂ ಮಾಹಿತಿ ಇರಲಿಲ್ಲ.

ಜ್ಯೋತಿಷಿಗಳ ಸಲಹೆಯಂತೆ ರಹಸ್ಯವಾಗಿ ಇಂದಿರಾ ಗಾಂಧಿ ಅವರು ಹಂಪೆಗೆ ಭೇಟಿ ನೀಡಿ, ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿ, ದೇವಸ್ಥಾನದ ಪ್ರಾಂಗಣದಲ್ಲಿ ಕೆಲ ಹೊತ್ತು ಧ್ಯಾನಾಸಕ್ತರಾಗಿ ಕೂತಿದ್ದರು ಎಂದು ಹಿರಿಯ ಕಾಂಗ್ರೆಸ್ಸಿಗರು ಈಗಲೂ ನೆನಪಿಸಿಕೊಳ್ಳುತ್ತಾರೆ.

ರಾಜೀವ್‍ ಗಾಂಧಿ ಅವರು ಬಳ್ಳಾರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿ, ಬಳ್ಳಾರಿಯಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿ, ಮರುದಿನ ಹಂಪೆಗೆ ಭೇಟಿ ನೀಡಿದ್ದರು.

ಹಕ್ಕ-ಬುಕ್ಕರು ನಿತ್ಯವೂ ಪೂಜಿಸಿ ಆರಾಧಿಸುತ್ತಿದ್ದ, ವಿದ್ಯಾರಣ್ಯರಿಂದ ನಿತ್ಯ ಅಲಂಕಾರಕ್ಕೆ ಒಳಪಡುತ್ತಿದ್ದ ವಿರೂಪಾಕ್ಷೇಶ್ವರನ ದರ್ಶನಕ್ಕೆ ರಾಹುಲ್‍ ಗಾಂಧಿ ಮುಂದಿನ ದಿನಗಳಲ್ಲಿ ಆದರೂ ಬರುವರೇ? ಕಾದು ನೋಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AICC president Rahul Gandhi will visit Ballari district on February 10, 2018. But he will not visit heritage city Hampi's famous Virupaksha Temple.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ