ರಾಹುಲ್ ಆಗಮನ: ಹೊಸಪೇಟೆ ಮುನ್ಸಿಪಲ್ ಮೈದಾನದಲ್ಲಿ ಅಂತಿಮ ಸಿದ್ಧತೆ

Posted By: Nayana
Subscribe to Oneindia Kannada

ಹೊಸಪೇಟೆ, ಫೆಬ್ರವರಿ 10: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ನಾಲ್ಕು ದಿನ ಜನಾಶೀರ್ವಾದ ಯಾತ್ರೆ ನಡೆಸಿಲಿದ್ದಾರೆ. ಮೊದಲ ದಿನದ ಯಾತ್ರೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯಲಿದೆ.

12.30 ರ ಸುಮಾರಿಗೆ ದೆಹಲಿಯಿಂದ ನೇರವಾಗಿ ಬಳ್ಳಾರಿಯ ತೋರಣಗಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರನ್ನು ಬರಮಾಡಿಕೊಳ್ಳಲಿದ್ದಾರೆ. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಹೊಸ ಪೇಟೆ ಆಗಮಿಸಲಿದ್ದಾರೆ. ಹೊಸಪೇಟೆಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ.

ಹೊಸಪೇಟೆಯಲ್ಲಿ ರಾಹುಲ್ ಸಮಾವೇಶ, ವಿಶೇಷತೆಗಳೇನು?

ಕಾಂಗ್ರೆಸ್ ಸ್ಟಿಕ್ಕರ್ ಅಳವಡಿಸಿ, ನೀರಿನ ಬಾಟಲಿಯನ್ನು ನೀಡಲಾಗುತ್ತಿದೆ ಅಲ್ಲಿಯೂ ಕಾಂಗ್ರೆಸ್ ತಮ್ಮ ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್ ಹಾಗೂ ವೇಣುಗೋಪಾಲ್ ಅವರು ಅರ್ಧಗಂಟೆ ಮುಂಚಿತವಾಗಿಯೇ ಬಂದು, ಮೈದಾನದ ಅಂತಿಮ ಸಿದ್ಧತೆಯನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸ್ ಸರ್ಪಗಾವಲಿನಲ್ಲಿ ಸಿದ್ಧತೆಗಳು ನಡೆಯುತ್ತಿದೆ.

Rahul first visit to Karnataka as AICC chief

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rahul gandhi will address rally at Hospete in Ballari district on saturday 1 pm. This is first visit of Rahul gandhi as AICC chief and visiting next four days many district in North Karnataka

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ