ಹಂಪಿ ಉತ್ಸವದಲ್ಲಿ ವಿದೇಶಿ ಮಹಿಳೆ ಜತೆ ಅರ್ಚಕ ಲವ್ವಿ ಡವ್ವಿ

By: ಬಳ್ಳಾರಿ ಪ್ರತಿನಿಧಿ
Subscribe to Oneindia Kannada

ಬಳ್ಳಾರಿ. ನವೆಂಬರ್ 04 : ಮೂರು ದಿನಗಳ ಹಂಪಿ ಉತ್ಸವದ ಮೊದಲ ದಿನವೇ ಅವಾಂತರ ನಡೆದಿದೆ. ದೇವಾಲಯದ ಅರ್ಚಕನೊಬ್ಬ ವಿದೇಶೀ ಮಹಿಳೆಯ ಜತೆ ಲವ್ವಿ ಡವ್ವಿಯಲ್ಲಿ ತೊಡಗಿದ್ದಾಗ ಸ್ಥಳೀಯರಿಗೆ ಸಿಕ್ಕಿ ಬಿದ್ದಿದ್ದಾನೆ.

ಮದ್ದೇವಣಾಪುರ ಮಠದಲ್ಲಿ ರಾಸಲೀಲೆ, ಸ್ವಾಮೀಜಿ ನಾಪತ್ತೆ

ಹಂಪಿ ಉತ್ಸವದ ಎದುರು ಬಸವಣ್ಣ ವೇದಿಕೆ ಹಿಂಭಾಗದ ಬಸವಣ್ಣ ದೇವಸ್ಥಾನದ ಮೇಲ್ಬಾಗದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಪ್ರಶ್ನಿಸಿದಾಗ ಆಕೆ ತನ್ನ ಗೆಳತಿ ಎಂದು ಅರ್ಚಕ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ಜನರ ಗುಂಪಿನಿಂದ ತಪ್ಪಿಸಿಕೊಂಡು ಹೋಗುವ ಸಮಯದಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾನೆ.

priest was caught when he was in physical relationship with foreign woman in Hampi

ವಿದೇಶೀ ಮಹಿಳೆ ರಷ್ಯಾದ ಅರ್ಚಕನೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ಪ್ರಶ್ನಿಸಿದ್ದಕ್ಕೆ ಉತ್ಸವಕ್ಕೆಂದು ಬಂದಿದ್ದ ಹೊಸಪೇಟೆ ನಗರ ರಾಣಿಪೇಟೆಯ ರಾಜಶೇಖರ್ ಮೇಲೆ ಅರ್ಚಕ ಹಲ್ಲೆ ಮಾಡಿದ್ದಾನೆ.

ಗಾಯಗೊಂಡಿದ್ದ ರಾಜಶೇಖರ್ ರಷ್ಯಾದ ಯುವತಿಯನ್ನ ಅಡ್ಡಗಟ್ಟಿ ಗಲಾಟೆ ಮಡುತ್ತಿದ್ದ. ವೇಳೆ ಸ್ಥಳಕ್ಕೆ ಪೋಲಿಸರು ಬಂದು ರಷ್ಯಾದ ಯುವತಿಯನ್ನ ಠಾಣೆಗೆ ಕರೆದೊಯ್ದಿದರು.

ಹಲ್ಲೆ ನಡೆಸಿದ ಯುವತಿ ಹಾಗೂ ಪೂಜಾರಿ ಮೇಲೆ ಪ್ರಕರಣ ದಾಖಲಿಸಿಕೊಳ್ಳವುಂತೆ ಹಲ್ಲೆಗೊಳಗಾದ ರಾಜಶೇಖರ್ ಅವರು ಪೊಲೀಸರಿಗೆ ಒತ್ತಾಯಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Controversy dogged the first day of the three-day Hampi Utsav as locals trashed a priest who was caught in a compromising position in public with a foreign woman.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ