ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬೇಸಿಗೆಯಲ್ಲಿ ಕ್ಯಾಂಡಲ್ ಕೊಳ್ಳೋದು ಬೇಡ!

|
Google Oneindia Kannada News

dk shivakumar
ಬಳ್ಳಾರಿ, ಫೆ.4 : ಕರ್ನಾಟಕದಲ್ಲಿ ಪ್ರಸ್ತುತ ವಿದ್ಯುತ್‌ ಕೊರತೆಯಿಲ್ಲ, ಬೇಸಿಗೆಯಲ್ಲಿ ವಿದ್ಯುತ್‌ ಕೊರತೆ ಉಂಟಾಗದಂತೆ ಅನ್ಯ ರಾಜ್ಯಗಳ ವಿದ್ಯುತ್‌ ಉತ್ಪಾದಕ ರೊಡನೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಒಂದು ವಾರದಲ್ಲಿ ನೂತನ ವಿದ್ಯುತ್ ನೀತಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಬಳ್ಳಾರಿಯ ಕುಡತಿನಿಯಲ್ಲಿರುವ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ನೂತನ ವಿದ್ಯುತ್‌ ನೀತಿ ಪ್ರಕಟಿಸಲಾಗುವುದು ಎಂದು ಹೇಳಿದರು.

ಹೊಸ ನೀತಿ ಪ್ರಕಾರ ಸೌರಶಕ್ತಿ, ಜಲ, ಕಲ್ಲಿದ್ದಲು ಆಧರಿತ ಶಾಖೋತ್ಪನ್ನ ಕೇಂದ್ರಗಳು ಸೇರಿದಂತೆ ಅಸಾಂಪ್ರದಾಯಿಕ ಮೂಲಗಳಿಂದಲೂ ಹೆಚ್ಚು ವಿದ್ಯುತ್‌ ಉತ್ಪಾದಿಸಲು ಚಿಂತನೆ ನಡೆಸಲಾಗಿದೆ. ಸದ್ಯ ವಿದ್ಯುತ್ ಸೋರಿಕೆ ಪ್ರಮಾಣ ಶೇ 18-19ರಷ್ಟು ಇಳಿಕೆಯಾಗಿದ್ದು, ಸಂಸ್ಥೆಗೆ ಆಗುವ ನಷ್ಟದ ಪ್ರಮಾಣ ಕಡಿಮೆಯಾಗಿದೆ ಎಂದರು. [ಕರ್ನಾಟಕ 2017ಕ್ಕೆ ವಿದ್ಯುತ್ ಸ್ವಾವಲಂಬಿ ರಾಜ್ಯ]

ಕರ್ನಾಟಕದಲ್ಲಿ ಪ್ರಸ್ತುತ ವಿದ್ಯುತ್‌ ಕೊರತೆಯಿಲ್ಲ, ಮುಂಬರುವ ಬೇಸಿಗೆಯಲ್ಲಿಯೂ ವಿದ್ಯುತ್‌ ಕೊರತೆ ಉಂಟಾಗದಂತೆ, ಅನ್ಯ ರಾಜ್ಯಗಳ ವಿದ್ಯುತ್‌ ಉತ್ಪಾದಕ ರೊಡನೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದ್ದರಿಂದ ಬೇಸಿಗೆಯಲ್ಲಿಯೂ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಉಂಟಾಗುವುದಿಲ್ಲ ಎಂದು ಅವರು ಹೇಳಿದರು.

ಬಾಕಿ ವಸೂಲಿಗೆ ಕ್ರಮ : ಇಲಾಖೆಗೆ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡವರಿಂದ ಬಿಲ್ ವಸೂಲಿ ಮಾಡಲು ಇಲಾಖೆ ಯೋಜನೆ ರೂಪಿಸಿದೆ. ಸ್ಥಳೀಯ ಸಂಸ್ಥೆಗಳ 3,900 ಕೋಟಿ ರೂ. ಸೇರಿ ರಾಜ್ಯಾದ್ಯಂತ 11,300ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇದೆ. ಜಿಂದಾಲ್ ಕಾರ್ಖಾನೆಯವರು ವಿದ್ಯುತ್ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದರೆ ಅದನ್ನೂ ವಸೂಲು ಮಾಡಲಾಗುವುದು ಎಂದು ತಿಳಿಸಿದರು.

English summary
The State government will shortly announce its new power policy with thrust on tapping non-conventional energy said, D.K. Shivakumar, Minister for Energy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X