ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಢೋಂಗಿ ಮಾತನಾಡುವ ಮೋದಿ ಪಕ್ಷದಲ್ಲಿ ಹೆಗಡೆಯಂಥ ನಾಲಾಯಕ್: ಸಿದ್ದರಾಮಯ್ಯ

|
Google Oneindia Kannada News

Recommended Video

ಢೋಂಗಿ ಮಾತನಾಡುವ ಮೋದಿ ಪಕ್ಷದಲ್ಲಿ ಹೆಗಡೆಯಂಥ ನಾಲಾಯಕ್: ಸಿದ್ದರಾಮಯ್ಯ | Oneindia Kannada

ಬಳ್ಳಾರಿ, ಫೆಬ್ರವರಿ 10 : ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ ಎಂದರು ನರೇಂದ್ರ ಮೋದಿ. ಆದರೆ ಮೋದಿ ಅವರೇ ನೀವು ಮುಖ್ಯಮಂತ್ರಿ ಆಗಿದ್ದಾಗ ಏನಾಗಿತ್ತು ಗುಜರಾತ್, ಬಿಹಾರ್ ನಲ್ಲಿ ಏನಾಗ್ತಿದೆ, ಮಧ್ಯಪ್ರದೇಶ- ಉತ್ತರಪ್ರದೇಶದಲ್ಲಿ ಏನಾಗ್ತಿದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಹೊಸಪೇಟೆಯಲ್ಲಿ ಶನಿವಾರ ಕಾಂಗ್ರೆಸ್ ನ ಜನಾಶೀರ್ವಾದ ಸಭೆಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರು ನಿಮ್ಮ ರಾಜ್ಯದವರು. ಮರ್ಡರ್ ಕೇಸಲ್ಲಿ ಜೈಲಿಗೆ ಹೋಗಿದ್ದು ಮರೆತರಾ? ಅವರು ಗಡೀಪಾರು ಆಗಿದ್ದು ಮರೆತರಾ? ಗೋಧ್ರಾ ಹತ್ಯಾಕಾಂಡ ಮರೆತುಬಿಟ್ಟರಾ? ಎಂದು ವ್ಯಂಗ್ಯವಾಡಿದರು.

In Pics : ಹೊಸಪೇಟೆಯಲ್ಲಿ ರಾಹುಲ್ ಜನಾಶೀರ್ವಾದ ಯಾತ್ರೆ

ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿಯೂ ಭಾಷಣ ಮಾಡಲಿಲ್ಲ, ಒಂದು ಪಕ್ಷದ ಮುಖಂಡರಾಗಿಯೂ ಭಾಷಣ ಮಾಡಲಿಲ್ಲ. ತುಂಬ ಬೇಜವಾಬ್ದಾರಿಯಿಂದ, ಕೀಳು ಮಟ್ಟದ ಭಾಷಣ ಮಾಡಿದರು. ಅವರ ಒಂದು ಪಕ್ಕದಲ್ಲಿ ಯಡಿಯೂರಪ್ಪ, ಮತ್ತೊಂದು ಪಕ್ಕದಲ್ಲಿ ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಮಣ್ಯಂ ನಾಯ್ಡು ಕೂತಿದ್ದರು. ಆದರೆ ಸಿದ್ದರಾಮಯ್ಯ ಸರಕಾರ ಭ್ರಷ್ಟ ಸರಕಾರ ಎಂದರು.

LIVE : ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಬ್ಬರLIVE : ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಬ್ಬರ

ಅವರಿಗೆ ನಾಚಿಕೆ ಆಗಬೇಕು. ಆದ್ದರಿಂದ ಈ ದೇಶದ ಪ್ರಧಾನಿ ಆಗಲು ನರೇಂದ್ರ ಮೋದಿ ಅರ್ಹರಲ್ಲ ಎಂದು ಹೇಳಿದೆ ಎಂಬುದಾಗಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಅವರ ಭಾಷಣದ ಪ್ರಮುಖಾಂಶಗಳು ಇಲ್ಲಿವೆ.

ಅನಂತಕುಮಾರ್ ಹೆಗಡೆ ನಾಲಾಯಕ್

ಅನಂತಕುಮಾರ್ ಹೆಗಡೆ ನಾಲಾಯಕ್

ಕೋಮುವಾದಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬಾರದು. ಏಕೆಂದರೆ ಅದು ಜಾತ್ಯತೀತ ತತ್ವಕ್ಕೆ ವಿರುದ್ಧವಾದ ಪಕ್ಷ. ಮನುಷ್ಯತ್ವ ಇಲ್ಲದ ಪಕ್ಷ. ಚುನಾವಣೆಗಾಗಿ ನರೇಂದ್ರ ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಢೋಂಗಿ ಮಾತನಾಡ್ತಾರೆ. ನಿಮ್ಮ ಪಕ್ಷದಲ್ಲೇ ಇರುವ ಅನಂತಕುಮಾರ್ ಹೆಗಡೆ ನಾಲಾಯಕ್. ಗ್ರಾಮಪಂಚಾಯಿತಿ ಸದಸ್ಯನಾಗಲು ನಾಲಾಯಕ್.

ಅಲ್ಪಸಂಖ್ಯಾತರು ನಮಗೆ ಬೇಡ ಅಂತಾರೆ

ಅಲ್ಪಸಂಖ್ಯಾತರು ನಮಗೆ ಬೇಡ ಅಂತಾರೆ

ಅವರು ಹೇಳ್ತಾರೆ, ನಾವು ಸಂವಿಧಾನ ಬದಲಾಯಿಸ್ತೀವಿ ಅಂತಾರೆ. ಮುಸಲ್ಮಾನರು, ಕ್ರಿಶ್ಚಿಯನ್ನರು, ಅಲ್ಪಸಂಖ್ಯಾತರು ಇವರ್ಯಾರು ನಮಗೆ ಬೇಡ ಅಂತೀರಿ. ಇಂಥ ಪಕ್ಷ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ಕರ್ನಾಟಕದ ಜನ ಸಂಕಲ್ಪ ಮಾಡಬೇಕು. ರಾಹುಲ್ ಗಾಂಧಿ ಅವರ ಕೈ ಬಲಪಡಿಸಬೇಕು ಎಂದರು.

ಕೋಮು ಸಂಘರ್ಷ ಸೃಷ್ಟಿಸಿ ಅಧಿಕಾರ ಹಿಡಿಯುವ ಯತ್ನ

ಕೋಮು ಸಂಘರ್ಷ ಸೃಷ್ಟಿಸಿ ಅಧಿಕಾರ ಹಿಡಿಯುವ ಯತ್ನ

ಕರ್ನಾಟಕದಲ್ಲಿ ಕೋಮು ಸಂಘರ್ಷ ಸೃಷ್ಟಿಸಿ, ಅಧಿಕಾರ ಹಿಡಿಯಬೇಕು ಎಂಬ ಬಿಜೆಪಿಯವ ಕನಸು ನನಸು ಆಗಲ್ಲ. ನಮ್ಮ ಸರಕಾರದ ಬಗ್ಗೆ ಸಮಾಧಾನವಿದೆ. ನಮ್ಮ ವಿರುದ್ಧ ಯಾವುದೇ ಆಡಳಿತ ವಿರೋಧಿ ಅಲೆ ಇಲ್ಲ. ಈ ರಾಜ್ಯದ ಜನ ನಮ್ಮ ಕಾರ್ಯಕ್ರಮಗಳನ್ನು ಮೆಚ್ಚಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಬಯಸಿದ್ದಾರೆ.

ಮಹಾದಾಯಿ ಬಗ್ಗೆ ಬಾಯಿ ಬಿಡಲಿಲ್ಲ

ಮಹಾದಾಯಿ ಬಗ್ಗೆ ಬಾಯಿ ಬಿಡಲಿಲ್ಲ

ಕುಡಿಯಲು ನೀರು ಕೊಡಿ ಎಂದು ಮಹಾದಾಯಿ ಹೋರಾಟಗಾರರು ಹೋರಾಡುತ್ತಿದ್ದಾರೆ. ಎಲ್ಲ ಪಕ್ಷಗಳ ನಿಯೋಗ ಕರೆದುಕೊಂಡು ಹೋಗಿದ್ದೆ. ಕೈ ಜೋಡಿಸಿ ಕೇಳಿಕೊಂಡೆ. ಆದರೆ ಮೋದಿ ಅವರು ಜಪ್ಪಯ್ಯ ಅಂದರೂ ಒಪ್ಪಲಿಲ್ಲ. ಇಲ್ಲಿ ಬಂದವರು ಮಹಾದಾಯಿ ಬಗ್ಗೆ ಬಾಯಿ ಬಿಡಲಿಲ್ಲ. ನಾವು ರೈತರ ಸಾಲ ಮನ್ನಾ ಮಾಡಿದೆವು.

ಒಂಬತ್ತೂ ವಿಧಾನಸಭೆಯಲ್ಲಿ ಗೆಲ್ತೀವಿ

ಒಂಬತ್ತೂ ವಿಧಾನಸಭೆಯಲ್ಲಿ ಗೆಲ್ತೀವಿ

ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ನ ಭದ್ರಕೋಟೆ. ಸೋನಿಯಾ ಗಾಂಧಿ ಇದೇ ಕ್ಷೇತ್ರದಿಂದ ಗೆದ್ದಿದ್ದರು. ಸೋನಿಯಾ- ರಾಹುಲಾ ಹಾಗೂ ಕಾಂಗ್ರೆಸ್ ಜತೆಗೆ ಬಳ್ಳಾರಿಯ ಭಾವನಾತ್ಮಕ ನಂಟಿದೆ. ಇಲ್ಲಿನ ಒಂಬತ್ತೂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಜೆಡಿಎಸ್ ಇಲ್ಲಿ ಇಲ್ಲ. ಬಿಜೆಪಿ ಇಲ್ಲಿ ಗೆಲ್ಲಲ್ಲ.

ರೆಡ್ಡಿ ಬದರ್ಸ್ ಪತನ ಆರಂಭವಾಯಿತು

ರೆಡ್ಡಿ ಬದರ್ಸ್ ಪತನ ಆರಂಭವಾಯಿತು

ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಯಥೇಚ್ಛವಾಗಿ ನಡೆಯುತ್ತಿತ್ತು. ಬಳ್ಳಾರಿಗೆ ಬೆಂಗಳೂರಿಂದ ಪಾದ ಯಾತ್ರೆ ಮಾಡಿದೆವು. ರೆಡ್ಡಿ ಬ್ರದರ್ಸ್ ಗೆ ಸವಾಲು ಹಾಕಿದೆವು. ಆಗಿಂದ ಅವರ ಪತನ ಆರಂಭವಾಯಿತು. ಸಂತೋಷ್ ಹೆಗ್ಡೆ ಅವರು ತಮ್ಮ ವರದಿಯಲ್ಲಿ ಹೇಳಿದ್ದಾರೆ. ಬಳ್ಳಾರಿಯೇ ಒಂದು ದೇಶ. ರೆಡ್ಡಿ ಬ್ರದರ್ಸ್, ಯಡಿಯೂರಪ್ಪ ಕೊಳ್ಳೆ ಹೊಡೆದಿದ್ದಾರೆ. ರಿಪಬ್ಲಿಕ್ ಆಫ್ ಬಳ್ಳಾರಿ ಎಂಬ ಕಳಂಕ ತೊಲಗಿಸಬೇಕು. ಇಲ್ಲಿನ ಜನ ನೆಮ್ಮದಿಯಾಗಿ ಮಲಗುವಂತಾಗಬೇಕು.

ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡಿದ್ದೀವಿ

ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡಿದ್ದೀವಿ

ಇದು ಚುನಾವಣೆ ಸಭೆಯೇ. ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ಅವರು ಕರ್ನಾಟಕ ಬಂದಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಐದು ವರ್ಷ ತುಂಬುತ್ತಿದೆ. ಹದಿಮೂರನೇ ತಾರೀಕಿಗೆ ನಾಲ್ಕು ವರ್ಷ ಒಂಬತ್ತು ತಿಂಗಳು ತುಂಬುತ್ತದೆ. ನಮಗಿಂತ ಮುಂಚೆ ಐದು ವರ್ಷ ಬಿಜೆಪಿ ಅಧಿಕಾರದಲ್ಲಿತ್ತು. ನಾವು ಜನರ ನಿರೀಕ್ಷೆಗೆ ತಕ್ಕಂತೆ ಜನಪರ ಆಡಳಿತ ನೀಡಿದ್ದೇವೆ.

ನಮ್ಮ ಯೋಜನೆ ರಾಜ್ಯದ ಶೇ ತೊಂಬತ್ತರಷ್ಟು ಜನರಿಗೆ ತಲುಪಿದೆ

ನಮ್ಮ ಯೋಜನೆ ರಾಜ್ಯದ ಶೇ ತೊಂಬತ್ತರಷ್ಟು ಜನರಿಗೆ ತಲುಪಿದೆ

ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ಕರ್ನಾಟಕದ ಇತಿಹಾಸದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡ ಪಕ್ಷ ಇದ್ದರೆ ಅದು ನಮ್ಮ ಸರಕಾರ. ನಮ್ಮ ಸರಕಾರದ ಯಾವುದೇ ಕಾರ್ಯಕ್ರಮ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾದದ್ದಲ್ಲ. ರಾಜ್ಯದ ಒಟ್ಟು ಜನ ಸಂಖ್ಯೆಯ ಶೇ ತೊಂಬತ್ತರಷ್ಟು ಜನರಿಗೆ ಒಂದಲ್ಲ ಒಂದು ಯೋಜನೆ ಕೊಟ್ಟಿದ್ದೇವೆ.

ಲೂಟಿ ಹೊಡೆದ ಬಿಜೆಪಿ ಸರಕಾರ

ಲೂಟಿ ಹೊಡೆದ ಬಿಜೆಪಿ ಸರಕಾರ

ನವ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಕಾರ್ಯಕ್ರಮಗಳ ಮೂಲಕ ಭಾಷ್ಯ ಬರೆದಿದ್ದೇವೆ. ಇದು ಮುಂದುವರಿಯಬೇಕಾದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅನ್ನೋದು ನಾವು ಅರ್ಥ ಮಾಡಿಕೊಳ್ಳಬೇಕು. ಜನರು ಬಿಜೆಪಿಯ ಆಡಳಿತ ನೋಡಿದ್ದಾರೆ. ಈ ನಾಡಿನ ಸಂಪತ್ತನ್ನು ಅತಿ ಹೆಚ್ಚು ಲೂಟಿ ಹೊಡೆದ ಸರಕಾರ ಇದ್ದರೆ ಅದು ಬಿಜೆಪಿ ಸರಕಾರ.

English summary
Narendra Modi unfit to be the prime minister on India, alleges Karnataka chief minister Siddaramaiah at Hospet Congress Janashirvada yatre on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X