ಮನಿ ಲಾಂಡ್ರಿಂಗ್ ಕೇಸ್: ಬಿ ಶ್ರೀರಾಮುಲು ಗನ್ ಮ್ಯಾನ್ ಬಂಧನ

Posted By:
Subscribe to Oneindia Kannada

ಬಳ್ಳಾರಿ, ಡಿಸೆಂಬರ್ 20: ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಬಿ ಶ್ರೀರಾಮುಲು ಅವರ ಗನ್ ಮ್ಯಾನ್ ನನ್ನು ಸಿಐಡಿ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಕರ್ನಾಟಕ ಭೂಸ್ವಾಧೀನ ಪ್ರಾಧಿಕಾರದ ವಿಶೇಷ ಅಧಿಕಾರಿ ಭೀಮಾನಾಯ್ಕ್ ಅವರ ಕಾರು ಚಾಲಕನ ಆತ್ಮಹತ್ಯೆ ಪ್ರಕರಣ ಹಾಗೂ ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗನ್ ಮ್ಯಾನ್ ಚನ್ನಬಸಪ್ಪ ಹೊಸಮನಿ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ.[ಚಾಲಕ ರಮೇಶ್ ಆತ್ಮಹತ್ಯೆ ಕೇಸ್, ಕೆಎಎಸ್ ಅಧಿಕಾರಿ ಅಮಾನತು!]

MP Sriramulu Gunman arrest in connection with Money Laundering Case

ಕಪ್ಪು ಹಣವನ್ನು ಬಿಳಿ ಮಾಡಿಕೊಡುವ ದಂಧೆಯ ಬಗ್ಗೆ ಪೂರ್ಣ ಮಾಹಿತಿ ಹೊಂದಿದ್ದ ಕಾರು ಚಾಲಕ ರಮೇಶ್ ಗೌಡ ಅವರು ಅಧಿಕಾರಿಗಳ ಭಯದಿಂದ ಮದ್ದೂರಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟ್ ನಲ್ಲಿ ಶ್ರೀರಾಮುಲು, ಜನಾರ್ದನ ರೆಡ್ಡಿ ಸೇರಿದಂತೆ ಅಧಿಕಾರಿಗಳ ಹೆಸರನ್ನು ನಮೂದಿಸಿದ್ದರು. ಸದ್ಯ ಈ ಪ್ರಕರಣದಲ್ಲಿ ಭೀಮಾನಾಯ್ಕ್ ಅವರನ್ನು ಬಂಧಿಸಲಾಗಿದೆ.

ಮುಖ್ಯಮಂತ್ರಿಗಳ ಆಪ್ತ ಚಿಂಚೋಳಿಯ ಶಾಸಕ ಹಾಗು ಸಂಸದೀಯ ಕಾರ್ಯದರ್ಶಿ ಉಮೇಶ್ ಜಾಧವ್ ಅವರ ಅಳಿಯನ ಮನೆಯಲ್ಲಿ ಆಶ್ರಯ ಪಡೆದಿದ್ದರು.[ರಮೇಶ್ ಗೌಡ ಬರೆದ ಡೆತ್ ನೋಟ್ ನಲ್ಲಿ ಏನಿದೆ?]

ಕಲಬುರಗಿ ನಗರದ ಎನ್ ಜಿಒ ಕಾಲೋನಿಯಲ್ಲಿರುವ ಉಮೇಶ್ ಜಾದವ್ ಅಳಿಯನ ಮನೆಯಲ್ಲಿಯೇ ಭೀಮಾನಾಯ್ಕ್ ಆಶ್ರಯ ಪಡೆದಿದ್ದರು. ಭೀಮಾನಾಯ್ಕ್ ರನ್ನು ಬಂಧಿಸುವಾಗ ಶಾಸಕ ಉಮೇಶ ಜಾಧವ ಅವ್ರ ಪತ್ನಿ ಮತ್ತು ತಾಯಿ ಸಹ ಅದೇ ಮನೆಯಲ್ಲಿದ್ದರು.['ಇಲ್ಲಿ ನೂರು ಕೋಟಿ, ಅಲ್ಲಿನ 70 ಕೋಟಿ ಜನಾ ರೆಡ್ಡಿಯದೇ']

ಗಾಲಿ ಜನಾರ್ದನರೆಡ್ಡಿಯ ಮಗಳ ಮದುವೆಯ ಸಂದರ್ಭದಲ್ಲಿ 100ಕೋಟಿ ರೂ. ಕಪ್ಪುಹಣವನ್ನು ಹೊಸ ನೋಟುಗಳಾಗಿ ಬದಲಾವಣೆ ಮಾಡಲು ಭೀಮಾನಾಯ್ಕ್ ಸಹಕರಿಸಿದ ಆರೋಪ ಹೊತ್ತಿದ್ದಾರೆ. ಭೀಮಾನಾಯ್ಕ್ ಹಾಗೂ ಕಾರು ಚಾಲಕ ಮಹಮದ್ ನಂತರ ಈಗ ಗನ್ ಮ್ಯಾನ್ ಚನ್ನಬಸಪ್ಪ ಅವರನ್ನು ಬಂಧಿಸಲಾಗಿದೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CID police today arrested BJP MP B Sriramulu's gunman Channabasavappa today in connection with Money Laundering Case in which suspended KAS officer Bheema Naik is the prime accused
Please Wait while comments are loading...